ಮಿಲ್ಕಿ ಬ್ಯೂಟಿ ತಮನ್ನಾ ಧರಿಸಿರುವ ಈ ಗ್ಲಾಮರಸ್ ಉಡುಗೆಯ ಬೆಲೆ ಎಷ್ಟು ಲಕ್ಷ ರೂಪಾಯಿ ಊಹಿಸಬಲ್ಲಿರೇ?

15 Mar 2024

Author : Manjunatha

ನಟಿ ತಮನ್ನಾ ಇತ್ತೀಚೆಗಷ್ಟೆ ತಮ್ಮ ಬಾಯ್​ಫ್ರೆಂಡ್ ವಿಜಯ್​ ವರ್ಮಾ ನಟಿಸಿರುವ ‘ಮರ್ಡರ್ ಮುಬಾರಕ್’ ಸಿನಿಮಾ ಪ್ರೀಮಿಯರ್​ನಲ್ಲಿ ಭಾಗವಹಿಸಿದ್ದರು.

‘ಮರ್ಡರ್ ಮುಬಾರಕ್’

‘ಮರ್ಡರ್ ಮುಬಾರಕ್’ ಸಿನಿಮಾದ ಪ್ರೀಮಿಯರ್ ಶೋನಲ್ಲಿ ತಮನ್ನಾ ಭಾಟಿಯಾ ಧರಿಸಿದ್ದ ಬಿಳಿ ಬಣ್ಣದ ಗ್ಲಾಮರಸ್ ಉಡುಗೆ ಸಖತ್ ಗಮನ ಸೆಳೆಯಿತು.

ಪ್ರೀಮಿಯರ್ ಶೋ

ಹತ್ತಿಯಿಂದ ಮಾಡಿದ್ದಂತೆ ಕಾಣುತ್ತಿದ್ದ ಕುಸುರಿ ಕೆಲಸವಿದ್ದ ಗ್ಲಾಮರಸ್ ಉಡುಗೆಯನ್ನು ನಟಿ ತಮನ್ನಾ ಭಾಟಿಯಾ ಉಟ್ಟಿದ್ದರು. ಮೇಲೊಂದು ಬಿಳಿ ಕೋಟು ಧರಿಸಿದ್ದರು.

    ಗ್ಲಾಮರಸ್ ಉಡುಗೆ

ಅಂದಹಾಗೆ ತಮನ್ನಾ ಧರಿಸಿರುವ ಈ ಗ್ಲಾಮರಸ್ ಉಡುಗೆಯ ಬೆಲೆ ಬರೋಬ್ಬರಿ 2.04 ಲಕ್ಷ ರೂಪಾಯಿಗಳು. ಭಾರಿ ದುಬಾರಿ ಬೆಲೆಯನ್ನೇ ತಮನ್ನಾ ಬಟ್ಟೆಗೆ ವ್ಯಯಿಸಿದ್ದಾರೆ.

ಬರೋಬ್ಬರಿ 2.04 ಲಕ್ಷ

ತಮನ್ನಾ ಧರಿಸಿರುವ ಈ ಬಿಳಿ ಬಣ್ಣದ ಉಡುಗೆಯ ಹೆಸರು ಮ್ಯಾಜಿಕಲ್ ಆಫ್ ವೈಟ್ ಅಕಾಲಿಯಾ ಗೌನ್. ಹೆಸರಿನಷ್ಟೆ ಉದ್ದವಿದೆ ತಮನ್ನಾ ಧರಿಸಿರುವ ಉಡುಪು.

ಉಡುಗೆಯ ಹೆಸರು ಏನು?

ತಮನ್ನಾ ಧರಿಸಿರುವ ಉಡುಪನ್ನು ವಿನ್ಯಾಸ ಮತ್ತು ಮಾರಾಟ ಮಾಡಿರುವುದು ಕಲ್ಟ್ ಗಯಾ ಬ್ರ್ಯಾಂಡ್​. ಮಹಿಳೆಯರ ಫ್ಯಾಷನೆಬಲ್ ಉಡುಗೆಯಲ್ಲಿ ಇವರು ನಿಸ್ಸೀಮರು.

ಕಲ್ಟ್ ಗಯಾ ಬ್ರ್ಯಾಂಡ್​

ತಮನ್ನಾ ಧರಿಸಿರುವ ಉಡುಪನ್ನು ಕೈಯಲ್ಲಿಂದಲೇ ವಿನ್ಯಾಸ ಮಾಡಲಾಗಿದೆ. ಯಾವುದೇ ಯಂತ್ರಗಳನ್ನು ಇದರಲ್ಲಿ ಬಳಸಲಾಗಿಲ್ಲ.

ಕೈಯಲ್ಲಿಂದಲೇ ವಿನ್ಯಾಸ

‘ಮರ್ಡರ್ ಮುಬಾರಕ್’ ಸಿನಿಮಾದ ಪ್ರೀಮಿಯರ್ ಶೋನಲ್ಲಿ ಇನ್ನೂ ಕೆಲವು ನಟಿಯರು ಭಾಗಿಯಾಗಿದ್ದರು, ಆದರೆ ಗಮನ ಸೆಳೆದಿದ್ದು ತಮನ್ನಾ ಭಾಟಿಯಾ.

ಗಮನ ಸೆಳೆದ ತಮನ್ನಾ

ತಮನ್ನಾ ಭಾಟಿಯಾ, ಬಾಲಿವುಡ್ ನಟ ವಿಜಯ್ ವರ್ಮಾ ಪರಸ್ಪರ ಪ್ರೀತಿಸುತ್ತಿದ್ದು ಆದಷ್ಟು ಶೀಘ್ರವಾಗಿ ಈ ಇಬ್ಬರೂ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದೆ.

ವಿಜಯ್,ತಮನ್ನಾ ವಿವಾಹ

ನಟಿ ತಾರಾ ಸುತಾರಿಯಾ ಧರಿಸಿರುವ ಪುಟ್ಟ ಬ್ಯಾಗಿನ ಬೆಲೆ ಎಷ್ಟು ಲಕ್ಷ ರೂಪಾಯಿಗಳು?