‘ಕಲ್ಕಿ’ ಚಿತ್ರದಲ್ಲಿ ಮಿಂಚಿದ ಅನ್ನಾಗೆ ಇರೋ ಬೇಡಿಕೆ ಅಷ್ಟಿಷ್ಟಲ್ಲ

07 July 2024

Pic credit - Instagram

Rajesh Duggumane

ಅನ್ನಾ ಬೇನ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ದೀಪಿಕಾ ಪಡುಕೋಣೆ ಜೊತೆ ನಟಿಸಿ ಗಮನ ಸೆಳೆದಿದ್ದಾರೆ. ಅವರ ಬೇಡಿಕೆ ಈ ಚಿತ್ರದಿಂದ ಮತ್ತಷ್ಟು ಹೆಚ್ಚಿದೆ.

‘ಕಲ್ಕಿ’ ಸಿನಿಮಾ

ಕೈರಾ ಅನ್ನೋದು ಅನ್ನಾ ಬೇನ್ ಮಾಡಿರೋ ಪಾತ್ರದ ಹೆಸರು. ಈ ಪಾತ್ರ ಸಿನಿಮಾದಲ್ಲಿ ಕೆಲವೇ ಹೊತ್ತು ಕಾಣಿಸಿಕೊಂಡರೂ ತುಂಬಾನೇ ಮುಖ್ಯವಾಗಿದೆ.

ಪಾತ್ರದ ಹೆಸರು

ಕಲ್ಕಿಯನ್ನು ಹೆರಲಿರೋ ದೀಪಿಕಾ ಪಡುಕೋಣೆ ಅವರನ್ನು ರಕ್ಷಿಸುವ ಕೆಲಸವನ್ನು ಅನ್ನಾ ಬೇನ್ ಮಾಡುತ್ತಾರೆ ಅನ್ನೋದು ವಿಶೇಷ. ಪಾತ್ರ ಹೆಚ್ಚು ಹೊತ್ತು ಇರುವುದಿಲ್ಲ.

ರಕ್ಷಣೆ

ಅನ್ನಾ ಬೇನ್ ಅವರು ಮಲಯಾಳಂ ನಟಿ. ಅಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದು ಅವರು ತೆಲುಗಿನಲ್ಲಿ ನಟಿಸಿರೋ ಮೊದಲ ಸಿನಿಮಾ.

ಮಲಯಾಳಂ ನಟಿ

2019ರಲ್ಲಿ ರಿಲೀಸ್ ಆದ ‘ಕುಂಬಳಂಗಿ ನೈಟ್ಸ್’ ಚಿತ್ರ ಹಿಟ್ ಆಯಿತು. ಈ ಸಿನಿಮಾದಲ್ಲಿ ಅನ್ನಾ ಬೇನ್ ಅವರು ನಟಿಸಿ ಗಮನ ಸೆಳೆದರು.

ಮೊದಲ ಚಿತ್ರ

ನೈಜ ಘಟನೆ ಆಧರಿಸಿ ಸಿದ್ಧವಾದ ‘ಹೆಲೆನ್’ ಸಿನಿಮಾದಲ್ಲಿ ಅನ್ನಾ ಬೇನ್ ನಟಿಸಿದ್ದಾರೆ. ಅವರ ನಟನೆಗೆ ಎಲ್ಲರೂ ಫಿದಾ ಆದರು.

ಹೆಲೆನ್

ಅನ್ನಾ ಬೇನ್ ಅವರಿಗೆ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಇದೆ. ಅವರಿಗೆ ಮಲಯಾಳಂನಲ್ಲಿ ದೊಡ್ಡ ಗೆಲುವು ಕಂಡಿದ್ದಾರೆ.

ಬೇಡಿಕೆ

ಕಿಚ್ಚನಿಗೆ ಇದು ವಿಶೇಷ ದಿನ; ನೆನಪಿಸಿಕೊಂಡ ಸುದೀಪ್