ಬಾಲಿವುಡ್ ನಟಿ ತಾರಾ ಸುತಾರಿಯಾ ಧರಿಸಿರುವ ಈ ಪುಟ್ಟ ಬ್ಯಾಗಿನ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಊಹಿಸಬಲ್ಲಿರಾ?

14 Mar 2024

Author : Manjunatha

ಬಾಲಿವುಡ್ ನಟಿ ತಾರಾ ಸುತಾರಿಯಾ, ತಮ್ಮ ಸಿನಿಮಾಗಳಿಗಿಂತಲೂ ಹೆಚ್ಚಾಗಿ ಗ್ಲಾಮರಸ್ ಚಿತ್ರಗಳು, ಇನ್​ಸ್ಟಾಗ್ರಾಂ ವಿಡಿಯೋಗಳಿಂದಲೇ ಜನಪ್ರಿಯರು.

ನಟಿ ತಾರಾ ಸುತಾರಿಯಾ

ಇತ್ತೀಚೆಗೆ ತಾರಾ ಸುತಾರಿಯಾ ತಮ್ಮ ಕೆಲವು ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದರು. ಚಿತ್ರಗಳಲ್ಲಿ ಅವರು ಧರಿಸಿದ್ದ ಪುಟ್ಟ ಬ್ಯಾಗ್ ಸಖತ್ ಗಮನ ಸೆಳೆದಿದೆ.

ತಾರಾ ಹಾಟ್ ಚಿತ್ರಗಳು

ಲೆದರ್ ಜಾಕೆಟ್, ಒಳಗೊಂದು ಅಪ್ಪಟ ಬಿಳಿ ಟೀ-ಶರ್ಟ್ ಹಾಗೂ ಜೀನ್ಸ್ ಧರಿಸಿದ್ದ ತಾರಾ ಸುತಾರಿಯಾ ಹೆಗಲಿಗೆ ಒಂದು ಪುಟ್ಟ ಬ್ಯಾಗ್​ ಒಂದನ್ನು ನೇತು ಹಾಕಿಕೊಂಡಿದ್ದರು.

ತಾರಾ ಫ್ಯಾಷನ್ ಸೆನ್ಸ್

ತಾರಾ ಸುತಾರಿಯಾ ಧರಿಸಿಕೊಂಡಿದ್ದ ಆ ಪುಟ್ಟ ಲೆದರ್ ಬ್ಯಾಗಿನ ಬೆಲೆ ಬರೋಬ್ಬರಿ 3.22 ಲಕ್ಷ ರೂಪಾಯಿ. ಒಂದು ಮೊಬೈಲ್ ಅಷ್ಟೆ ಹಿಡಿಯಬಹುದಾದ ಆ ಬ್ಯಾಗಿಗೆ ಇಷ್ಟೋಂದು ಬೆಲೆಯಾ?

ಪುಟ್ಟ ಲೆದರ್ ಬ್ಯಾಗ್

ಚಿತ್ರದಲ್ಲಿ ತಾರಾ ಸುತಾರಿಯಾ ಧರಿಸಿರುವುದು ಜಗದ್ವಿಖ್ಯಾತ ಫ್ಯಾಷನ್ ಬ್ರ್ಯಾಂಡ್ ಆಗಿರುವ ಲೂಯಿ ವಿಟಾನ್​ ಬ್ರ್ಯಾಂಡ್​ನ ಅಪ್ಪಟ ಲೆದರ್ ಬ್ಯಾಗು.

ಲೂಯಿ ವಿಟಾನ್​ ಬ್ರ್ಯಾಂಡ

ತಾರಾ ಸುತಾರಿಯಾ ಧರಿಸಿರುವ ಬ್ಯಾಗಿನ ಹೆಸರು ಲೂಯಿ ವಿಟಾನ್ ಪಿಟೈಟ್ ಮಿಲ್ಲೆ ಸೂಪ್ ಬ್ಯಾಗ್. ಹಲವು ಬಣ್ಣಗಳಲ್ಲಿ ಈ ಮಾದರಿಯ ಬ್ಯಾಗ್ ಲಭ್ಯವಾಗುತ್ತದೆ.

ಬ್ಯಾಗಿನ ಹೆಸರು ಏನು?

2019ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ತಾರಾ ಸುತಾರಿಯಾ ಬಾಲಿವುಡ್​ನಲ್ಲಿ ಈ ವರೆಗೆ ಕೇವಲ ಆರು ಸಿನಿಮಾಗಳಲ್ಲಿ ಮಾತ್ರವೇ ನಟಿಸಿದ್ದಾರೆ.

6 ಸಿನಿಮಾಗಳಲ್ಲಿ ನಟನೆ

2010ರಿಂದಲೂ ತಾರಾ ಸುತಾರಿಯಾ ಹಲವು ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಕೆಲವು ಮ್ಯೂಸಿಕ್ ವಿಡಿಯೋಗಳಲ್ಲಿಯೂ ಡ್ಯಾನ್ಸ್ ಮಾಡಿದ್ದಾರೆ.

ತಾರಾ ಸುತಾರಿಯಾ

ತಾರಾ ಸುತಾರಿಯಾ ಪ್ರಸ್ತುತ ದೊಡ್ಡ ಅವಕಾಶಗಳಿಗಾಗಿ ಕಾದು ಕೂತಿದ್ದಾರೆ. 2023ರ ಲ್ಲಿ ‘ಅಪೂರ್ವ’ ಸಿನಿಮಾದ ಬಳಿಕ ತಾರಾಗೆ ಯಾವುದೇ ಹೊಸ ಅವಕಾಶ ಲಭಿಸಿಲ್ಲ.

‘ಅಪೂರ್ವ’ ಸಿನಿಮಾ

ನೋರಾ ಫತೇಹಿ ಧರಿಸಿರುವ ಈ ಪಾರದರ್ಶಕ ಉಡುಗೆಯ ಬೆಲೆ ಎಷ್ಟು ಲಕ್ಷ ರೂಪಾಯಿಗಳು ನಿಮಗೆ ಗೊತ್ತೆ?