ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಬರುತ್ತಿದ್ದಾರೆ ಬಾಲಿವುಡ್ ನಟಿ ವಿದ್ಯಾ, ದೊಡ್ಡ ಸ್ಟಾರ್ ಜೊತೆ ಸಿನಿಮಾ: ಯಾವುದದು?

28 DEC 2023

Author : Manjunatha

ಬಾಲಿವುಡ್​ನ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ವಿದ್ಯಾ ಬಾಲನ್ ಸಹ ಒಬ್ಬರು.

ವಿದ್ಯಾ ಬಾಲನ್

ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿರುವ ವಿದ್ಯಾಗೆ ಇತ್ತೀಚೆಗೆ ಅವಕಾಶಗಳು ತುಸು ಕಡಿಮೆಯಾಗಿವೆ.

ಅವಕಾಶಗಳು ಕಡಿಮೆ

ವಿದ್ಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಕಾಮಿಡಿ ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳುತ್ತಿರುತ್ತಾರೆ.

ಸಾಮಾಜಿಕ ಜಾಲತಾಣ

ಬಾಲಿವುಡ್ ನಟಿ ವಿದ್ಯಾ ಬಾಲನ್​ಗೆ ದಕ್ಷಿಣ ಭಾರತ ಚಿತ್ರರಂಗದ ಪರಿಚಯ ಚೆನ್ನಾಗಿಯೇ ಇದೆ.

ದಕ್ಷಿಣ ಭಾರತ ಚಿತ್ರರಂಗ

ವಿದ್ಯಾ ಬಾಲನ್ ಈಗಾಗಲೇ ಒಂದು ಮಲಯಾಳಂ, ಎರಡು ತೆಲುಗು ಹಾಗೂ ಒಂದು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿದ್ಯಾ ಬಾಲನ್ ಸಿನಿಮಾ

ಇದೀಗ ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಬರಲು ವಿದ್ಯಾ ಬಾಲನ್ ಸಜ್ಜಾಗಿದ್ದಾರೆ. ಸ್ಟಾರ್ ನಟ, ಸ್ಟಾರ್ ನಿರ್ದೇಶಕರ ಸಿನಿಮಾದಲ್ಲಿ ವಿದ್ಯಾ ನಟಿಸಲಿದ್ದಾರೆ.

ಸ್ಟಾರ್ ನಟ, ನಿರ್ದೇಶಕ

ಮಣಿರತ್ನಂ ನಿರ್ದೇಶಿಸಿ, ಕಮಲ್ ಹಾಸನ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ವಿದ್ಯಾ ಬಾಲನ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರಂತೆ.

ಕಮಲ್ ಹಾಸನ್

ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲವಾದರೂ, ಹೀಗೊಂದು ಗಾಳಿ ಸುದ್ದಿ ಹರಿದಾಡುತ್ತಿದೆ.

ಶೀಘ್ರವೇ ಘೋಷಣೆ

ಚಿತ್ರರಂಗದಲ್ಲಿ 20 ವರ್ಷ ಪೂರ್ಣ, ಅಭಿಮಾನಿಗಳಿಗೆ ಪತ್ರ ಬರೆದ ನಯನತಾರಾ