ಬಾಲಿವುಡ್ ನಟಿ ಮಲೈಕಾ ಅರೋರಾ, ಪ್ರಸ್ತುತ ನಡೆಯುತ್ತಿರುವ ವಿಮೆನ್ಸ್ ಪ್ರೀಮಿಯರ್ ಲೀಗ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
12 Mar 2024
Author : Manjunatha
ಬಾಲಿವುಡ್ ನಟಿ ಮಲೈಕಾ ಅರೋರಾ ತಮ್ಮ ಗ್ಲಾಮರ್ನಿಂದ ಜನಪ್ರಿಯರು. ಸಿನಿಮಾಗಳಲ್ಲಿ ನಟಿಸಿರುವ ಜೊತೆಗೆ ಹಲವಾರು ಐಟಂ ಹಾಡುಗಳಿಗೆ ಕುಣಿದಿದ್ದಾರೆ.
ನಟಿ ಮಲೈಕಾ ಅರೋರಾ
ಬಾಲಿವುಡ್ನ ಹಲವಾರು ಜನಪ್ರಿಯ ಐಟಂ ಹಾಡುಗಳಿಗೆ ಮಲೈಕಾ ಅರೋರಾ ಡ್ಯಾನ್ಸ್ ಮಾಡಿದ್ದಾರೆ. ಬಾಲಿವುಡ್ನ ಐಟಂ ಗರ್ಲ್ ಎಂದೇ ಮಲೈಕಾ ಖ್ಯಾತರು.
ಐಟಂ ಹಾಡುಗಳಿಗೆ ನೃತ್ಯ
ಮಲೈಕಾ ಅರೋರಾ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಸ್ತುತ ನಡೆಯುತ್ತಿರುವ ವಿಮೆನ್ ಪ್ರೀಮಿಯರ್ ಲೀಗ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ವಿಮೆನ್ ಪ್ರೀಮಿಯರ್
ಮಹಿಳಾ ದಿನಾಚರಣೆ ನೀಡಿದ ಸಂದರ್ಶನದಲ್ಲಿ ವಿಮೆನ್ ಪ್ರೀಮಿಯರ್ ಲೀಗ್ ಬಗ್ಗೆ ಮಾತನಾಡುತ್ತಾ, ಆ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮ ನೋಡಿ ನನಗೆ ಆಶ್ಚರ್ಯವಾಯಿತು ಎಂದಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ
ಮಹಿಳೆಯರ ಟೂರ್ನಿಯ ಉದ್ಘಾಟನೆಯಲ್ಲಿ ಪ್ರದರ್ಶನ ನೀಡಿದವರೆಲ್ಲ ಪುರುಷರೇ ಆಗಿದ್ದರು. ಮಹಿಳೆಯರಿಗಾಗಿ ಮಾಡಿದ ಟೂರ್ನಿಯ ಉದ್ಘಾಟನೆಯಲ್ಲಿ ಮಹಿಳೆಯರೇ ಇರಬೇಕಿತ್ತು ಎಂದಿದ್ದಾರೆ.
ಮಹಿಳೆಗೆ ಅವಕಾಶವಿಲ್ಲ
ಡಬ್ಲುಪಿಎಲ್ನ ಉದ್ಘಾಟನೆಯಲ್ಲಿ ಶಾರುಖ್ ಖಾನ್ ಸೇರಿದಂತೆ ಇನ್ನೂ ಕೆಲವು ಸ್ಟಾರ್ ನಟರು ಡ್ಯಾನ್ಸ್ ಮಾಡಿ ಮನೊರಂಜನೆ ನೀಡಿದ್ದರು.
ಶಾರುಖ್ ಖಾನ್ ಡ್ಯಾನ್ಸ್
ಮಲೈಕಾ ಅರೋರಾ ಸಹ ಒಳ್ಳೆಯ ಡ್ಯಾನ್ಸರ್ ಆಗಿದ್ದು ಹಲವು ಖಾಸಗಿ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಡಬ್ಲುಪಿಎಲ್ಗೆ ಮಲೈಕಾರನ್ನು ಕರೆದಿಲ್ಲವೆಂದು ಅವರಿಗೆ ಬೇಸರ ಆಗಿರಬಹುದೆನೋ.
ಒಳ್ಳೆಯ ಡ್ಯಾನ್ಸರ್
ಮಲೈಕಾ ಅರೋರಾ ಇದೀಗ ಡ್ಯಾನ್ಸ್ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿದ್ದಾರೆ. ಕೆಲವು ಹಿಂದಿ ಸಿನಿಮಾ, ವೆಬ್ ಸರಣಿಗಳಲ್ಲಿ ನಟಿಸುತ್ತಿದ್ದಾರೆ.
ಡ್ಯಾನ್ಸ್ ರಿಯಾಲಿಟಿ ಶೋ
ಮಲೈಕಾ ಅರೋರಾ, ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆಗೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದಾರೆ. ಇಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿರುತ್ತದೆ.
ನಟ ಅರ್ಜುನ್ ಕಪೂರ್
ಪರಭಾಷೆಯಲ್ಲಿ ಮಿಂಚುತ್ತಿರುವ ಕನ್ನಡತಿ ಜ್ಯೋತಿ ರೈ ಮಾದಕ ಚಿತ್ರ ಹಂಚಿಕೊಂಡಿದ್ದಾರೆ. ಆದರೆ ಒಂದು ಟ್ವಿಸ್ಟ್ ಇದೆ.