ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಹಲವು ಸಿನಿಮಾ ತಾರೆಯರು ಭಾಗಿಯಾಗಿದ್ದರು ಇಲ್ಲಿವೆ ಚಿತ್ರಗಳು.

22 Jan 2024

Author : Manjunatha

ಸೂಪರ್ ಸ್ಟಾರ್ ರಜನೀಕಾಂತ್ ಒಂದು ದಿನ ಮುಂಚಿತವಾಗಿಯೇ ಪತ್ನಿಯೊಟ್ಟಿಗೆ ಅಯೋಧ್ಯೆ ತಲುಪಿದ್ದರು. ಇಂದಿನ ಕಾರ್ಯಕ್ರಮದಲ್ಲಿ ಹೀಗೆ ಕಾಣಿಸಿಕೊಂಡರು.

ಸ್ಟಾರ್ ರಜನೀಕಾಂತ್

ನಟ ಅಮಿತಾಬ್ ಬಚ್ಚನ್​ ಸರಳವಾದ ಉಡುಗೆ ತೊಟ್ಟು ಭಕ್ತಿ ಪೂರ್ವಕವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಅಮಿತಾಬ್ ಬಚ್ಚನ್

ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಪತ್ನಿಯೊಟ್ಟಿಗೆ ಒಂದು ದಿನ ಮುಂಚಿತವಾಗಿಯೇ ಅಯೋಧ್ಯೆಗೆ ತೆರಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ರಿಷಬ್ ಶೆಟ್ಟಿ ಹಾಗೂ ಪತ್ನಿ

ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ತಮ್ಮ ಕುಟುಂಬದೊಟ್ಟಿಗೆ ಮುಂಚಿತವಾಗಿಯೇ ಹೋಗಿ ಕಾರ್ಯಕ್ರಮದಲ್ಲಿ ಭಾಗಿಯಾದರು.

 ನಿಖಿಲ್ ಕುಮಾರಸ್ವಾಮಿ

ಬಾಲಿವುಡ್ ನಟ ರಣ್​ಬೀರ್ ಕಪೂರ್ ತಮ್ಮ ಪತ್ನಿ ನಟಿ, ಆಲಿಯಾ ಭಟ್ ಜೊತೆ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

ರಣ್​ಬೀರ್-ಆಲಿಯಾ

ನಟ ರಾಮ್ ಚರಣ್ ಹಾಗೂ ಅವರ ತಂದೆ ಮೆಗಾಸ್ಟಾರ್ ಚಿರಂಜೀವಿ ಇಬ್ಬರೂ ಸಹ ರಾಮ ಪ್ರಾಣ ಪ್ರತಿಷ್ಠಾಪನೆ ಕಣ್​ತುಂಬಿಸಿಕೊಂಡರು.

ಮೆಗಾಸ್ಟಾರ್ ಚಿರಂಜೀವಿ

ನಟ, ರಾಜಕಾರಣಿ ಪವನ್ ಕಲ್ಯಾಣ್ ಸಹ ಅಯೋಧ್ಯೆಗೆ ತೆರಳಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ವೀಕ್ಷಿಸಿದರು.

ಪವನ್ ಕಲ್ಯಾಣ್

ನಟಿ ಕಂಗನಾ ರನೌತ್ ಅಂತೂ ಕಾರ್ಯಕ್ರಮವನ್ನು ಬಹಳ ಎಂಜಾಯ್ ಮಾಡಿದರು. ನಟಿ ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತಿರುವ ವೈರಲ್ ಆಗುತ್ತಿದೆ.

ನಟಿ ಕಂಗನಾ ರನೌತ್

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಸಿನಿಮಾ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ