ತೆಲುಗು ಚಿತ್ರರಂಗದ ಸ್ಟಾರ್ ನಟನ ಸಿನಿಮಾ ಅವಕಾಶವನ್ನು ನಿರಾಕರಿಸಿ ಸುದ್ದಿಯಾಗಿದ್ದಾರೆ ‘ಸೀತಾ ಮಹಾಲಕ್ಷ್ಮಿ’

16 May 2024

Author : Manjunatha

ಮೃಣಾಲ್ ಠಾಕೂರ್ ಮೂಲತಃ ಮರಾಠಿ ನಟಿಯಾಗಿದ್ದರೂ ಸಹ ತೆಲುಗು ಸಿನಿಮಾ ಪ್ರೇಕ್ಷಕರ ಬಹು ಮೆಚ್ಚಿನ ನಟಿ. ತೆಲುಗು ಚಿತ್ರರಂಗದಲ್ಲಿ ಒಂದರ ಹಿಂದೊಂದು ಅವಕಾಶ ಪಡೆದುಕೊಳ್ಳುತ್ತಿದ್ದಾರೆ.

    ಮೃಣಾಲ್ ಠಾಕೂರ್

ಮರಾಠಿ ಹಾಗೂ ಹಿಂದಿಯ ಹಲವು ಸಿನಿಮಾಗಳಲ್ಲಿ ಮೃಣಾಲ್ ಈಗಾಗಲೇ ನಟಿಸಿದ್ದಾರೆ. ಆದರೆ ಅವರು ನಟಿಸಿದ ಒಂದೇ ಒಂದು ತೆಲುಗು ಸಿನಿಮಾ ಅವರನ್ನು ತೆಲುಗು ಪ್ರೇಕ್ಷಕರ ನೆಚ್ಚಿನ ನಟಿಯನ್ನಾಗಿಸಿತು.

   ಪ್ರೇಕ್ಷಕರ ನೆಚ್ಚಿನ ನಟಿ

ಮೃಣಾಲ್ ಠಾಕೂರ್ ‘ಸೀತಾ ರಾಮಂ’ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಆ ಸಿನಿಮಾದ ‘ಸೀತಾ ಮಹಾಲಕ್ಷ್ಮಿ’ ಪಾತ್ರ ಅವರಿಗೆ ಭಾರಿ ದೊಡ್ಡ ಹೆಸರುಗಳಿಸಿಕೊಟ್ಟಿತು.

‘ಸೀತಾ ರಾಮಂ’ ಸಿನಿಮಾ

ಅದಾದ ಬಳಿಕ ನಾನಿ ಜೊತೆಗೆ ‘ಹಾಯ್ ನಾನ್ನ’ ಹಾಗೂ ವಿಜಯ್ ದೇವರಕೊಂಡ ಜೊತೆಗೆ ‘ಫ್ಯಾಮಿಲಿ ಸ್ಟಾರ್’ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇನ್ನೆರಡು ತೆಲುಗು ಸಿನಿಮಾ

ಇದೀಗ ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಮೃಣಾಲ್ ಠಾಕೂರ್​ಗೆ ನೀಡಲಾಗಿತ್ತಂತೆ. ಆದರೆ ಆ ಅವಕಾಶವನ್ನು ನಟಿ ನಿರಾಕರಿಸಿದ್ದಾರೆ.

   ಸ್ಟಾರ್ ನಟನ ಸಿನಿಮಾ

ಬಾಲಕೃಷ್ಣ ಸಿನಿಮಾಗಳಲ್ಲಿ ನಾಯಕಿ ಪಾತ್ರಕ್ಕೆ ಪ್ರಾಶಸ್ತ್ಯತೆ ಇರುವುದಿಲ್ಲ ಹಾಗಾಗಿ ಆ ಸಿನಿಮಾ ಒಪ್ಪಿಕೊಳ್ಳಲಿಲ್ಲವಂತೆ.

    ಬಾಲಕೃಷ್ಣ ಸಿನಿಮಾ

ಮೃಣಾಲ್ ಠಾಕೂರ್ ಪ್ರಸ್ತುತ ‘ಪೂಜಾ ಮೇರಿ ಜಾನ್’ ಹೆಸರಿನ ಹಿಂದಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ.

   ‘ಪೂಜಾ ಮೇರಿ ಜಾನ್’

ಮೃಣಾಲ್ ಠಾಕೂರ್ ನಟಿಸಿದ್ದ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ನಿರೀಕ್ಷಿಸಿದಷ್ಟು ಯಶಸ್ಸು ತಂದುಕೊಟ್ಟಿಲ್ಲ. ಹಾಗಾಗಿ ಮೃಣಾಲ್ ಇನ್ನು ಮುಂದೆ ಇನ್ನಷ್ಟು ಜಾಗರೂಕತೆಯಿಂದ ಸಿನಿಮಾಗಳನ್ನು ಆರಿಸಿಕೊಳ್ಳಲಿದ್ದಾರೆ.

ಫ್ಯಾಮಿಲಿ ಸ್ಟಾರ್ ಫ್ಲಾಪ್

ಮೃಣಾಲ್ ಠಾಕೂರ್ ಸಿನಿಮಾ ನಿರ್ಮಾಣವನ್ನು ಸಹ ಪ್ರಾರಂಭ ಮಾಡುವ ಇರಾದೆಯಲ್ಲಿದ್ದಾರೆ. ಮೃಣಾಲ್ ಮರಾಠಿ ಸಿನಿಮಾಗಳ ನಿರ್ಮಿಸುತ್ತಾರೆಯೋ, ತೆಲುಗು ಸಿನಿಮಾಗಳ ನಿರ್ಮಿಸುತ್ತಾರೆಯೋ ನೋಡಬೇಕಿದೆ.

     ನಿರ್ಮಾಣ ಸಂಸ್ಥೆ

ವರ್ಷದ ಹಿಂದೆ ಬೇಡಿಕೆಯ ನಟಿಯಾಗಿದ್ದ ಸಮಂತಾ ಈಗ ಅವಕಾಶಗಳ ಕಳೆದುಕೊಳ್ಳುತ್ತಿದ್ದಾರೆಯೇ?