ಚಿತ್ರರಂಗದಲ್ಲಿ ಎರಡು ದಶಕ ಪೂರ್ಣ, ಅಭಿಮಾನಿಗಳಿಗೆ ಪತ್ರ ಬರೆದ ಲೇಡಿ ಸೂಪರ್ ಸ್ಟಾರ್ ನಯನತಾರಾ

28 DEC 2023

Author : Manjunatha

ನಟಿ ನಯನತಾರಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 20 ವರ್ಷ ಪೂರೈಸಿದ್ದಾರೆ.

20 ವರ್ಷ ಪೂರ್ಣ

ಯಶಸ್ವಿಯಾಗಿ ಎರಡು ದಶಕ ಕಳೆದ ಖುಷಿಯಲ್ಲಿ ಅಭಿಮಾನಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

ಅಭಿಮಾನಿಗೆ ಅಭಿನಂದನೆ

ಅಭಿಮಾನಿಗಳಿಗಾಗಿ ಪತ್ರ ಬರೆದಿರುವ ನಟಿ ನಯನತಾರಾ, ಈ ಎಲ್ಲದಕ್ಕೂ ‘ನೀವೇ’ ಕಾರಣ ಎಂದಿದ್ದಾರೆ.

ಅಭಿಮಾನಿಗಳಿಗಾಗಿ ಪತ್ರ

ಅಭಿಮಾನಿಗಳಿಗೆ ಭೇಷ್ ಎಂದಿರುವ ನಟಿ ನಯನತಾರಾ, ‘ನೀವಿಲ್ಲದೆ ಈ ಪಯಣ ಸಾಧ್ಯವಾಗುತ್ತಿರಲಿಲ್ಲ’ ಎಂದಿದ್ದಾರೆ.

ನಿಮ್ಮಿಂದಲೇ ಎಲ್ಲ

ನಿಮ್ಮಿಂದಲೇ ನಾನು ಒಪ್ಪಿಕೊಳ್ಳುವ ಪ್ರತಿ ಸಿನಿಮಾ, ಕೇವಲ ಸಿನಿಮಾ ಆಗದೆ ಅದಕ್ಕಿಂತಲೂ ಮಹತ್ತರವಾದದುದಾಗಿ ಪರಿವರ್ತಿತವಾಗುತ್ತದೆ ಎಂದಿದ್ದಾರೆ ನಯನತಾರಾ.

ನೀವುಗಳೇ ಕಾರಣ

ಈಗಲೂ ಸಹ ನಾನು ನನ್ನ ಯಶಸ್ಸನ್ನು ಸಂಭ್ರಮಿಸುತ್ತಿಲ್ಲ ಬದಲಿಗೆ ನಿಮ್ಮ ಪ್ರೀತಿಯನ್ನು ಸಂಭ್ರಮಿಸುತ್ತಿದ್ದೇನೆ ಎಂದು ಬರೆದಿದ್ದಾರೆ.

ಪ್ರೀತಿ ಸಂಭ್ರಮಿಸುತ್ತಿದ್ದೇನೆ

ನಿಮ್ಮ ಪ್ರೀತಿ, ಸ್ಪೂರ್ತಿ, ಬೆಂಬಲ ಹಾಗೂ ಅಭಿಮಾನದಿಂದಲೇ ಈ ಇಪ್ಪತ್ತು ವರ್ಷಗಳನ್ನು ನನ್ನಿಂದ ಕಳೆಯಲಾಯ್ತು ಎಂದಿದ್ದಾರೆ.

ಪ್ರೀತಿ, ಸ್ಪೂರ್ತಿ, ಬೆಂಬಲ

ನಯನತಾರಾ ಕಳೆದ 20 ವರ್ಷಗಳಿಂದಲೂ ನಾಯಕಿಯಾಗಿ ಮಿನುಗುತ್ತಲೇ ಇದ್ದಾರೆ. ಈಗಲೂ ಅವರು ಬ್ಯುಸಿ ನಟಿ.

ಎರಡು ದಶಕ ಪೂರ್ಣ

ಸ್ಯಾಂಡಲ್​ವುಡ್ ಜೊತೆ ನಂಟು ಹೊಂದಿರುವ ಬಾಲಿವುಡ್​ನ ಖ್ಯಾತ ನಟಿಯ ಪುತ್ರಿ ಈಕೆ: ಯಾರೆಂದು ಗುರುತಿಸಬಲ್ಲಿರಾ?