ರಾಮ ಮಂದಿರ ನಿರ್ಮಾಣಕ್ಕೆ ಹಲವು ಸಿನಿಮಾ ಸೆಲೆಬ್ರಿಟಿಗಳು ದೇಣಿಗೆ ನೀಡಿದ್ದಾರೆ. ಅದರಲ್ಲಿ ಕೆಲವರ ಪಟ್ಟಿ ಇಲ್ಲಿದೆ.

21 Jan 2024

Author : Manjunatha

ಬಾಲಿವುಡ್ ನಟ ಅಕ್ಷಯ್ ಕುಮಾರ್ ರಾಮ ಮಂದಿರ ನಿರ್ಮಾಣಕ್ಕೆ ಭಾರಿ ದೊಡ್ಡ ಮೊತ್ತವನ್ನೇ ದೇಣಿಗೆ ನೀಡಿದ್ದಾರೆ.

ನಟ ಅಕ್ಷಯ್ ಕುಮಾರ್

ನಟ ಪ್ರಭಾಸ್ ಸಹ ರಾಮ ಮಂದಿರ ನಿರ್ಮಾಣಕ್ಕೆ ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ಮೊತ್ತ ಎಷ್ಟೆಂಬ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ.

ನಟ ಪ್ರಭಾಸ್ ದೇಣಿಗೆ

ಕನ್ನಡದ ನಟಿ ಪ್ರಣಿತಾ ಸುಭಾಷ್ ಸಹ ಲಕ್ಷಾಂತರ ರೂಪಾಯಿ ಹಣವನ್ನು ರಾಮ ಮಂದಿರ ನಿರ್ಮಾಣಕ್ಕೆ ನೀಡಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದರು.

ನಟಿ ಪ್ರಣಿತಾ ಸುಭಾಷ್

ಬಾಲಿವುಡ್ ನಟ, ಬಿಜೆಪಿ ಮುಖಂಡ ಅನುಪಮ್ ಖೇರ್ ಸಹ ರಾಮ ಮಂದಿರ ನಿರ್ಮಾಣಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿದ್ದರು.

ನಟ ಅನುಪಮ್ ಖೇರ್

ನಟ ಪವನ್ ಕಲ್ಯಾಣ್ 30 ಲಕ್ಷ ರೂಪಾಯಿ ಹಣವನ್ನು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ.

ಪವನ್ ಕಲ್ಯಾಣ್ 30 ಲಕ್ಷ

ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಸಹ ರಾಮ ಮಂದಿರ ನಿರ್ಮಾಣಕ್ಕೆ ದೊಡ್ಡ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

ಸಂಸದೆ ಹೇಮಾಮಾಲಿನಿ

ಸೂಪರ್ ಸ್ಟಾರ್ ರಜನೀಕಾಂತ್ ಸಹ ರಾಮ ಮಂದಿರ ನಿರ್ಮಾಣಕ್ಕೆ ಭರಪೂರ ದೇಣಿಗೆ ನೀಡಿದ್ದಾರೆ. ಈಗ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳಲಿದ್ದಾರೆ.

ಸ್ಟಾರ್ ರಜನೀಕಾಂತ್

ಕನ್ನಡದ ಕೆಲವು ನಟರು ಸೇರಿದಂತೆ ವಿವಿಧ ಭಾಷೆಯ ಹಲವಾರು ನಟ-ನಟಿಯರು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣ

ಅಯೋಧ್ಯೆ ಹಾದಿಯಲ್ಲಿ ತಾರೆಯರು, ಯಾವ ಸಿನಿಮಾ ತಾರೆಯರು ಅಯೋಧ್ಯೆಯ ಹಾದಿ ಹಿಡಿದಿದ್ದಾರೆ?