Pic credit - Instagram

Author: Rajesh Duggumane

ಹೊಸ ಇಲೆಕ್ಟ್ರಿಕ್ ಕಾರು ಖರೀದಿ ಮಾಡಿದ ಮಿಲನಾ-ಡಾರ್ಲಿಂಗ್

06 June 2026

ಹೊಸ ಕಾರು

ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ.

ಖುಷಿಯ ಕ್ಷಣ

 ಹೊಸ ಕಾರನ್ನು ಮನೆಗೆ ಬರಮಾಡಿಕೊಂಡ ಸಂಭ್ರಮದ ಸುಂದರ ಫೋಟೋಗಳನ್ನು ಈ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಪೂಜಾ ಸಂಪ್ರದಾಯ

ಶೋರೂಮ್‌ನಲ್ಲಿ ಕುಟುಂಬದವರ ಜೊತೆಗೂಡಿ ಹೊಸ ವಾಹನಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಕೃಷ್ಣ ದಂಪತಿ ಸಂಭ್ರಮ ಪಟ್ಟಿದ್ದಾರೆ.

ಪರಿಸರ ಕಾಳಜಿ

ಮಾಲಿನ್ಯ ಮುಕ್ತ ಪ್ರಯಾಣಕ್ಕಾಗಿ ಎಲೆಕ್ಟ್ರಿಕ್ ಕಾರು ಆಯ್ಕೆ ಮಾಡಿಕೊಂಡ ನಟನ ನಿರ್ಧಾರಕ್ಕೆ ಅಭಿಮಾನಿಗಳು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸಖತ್ ಸ್ಟೈಲಿಶ್

ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಬಿಳಿ ಬಣ್ಣದ ಹೊಸ ಐಷಾರಾಮಿ ಕಾರು ನೋಡಲು ಸಖತ್ ಸ್ಟೈಲಿಶ್ ಆಗಿದೆ.

ಶುಭಾಶಯಗಳ ಮಹಾಪೂರ

ನೆಚ್ಚಿನ ಸ್ಟಾರ್ ಜೋಡಿಯ ಹೊಸ ಕಾರಿನ ಆಕರ್ಷಕ ಚಿತ್ರಗಳನ್ನು ನೋಡಿ ಸ್ಯಾಂಡಲ್‌ವುಡ್ ಗಣ್ಯರು ಹಾಗೂ ನೆಟ್ಟಿಗರು ಹಾರೈಸುತ್ತಿದ್ದಾರೆ.

ಮುಂದಿನ ಪಯಣ

 ಸದಾ ಸಿನಿಮಾಗಳಲ್ಲಿ ಬ್ಯುಸಿಯಿರುವ ಈ ಜೋಡಿ ಹೊಸ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಲು ಭರ್ಜರಿ ಪ್ಲಾನ್ ಮಾಡಿಕೊಂಡಿದೆ.