ಶಾರುಖ್ ತಂಡಕ್ಕೆ ಬೆಂಬಲ, ಚೆನ್ನೈನತ್ತ ಹೊರಟ ಬಾಲಿವುಡ್ ಬೆಡಗಿಯರು, ಯಾರ್ಯಾರಿದ್ದಾರೆ?

26 May 2024

Author : Manjunatha

ಐಪಿಎಲ್ 2024ರ ಫೈನಲ್ ಪಂದ್ಯ ಇಂದು ಚೆನ್ನೈ ನಡೆಯಲಿದೆ. ಕೆಕೆಆರ್ ಹಾಗೂ ಎಸ್​ಆರ್​ಎಚ್ ಕಪ್​ಗಾಗಿ ಸೆಣೆಸಲಿವೆ.

ಐಪಿಎಲ್ 2024ರ ಫೈನಲ್

ಶಾರುಖ್ ಖಾನ್​ರ ಕೊಲ್ಕತ್ತ ತಂಡ ಹಾಗೂ ಕಾವ್ಯಾ ಮಾರನ್ ಅವರ ಹೈದರಾಬಾದ್ ತಂಡಗಳ ನಡುವೆ ಇಂದು ತುರುಸಿನ ಪಂದ್ಯ ನಡೆಯಲಿದೆ.

ಕೆಕೆಆರ್ vs ಎಸ್ಆರ್​ಎಚ್

ಶಾರುಖ್ ಖಾನ್ ಈಗಾಗಲೇ ಚೆನ್ನೈನತ್ತ ಹೊರಟಿದ್ದು, ಅವರೊಟ್ಟಿಗೆ ಬಾಲಿವುಡ್​ನ ಹಲವು ತಾರೆಯರು ಕೆಕೆಆರ್ ಬೆಂಬಲಿಸಲು ಆಗಮಿಸುತ್ತಿದ್ದಾರೆ.

ಚೆನ್ನೈಗೆ ಬಾಲಿವುಡ್ ತಾರೆ

ಶಾರುಖ್ ಖಾನ್ ಹಾಗೂ ಅವರ ಪತ್ನಿ ಗೌರಿ ಖಾನ್ ಹಾಗೂ ಅವರ ಪುತ್ರಿ ಸುಹಾನಾ ಖಾನ್ ಒಟ್ಟಿಗೆ ಚೆನ್ನೈಗೆ ಬಂದಿದ್ದಾರೆ.

ಶಾರುಖ್ ಖಾನ್ ಕುಟುಂಬ

ಶಾರುಖ್ ಖಾನ್​ರ ಪುತ್ರಿ ಸುಹಾನಾಗೆ ಅತ್ಯಂತ ಆಪ್ತ ಗೆಳತಿ, ಬಾಲಿವುಡ್ ನಟಿ ಅನನ್ಯಾ ಪಾಂಡೆ ಸಹ ಕೆಕೆಆರ್ ಬೆಂಬಲಿಸಲು ಚೆನ್ನೈಗೆ ಬಂದಿದ್ದಾರೆ.

   ನಟಿ ಅನನ್ಯಾ ಪಾಂಡೆ

ಸುಹಾನಾ ಹಾಗೂ ಶಾರುಖ್ ಖಾನ್ ಇಬ್ಬರಿಗೂ ಹತ್ತಿರವಾಗಿರುವ ಶನಾಯಾ ಕಪೂರ್ ಸಹ ಇಂದು ಕೆಕೆಆರ್ ಬೆಂಬಲಿಸಲಿದ್ದಾರೆ.

ಗೆಳತಿ ಶನಾಯಾ ಕಪೂರ್

ಶಾರುಖ್ ಖಾನ್ ಜೊತೆಗೆ ಕೆಕೆಆರ್​ನಲ್ಲಿ ಪಾಲುದಾರಿಕೆ ಹೊಂದಿರುವ ಜೂಹಿ ಚಾವ್ಲಾ ಸಹ ಇಂದು ಚೆನ್ನೈಗೆ ಆಗಮಿಸಿ ಪಂದ್ಯ ವೀಕ್ಷಿಸಲಿದ್ದಾರೆ.

      ನಟಿ ಜೂಹಿ ಚಾವ್ಲಾ

ಶಾರುಖ್ ಖಾನ್ ಇನ್ನೂ ಕೆಲವು ಆಪ್ತ ಗೆಳೆಯರನ್ನು ಕೆಕೆಆರ್ ಫೈನಲ್ ಪಂದ್ಯ ವೀಕ್ಷಿಸಲು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಶಾರುಖ್ ಖಾನ್ ಗೆಳೆಯರು

ಒಟ್ಟಾರೆ ಇಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ತಾರಾ ಮೇಳವೇ ನಡೆಯಲಿದೆ. ಬಾಲಿವುಡ್ ಹಾಗೂ ದಕ್ಷಿಣದ ತಾರೆಯರು ಮೈದಾನದಲ್ಲಿ ಮಿಂಚಲಿದ್ದಾರೆ.

ಚೆನ್ನೈನಲ್ಲಿ ತಾರಾಮೇಳ

ಆಲಿಯಾ ಭಟ್ ಧರಿಸಿರುವ ಈ ಜೀನ್ಸ್ ಉಡುಗೆಯ ಬೆಲೆ ಎಷ್ಟೆಂದು ಊಹಿಸಬಲ್ಲಿರಾ?