ವರ್ಷದ ಹಿಂದೆ ಬೇಡಿಕೆಯ ನಟಿಯಾಗಿದ್ದ ಸಮಂತಾ ಈಗ ಅವಕಾಶಗಳ ಕಳೆದುಕೊಳ್ಳುತ್ತಿದ್ದಾರೆಯೇ?

16 May 2024

Author : Manjunatha

ನಟಿ ಸಮಂತಾ ತೆಲುಗು ಚಿತ್ರರಂಗದ ಬೇಡಿಕೆಯ ನಟಿಯಾಗಿದ್ದವರು. ತಮಿಳಿನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬೇಡಿಕೆಯ ನಟಿ ಸ್ಯಾಮ್

ದೊಡ್ಡ ದೊಡ್ಡ ನಿರ್ದೇಶಕರು, ಭಾರಿ ಸ್ಟಾರ್ ನಟರು ಎಲ್ಲರೊಟ್ಟಿಗೆ ನಟಿಸಿರುವ ಸಮಂತಾ, ತೆಲುಗು ಚಿತ್ರರಂಗದ ದೊಡ್ಡ ಸಂಭಾವನೆ ನಟಿಯಾಗಿದ್ದರು.

      ತೆಲುಗು ಚಿತ್ರರಂಗ

ಆದರೆ ಅನಾರೋಗ್ಯದ ಕಾರಣದಿಂದ ಕಳೆದ ಒಂದು ವರ್ಷದಿಂದ ಚಿತ್ರೀಕರಣದಿಂದ ದೂರ ಉಳಿದರು. ಆರೋಗ್ಯವನ್ನು ಬಹುತೇಕ ಸರಿಪಡಿಸಿಕೊಂಡರು.

ವರ್ಷದಿಂದ ಚಿತ್ರೀಕರಣ

ಆದರೆ ಈಗ ಚಿತ್ರರಂಗಕ್ಕೆ ಮರಳುವ ಹೊತ್ತಿಗೆ ಸಮಂತಾ ಕೈಯಲ್ಲಿದ್ದ ಅವಕಾಶಗಳೆಲ್ಲ ಬೇರೆ ನಟಿಯರ ಪಾಲಾಗಿವೆ. ಹೊಸ ಅವಕಾಶಗಳು ಅಷ್ಟಾಗಿ ಬರುತ್ತಿಲ್ಲ ಎನ್ನಲಾಗುತ್ತಿದೆ.

  ಬೇರೆ ನಟಿಯರ ಪಾಲು

ಸಮಂತಾ ಕೈಯಲ್ಲಿ ಬಾಲಿವುಡ್​ ಸಿನಿಮಾ, ಒಂದು ಇಂಗ್ಲೀಷ್ ಸಿನಿಮಾ ಅವಕಾಶಗಳು ಇದ್ದವು. ಆದರೆ ಅವೆರಡು ಸಿನಿಮಾಗಳು ಈಗ ಸಮಂತಾ ಕೈತಪ್ಪಿವೆ.

ಕೆಲವು ಅವಕಾಶಗಳಿದ್ದವು

ಒಂದೆರಡು ತೆಲುಗು ಸಿನಿಮಾಗಳ ಅವಕಾಶಗಳು ಸಹ ಸಮಂತಾ ಕೈಯಲ್ಲಿತ್ತು. ಆದರೆ ಸಮಂತಾ ಅನಾರೋಗ್ಯದಿಂದ ಬಿಡುವು ತೆಗೆದುಕೊಂಡಾಗ ಅವು ಸಹ ದೂರಾದವು.

ಚಿತ್ರರಂಗದಿಂದ ದೂರ

ಪ್ರಸ್ತುತ ಸಮಂತಾ ‘ಮಾ ಇಂಟಿ ಬಂಗಾರಂ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು, ಸಮಂತಾ ಖಡಕ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

‘ಮಾ ಇಂಟಿ ಬಂಗಾರಂ’

ಸಮಂತಾರ ಹಿಂದಿ ವೆಬ್ ಸರಣಿಯೊಂದು ಸಹ ಇನ್ನೂ ಬಿಡುಗಡೆ ಆಗಬೇಕಿದೆ. ರಾಜ್ ಆಂಡ್ ಡಿಕೆ ನಿರ್ದೇಶಿಸಿರುವ ಆ ವೆಬ್ ಸರಣಿಯಲ್ಲಿ ವರುಣ್ ಧವನ್ ನಾಯಕ

ವರುಣ್ ಧವನ್ ನಾಯಕ

ಸಮಂತಾ ಈಗ ‘ಟೇಕ್ 20’ ಹೆಸರಿನಲ್ಲಿ ಆರೋಗ್ಯದ ಬಗ್ಗೆ ಪಾಡ್​ಕಾಸ್ಟ್ ಸಹ ನಡೆಸುತ್ತಿದ್ದಾರೆ. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಆರೋಗ್ಯದ ಪಾಡ್​ಕಾಸ್ಟ್

ಬಾಲಿವುಡ್ ನಟಿ ಸೋನಂ ಕಪೂರ್ ಧರಿಸಿರುವ ಈ ಸೂಟ್ ಮಾದರಿಯ ಉಡುಗೆಯ ಬೆಲೆ ಲಕ್ಷಗಳಲ್ಲಿದೆ.