ಪಾಕಿಸ್ತಾನಿ ನಟಿಗೆ ಧನ್ಯವಾದ ಹೇಳಿದ ಮೃಣಾಲ್ ಠಾಕೂರ್, ಕಾರಣ?
09 Jan 2025
Manjunatha
ಮೃಣಾಲ್ ಠಾಕೂರ್ ಭಾರತದ ಜನಪ್ರಿಯ ನಟಿ. ದಕ್ಷಿಣ ಭಾರತ ಹಾಗೂ ಬಾಲಿವುಡ್ ಎರಡರಲ್ಲೂ ಮೃಣಾಲ್ ಬೇಡಿಕೆಯಲ್ಲಿದ್ದಾರೆ.
ನಟಿ ಮೃಣಾಲ್ ಠಾಕೂರ್
ಸಾಮಾಜಿಕ ಜಾಲತಾಣದಲ್ಲಿಯೂ ಬಹಳ ಸಕ್ರಿಯರಾಗಿರುವ ಮೃಣಾಲ್ ಠಾಕೂರ್ ಇತ್ತೀಚೆಗೆ ಪಾಕಿಸ್ತಾನಿ ನಟಿಗೆ ಧನ್ಯವಾದ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ
ಪಾಕಿಸ್ತಾನದ ಜನಪ್ರಿಯ ನಟಿ ಹಾನಿಯಾ ಆಮಿರ್ ಹೆಸರಿನ ಟ್ವಿಟ್ಟರ್ ಖಾತೆಯೊಂದು ಮೃಣಾಲ್ ಅನ್ನು ಈ ದಶಕದ ಅತ್ಯುತ್ತಮ ನಟಿ ಎಂದು ಪೋಸ್ಟ್ ಹಂಚಿಕೊಳ್ಳಲಾಗಿತ್ತು.
ನಟಿ ಹಾನಿಯಾ ಆಮಿರ್
ಇದರಿಂದ ಖುಷಿಯಾದ ಮೃಣಾಲ್ ಠಾಕೂರ್, ನೆರೆಯ ದೇಶದ ನಟಿ ತನ್ನ ಬಗ್ಗೆ ಬರೆದುಕೊಂಡಿರುವುದಕ್ಕೆ ಖುಷಿಯಾಗಿ ಧನ್ಯವಾದ ಹೇಳಿದ್ದರು.
ಖುಷಿಯಾದ ಮೃಣಾಲ್
ಅಸಲಿಗೆ ಮೃಣಾಲ್ ಬಗ್ಗೆ ಹೊಗಳಿ ಬರೆದಿದ್ದು ನಟಿ ಹಾನಿಯಾ ಆಮಿರ್ ಆಗಿರಲಿಲ್ಲ ಬದಲಿಗೆ ಅವರ ಅಭಿಮಾನಿಯ ನಕಲಿ ಖಾತೆ ಆಗಿತ್ತು.
ಪಾಕ್ ನಟಿ ಹಾನಿಯಾ
ಇದೀಗ ಇದೇ ಕಾರಣಕ್ಕೆ ಮೃಣಾಲ್ ಠಾಕೂರ್ ಅನ್ನು ಹಲವರು ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ನಿಮ್ಮ ಸೋಷಿಯಲ್ ಮೀಡಿಯಾ ಟೀಂ ಬದಲಿಸಿ ಎಂದಿದ್ದಾರೆ.
ಟ್ರೋಲ್ ಮಾಡುತ್ತಿದ್ದಾರೆ
ಆದರೆ ಇದನ್ನೆಲ್ಲ ಗಂಭೀರವಾಗಿ ತೆಗೆದುಕೊಂಡಿಲ್ಲ ಮೃಣಾಲ್ ಠಾಕೂರ್, ತಮ್ಮ ತಪ್ಪನ್ನು ಒಪ್ಪಿಕೊಂಡು ತಮಾಷೆಯಾಗಿಯೇ ತೆಗೆದುಕೊಂಡಿದ್ದಾರೆ.
ನಟಿ ಮೃಣಾಲ್ ಠಾಕೂರ್
ಸಾರಾ ಅಲಿ ಖಾನ್ ಕೈ ತಪ್ಪಿತೆ ದಕ್ಷಿಣ ಭಾರತದ ಸಿನಿಮಾ
ಇದನ್ನೂ ನೋಡಿ