40 ವರ್ಷಗಳ ಹಿಂದೆ ನಟಿಸಿದ್ದ ಆ ಸಿನಿಮಾ ನೆನೆದ ಮೆಗಾಸ್ಟಾರ್ ಚಿರಂಜೀ: ಕಾರಣವೇನು?

28 OCT 2023

ಚಿರಂಜೀವಿ ಇಂದು ಭಾರತದ ದೊಡ್ಡ ಸೂಪರ್ ಸ್ಟಾರ್​ಗಳಲ್ಲಿ ಒಬ್ಬರು. ಆದರೆ ಈ ಹಂತಕ್ಕೆ ಬರಲು ಸಾಕಷ್ಟು ಕಷ್ಟಪಟ್ಟಿದ್ದಾರೆ.

ಕಷ್ಟಪಟ್ಟಿದ್ದಾರೆ

ಚಿರಂಜೀವಿ ವೃತ್ತಿ ಜೀವನದ ಮೊಟ್ಟ ಮೊದಲ ಬ್ಲಾಕ್ ಬಸ್ಟರ್ ಸಿನಿಮಾ 'ಖೈದಿ'. ಆ ಸಿನಿಮಾ ಬಿಡುಗಡೆ ಆಗಿ ಇಂದಿಗೆ 40 ವರ್ಷಗಳಾಗಿವೆ.

ಮೊದಲ ಬ್ಲಾಕ್ ಬಸ್ಟರ್

ತಮ್ಮನ್ನು ಮಾಸ್ ಹೀರೋ ಮಾಡಿದ ಸಿನಿಮಾ 'ಖೈದಿ' ಬಿಡುಗಡೆ ಆಗಿ 40 ವರ್ಷ ಆದ ಸಂದರ್ಭದಲ್ಲಿ ಆ ಸಿನಿಮಾವನ್ನು ಚಿರಂಜೀವಿ ನೆನಪು ಮಾಡಿಕೊಂಡಿದ್ದಾರೆ.

'ಖೈದಿ' ಸಿನಿಮಾ

'ಖೈದಿ' ಚಿತ್ರ ನಿಜಕ್ಕೂ ನನ್ನನ್ನು ಅಭಿಮಾನಿಗಳ ಹೃದಯದಲ್ಲಿ ಶಾಶ್ವತ 'ಖೈದಿ'ಯನ್ನಾಗಿ ಮಾಡಿದೆ ಎಂದಿದ್ದಾರೆ ಚಿರಂಜೀವಿ.

ಶಾಶ್ವತ 'ಖೈದಿ'

ನನ್ನ ಜೀವನದಲ್ಲಿ ಒಂದು ದೊಡ್ಡ ತಿರುವು ಖೈದಿ ಚಿತ್ರ, ಈ ಸಿನಿಮಾಕ್ಕೆ ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆ ಮರೆಯಲಾಗದು ಎಂದಿದ್ದಾರೆ.

ದೊಡ್ಡ ತಿರುವು

ಖೈದಿ ಚಿತ್ರವನ್ನು ಎ ಕೋದಂಡರಾಮಿ ರೆಡ್ಡಿ ನಿರ್ದೇಶಿಸಿದ್ದಾರೆ, ಸಂಯುಕ್ತ ಮೂವೀಸ್ ತಂಡ ನಿರ್ಮಿಸಿದೆ ಮತ್ತು ಪರುಚೂರಿ ಸಹೋದರರು ಕತೆ ಬರೆದಿದ್ದಾರೆ.

ಕೋದಂಡರಾಮಿ ರೆಡ್ಡಿ

ನನ್ನ ಸಹ-ನಟಿಯರಾದ ಸುಮಲತಾ ಮತ್ತು ಮಾಧವಿ ಮತ್ತು ಇಡೀ ತಂಡವನ್ನು ಅಭಿನಂದಿಸುತ್ತೇನೆ, ಅಂತಹ ಉತ್ತಮ ಯಶಸ್ಸಿಗೆ ಎಲ್ಲಾ ತೆಲುಗು ಪ್ರೇಕ್ಷಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದಿದ್ದಾರೆ ಚಿರು.

ಸುಮಲತಾ, ಮಾಧವಿ

ಮೆಗಾಸ್ಟಾರ್ ಚಿರಂಜೀವಿ ಈಗಲೂ ಸಿನಿಮಾ ನಟನೆ ಮುಂದುವರೆಸಿದ್ದು, ಕಳೆದ ಕೆಲವು ಸಿನಿಮಾಗಳು ಸೋಲು ಕಂಡಿವೆ. ಆದರೆ ಬೇಡಿಕೆ ಕಡಿಮೆಯಾಗಿಲ್ಲ.

ಮೆಗಾಸ್ಟಾರ್

ಜಿಯೋ ಮಾಮಿ ಸಿನಿಮೋತ್ಸವಕ್ಕೆ ಗ್ಲಾಮರ್ ಟಚ್ ನೀಡಿದ ಬಾಲಿವುಡ್ ಬೆಡಗಿಯರು