ಸಂಭಾವನೆ ಪಡೆಯದೇ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನಟಿಸಿದ ಮೃಣಾಲ್, ಕಾರಣ?

28 JUNE 2024

Author : Manjunatha

ಮೃಣಾಲ್ ಠಾಕೂರ್ ಮರಾಠಿ ಮೂಲದ ನಟಿ ಆದರೆ ತೆಲುಗು ಪ್ರೇಕ್ಷಕರ ಅಚ್ಚು ಮೆಚ್ಚಿನ ನಟಿಯಾಗಿದ್ದಾರೆ.

  ನಟಿ ಮೃಣಾಲ್ ಠಾಕೂರ್

ತೆಲುಗಿನಲ್ಲಿ ಮೃಣಾಲ್ ನಾಯಕಿಯಾಗಿ ನಟಿಸಿರುವುದು ಕೇವಲ ಮೂರೇ ಸಿನಿಮಾದಲ್ಲಿ ಆದರೂ ತೆಲುಗು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

   ತೆಲುಗರ ಮೆಚ್ಚಿನ ನಟಿ

ನಿನ್ನೆಯಷ್ಟೆ ಬಿಡುಗಡೆ ಆಗಿ ದಾಖಲೆಗಳು ಬರೆಯುತ್ತಿರುವ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಟಿಸಿದ್ದಾರೆ.

   ‘ಕಲ್ಕಿ’ಯಲ್ಲಿ ಮೃಣಾಲ್ 

ಸಿನಿಮಾದ ಆರಂಭದಲ್ಲಿ ಬರುವ ಸಣ್ಣ ಪಾತ್ರದಲ್ಲಿ ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ನಟಿಸಲು ಸಂಭಾವನೆ ಪಡೆದಿಲ್ಲ ನಟಿ.

ಸಂಭಾವನೆ ಪಡೆದಿಲ್ಲ ನಟಿ

‘ಕಲ್ಕಿ’ ಸಿನಿಮಾನಲ್ಲಿ ಸಂಭಾವನೆ ಪಡೆಯದೇ ಮೃಣಾಲ್ ನಟಿಸಿರುವುದಕ್ಕೆ ಕಾರಣ ವೈಜಯಂತಿ ನಿರ್ಮಾಣ ಸಂಸ್ಥೆ.

   ವೈಜಯಂತಿ ನಿರ್ಮಾಣ 

ಮೃಣಾಲ್ ಅವರನ್ನು ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿಸಿದ ‘ಸೀತಾ ರಾಮಂ’ ಸಿನಿಮಾವನ್ನು ವೈಜಯಂತಿ ಮೂವೀಸ್ ನಿರ್ಮಾಣ ಮಾಡಿತ್ತು.

  ‘ಸೀತಾ ರಾಮಂ’ ಸಿನಿಮಾ

ಅಲ್ಲದೆ ‘ಸೀತಾ ರಾಮಂ’ ಮೃಣಾಲ್ ವೃತ್ತಿ ಬದುಕಿನ ಅತ್ಯುತ್ತಮ ಸಿನಿಮಾ, ಈ ಸಿನಿಮಾವನ್ನು ನಿರ್ಮಿಸಿದ್ದು ವೈಜಯಂತಿ ಮೂವೀಸ್.

   ವೈಜಯಂತಿ ಮೂವೀಸ್

ತಮ್ಮ ವೃತ್ತಿ ಜೀವನದ ಅತಿ ದೊಡ್ಡ ಹಿಟ್ ನೀಡಿ, ವೃತ್ತಿ ಜೀವನದ ದಿಕ್ಕು ಬದಲಿಸಿದ ವೈಜಯಂತಿ ಮೂವೀಸ್​ಗಾಗಿ ಮೃಣಾಲ್ ಹಣ ಪಡೆಯದೇ ‘ಕಲ್ಕಿ’ಯಲ್ಲಿ ನಟಿಸಿದ್ದಾರೆ.

ಸಂಭಾವನೆ ಪಡೆದಿಲ್ಲ ನಟಿ

ಮೃಣಾಲ್ ಠಾಕೂರ್ ಪ್ರಸ್ತುತ ‘ಪೂಜಾ ಮೇರಿ ಜಾನ್’ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೊಸ ತೆಲುಗು ಸಿನಿಮಾ ಬಗ್ಗೆ ಚರ್ಚೆ ಜಾರಿಯಲ್ಲಿದೆ.

    ‘ಪೂಜಾ ಮೇರಿ ಜಾನ್’

ಮಹೇಶ್ ಬಾಬು ಧರಿಸಿರುವ ಸರಳವಾಗಿ ಕಾಣುವ ಈ ಟಿ-ಶರ್ಟ್ ನ ಬೆಲೆ ಎಷ್ಟು ಊಹಿಸಬಲ್ಲಿರಾ?