ಭಾರತ-ನ್ಯೂಜಿಲೆಂಡ್ ಮ್ಯಾಚ್​ನಲ್ಲಿ ತಾರಾ ದಂಡು: ವಾಂಖೆಡೆಗೆ ಭೇಟಿಕೊಟ್ಟ ನಟ-ನಟಿಯರ್ಯಾರು?

15 NOV 2023

ರಣ್ಬೀರ್ ಕಪೂರ್ ಭಾರತ ತಂಡದ ಜರ್ಸಿ ತೊಟ್ಟು ಮ್ಯಾಚ್ ನೋಡಿದರು. ಅಂದಹಾಗೆ ಅವರು ದೊಡ್ಡ ಫುಟ್​ಬಾಲ್ ಅಭಿಮಾನಿ.

ರಣ್ಬೀರ್ ಕಪೂರ್

ನಟಿ ಕಿಯಾರಾ ಅಡ್ವಾಣಿ ಹಾಗೂ ಅವರ ಪತಿ, ನಟ ಸಿದ್ಧಾರ್ಥ್ ಮಲ್ಹೋತ್ರಾ ಸಹ ಇಂದು ಮ್ಯಾಚ್ ನೋಡಲು ಬಂದಿದ್ದರು, ಡೇವಿಡ್ ಬೆಕಮ್ ಪಕ್ಕದಲ್ಲಿ ಕೂತು ಪಂದ್ಯ ವೀಕ್ಷಿಸಿದರು.

ಸಿದ್-ಕಿಯಾರಾ

ಶಾಹಿದ್ ಕಪೂರ್ ತಮ್ಮ ಪತ್ನಿಯೊಟ್ಟಿಗೆ ಬಂದು ಮ್ಯಾಚ್ ವೀಕ್ಷಿಸಿದರು. ಶಾಹಿದ್ ದೊಡ್ಡ ಕ್ರಿಕೆಟ್ ಪ್ರೇಮಿ.

ಶಾಹಿದ್ ಕಪೂರ್

ವಿಕ್ಕಿ ಕೌಶಲ್ ಸಹ ಇಂದು ಮ್ಯಾಚ್ ವೀಕ್ಷಿಸಿದರು. ಅವರ ಪತ್ನಿ ಕತ್ರಿನಾ ಜೊತೆಯಲ್ಲಿರಲಿಲ್ಲ.

ವಿಕ್ಕಿ ಕೌಶಲ್

ನಟ ಸೈಫ್ ಅಲಿ ಖಾನ್ ಹಾಗೂ ಅವರ ತಂಗಿ ಸೋಹಲ್​ರ ಪತಿ, ನಟ ಕುನಾಲ್ ಕೇಮು ಸಹ ಕ್ರಿಕೆಟ್ ವೀಕ್ಷಿಸಿದರು.

ಸೈಫ್ ಅಲಿ ಖಾನ್

ಟಾಲಿವುಡ್ ನಟ ವೆಂಕಟೇಶ್ ಸಹ ಪಂದ್ಯ ನೋಡಲು ಬಂದಿದ್ದರು, ವೆಸ್ಟ್ ಇಂಡೀಸ್​ನ ಗ್ರೇಟ್ ಲಿಜೆಂಡ್ ವಿವಿನ್ ರಿಚರ್ಡ್ಸ್​ ಜೊತೆ ಸೆಲ್ಫಿ ಸಹ ತೆಗೆಸಿಕೊಂಡಿದ್ದಾರೆ.

ವಿಕ್ಟರಿ ವೆಂಕಟೇಶ್

ನಟಿ ಮಾಧುರಿ ದೀಕ್ಷಿತ್ ತುಸು ತಡವಾಗಿ ವಾಂಖೆಡೆಗೆ ಎಂಟ್ರಿ ಕೊಟ್ಟರು. ಮ್ಯಾಚ್​ಗೆ ಸಾಕ್ಷಿಯಾದರು.

ಮಾಧುರಿ ದೀಕ್ಷಿತ್

ನಟಿ ಅನುಷ್ಕಾ ಶರ್ಮಾ ಎಂದಿನಂತೆ ಇಂದೂ ಸಹ ಮ್ಯಾಚ್ ವೀಕ್ಷಿಸಿದರು. ತಮ್ಮ ಪತಿ ಕೊಹ್ಲಿ ಮಾಡಿದ ಅಪರೂಪದ ದಾಖಲೆಯನ್ನು ಕಣ್ಣು ತುಂಬಿಕೊಂಡರು.

ಅನುಷ್ಕಾ ಶರ್ಮಾ

ಡೇಟಿಂಗ್ ವಿಚಾರದಲ್ಲಿ ಸ್ಪಷ್ಟನೆ ಕೊಡ್ತಾರಾ ಮೃಣಾಲ್ ಠಾಕೂರ್?