ದೀಪಿಕಾ, ಆಲಿಯಾ, ಕತ್ರಿನಾ ಹಾದಿಯಲ್ಲಿ ಕೃತಿ ಸೆನನ್​: ಕೋಟ್ಯಂತರ ಹಣ ಹೂಡಿಕೆ

29 DEC 2023

Author : Manjunatha

ದೀಪಿಕಾ ಪಡುಕೋಣೆ, ಆಲಿಯಾ ಭಟ್, ಕತ್ರಿನಾ ಕೈಫ್ ಅವರುಗಳು ಸೌಂದರ್ಯವರ್ಧಕ ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಸೌಂದರ್ಯವರ್ಧಕ 

ಇವರಷ್ಟೆ ಅಲ್ಲದೆ ಇನ್ನೂ ಕೆಲವು ಬಾಲಿವುಡ್ ನಟಿಯರು ತಮ್ಮದೇ ಆದ ಸ್ಕಿನ್ ಕೇರ್​ ಬ್ರ್ಯಾಂಡ್​ಗಳನ್ನು ಹೊಂದಿದ್ದಾರೆ.

ಬಾಲಿವುಡ್ ನಟಿ

ಇದೀಗ ನಟಿ ಕೃತಿ ಸೆನನ್ ಸಹ ತಮ್ಮದೇ ಆದ ಹೊಸ ಸ್ಕಿನ್ ಕೇರ್ ಬ್ರ್ಯಾಂಡ್ ಒಂದನ್ನು ನಿರ್ಮಿಸಿದ್ದಾರೆ.

ಸ್ಕಿನ್ ಕೇರ್ ಬ್ರ್ಯಾಂಡ್

‘ಹೈಫನ್’ ಹೆಸರಿನ ಹೊಸ ಸ್ಕಿನ್ ಕೇರ್ ಬ್ರ್ಯಾಂಡ್ ಮೇಲೆ ಕೃತಿ ಸೆನನ್ ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದಾರೆ.

ಕೋಟ್ಯಂತರ ರೂಪಾಯಿ

ಸನ್ ಕ್ರೀಂ, ಲಿಪ್ ಬಾಮ್, ಡೇ ಕೇರ್, ಫೇರ್​ನೆಸ್ ಕ್ರೀಂ ಹೀಗೆ ಹಲವು ಉತ್ಪನ್ನಗಳನ್ನು ‘ಹೈಫನ್’ ಮಾರಾಟ ಮಾಡುತ್ತಿದೆ.

‘ಹೈಫನ್’ ಬ್ರ್ಯಾಂಡ್

ಕೆಲವು ಮೂಲಗಳ ಪ್ರಕಾರ, ನಟಿ ಕೃತಿ ಸೆನನ್ ಈ ಸಂಸ್ಥೆಯಲ್ಲಿ ಸುಮಾರು 15 ಕೋಟಿ ಹೂಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ನಟಿ ಕೃತಿ ಸೆನನ್

ಕೃತಿ ಸೆನನ್ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ನಟನೆ ಜೊತೆಗೆ ಬ್ಯುಸಿನೆಸ್​ನಲ್ಲೂ ಆಸಕ್ತಿ ಹೊಂದಿದ್ದಾರೆ.

ಸಖತ್ ಬ್ಯುಸಿಯಾಗಿದ್ದಾರೆ

ಕೃತಿ ಸೆನನ್ ಇದೇ ವರ್ಷ ತಮ್ಮ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

ನಟನೆಗೆ ರಾಷ್ಟ್ರಪ್ರಶಸ್ತಿ

ಮತ್ತೆ ದಕ್ಷಿಣದತ್ತ ಮುಖ ಮಾಡಿದ ಬಾಲಿವುಡ್​ನ ಪ್ರತಿಭಾವಂತ ನಟಿ ವಿದ್ಯಾ ಬಾಲನ್