ಅಯೋಧ್ಯೆ ಹಾದಿಯಲ್ಲಿ ತಾರೆಯರು, ಯಾವ ಸಿನಿಮಾ ತಾರೆಯರು ಅಯೋಧ್ಯೆಯ ಹಾದಿ ಹಿಡಿದಿದ್ದಾರೆ?

21 Jan 2024

Author : Manjunatha

ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ.

ಪ್ರಾಣ ಪ್ರತಿಷ್ಠಾಪನೆ

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹಲವು ಸಿನಿಮಾ ತಾರೆಯರು ಅಯೋಧ್ಯೆಗೆ ತೆರಳುತ್ತಿದ್ದಾರೆ. ಕೆಲವರು ಈಗಾಗಲೇ ತಲುಪಿದ್ದಾರೆ.

ಸಿನಿಮಾ ತಾರೆಯರು

ಸೂಪರ್ ಸ್ಟಾರ್ ರಜನೀಕಾಂತ್ ಅವರು ತಮ್ಮ ಪತ್ನಿಯೊಂದಿಗೆ ಅಯೋಧ್ಯೆಗೆ ತಲುಪಿದ್ದಾರೆ.

ಪತ್ನಿ ಜೊತೆ ರಜನೀಕಾಂತ್

ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಸಹ ಅಯೋಧ್ಯೆ ತಲುಪಿದ್ದಾರೆ. ಅವರೊಟ್ಟಿಗೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಸಹ ಇದ್ದಾರೆ.

ಗೌಡರ ಕುಟುಂಬ

ತಮಿಳು ನಟ ಧನುಶ್ ಸಹ ಈಗಾಗಲೇ ಅಯೋಧ್ಯೆ ತಲುಪಿದ್ದಾರೆ. ಅಲ್ಲಿ ಅವರು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ವೀಕ್ಷಿಸಲಿದ್ದಾರೆ.

ಅಯೋಧ್ಯೆಯಲ್ಲಿ ಧನುಶ್

ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೂ ಸಹ ಆಹ್ವಾನ ಬಂದಿದ್ದು, ಅವರೂ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ರಿಷಬ್ ಹೋಗಲಿದ್ದಾರೆ

ಹಲವು ಬಾಲಿವುಡ್ ನಟರು ಸಹ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನಾ ವಿಧಿ-ವಿಧಾನಕ್ಕೆ ಸಾಕ್ಷಿಯಾಗಲಿದ್ದಾರೆ. ಅಮಿತಾಬ್ ಬಚ್ಚನ್ ಸಹ ಆಗಮಿಸಲಿದ್ದಾರೆ.

ಅಮಿತಾಬ್ ಬಚ್ಚನ್ ಸಹ

ನಟಿ ಆಲಿಯಾ ಭಟ್ ಹಾಗೂ ನಟ ರಣ್​ಬೀರ್ ಕಪೂರ್ ಅವರೂ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಖಾತ್ರಿಯಾಗಿದೆ.

ಆಲಿಯಾ ಭಟ್-ರಣ್​ಬೀರ್

ಕೇಸರಿ ಲೆಹಂಗಾನಲ್ಲಿ ಮಿಂಚಿದ ಬಾಲಿವುಡ್ ನಟಿ ಮೌನಿ ರಾಯ್