ಮತ್ತೆ ಒಟ್ಟಿಗೆ ಕಾಣಿಸಿಕೊಂಡ ನಾಗ ಚೈತನ್ಯ-ಶೋಭಿತಾ ದುಲಿಪಾಲ, ಎಲ್ಲಿ? ಯಾವಾಗ?

14 Jan 2024

Author : Manjunatha

ಸಮಂತಾ ಜೊತೆ ವಿಚ್ಛೇದನದ ಬಳಿಕ ನಾಗ ಚೈತನ್ಯ ಹೆಸರು ಇತ್ತೀಚೆಗೆ ನಟಿ ಶೋಭಿತಾ ದುಲಿಪಾಲ ಜೊತೆ ಕೇಳಿ ಬರುತ್ತಿದೆ.

ಸ್ಯಾಮ್ ಜೊತೆ ವಿಚ್ಛೇದನ

ಶೋಭಿತಾ ಹಾಗೂ ನಾಗ ಚೈತನ್ಯ ಈ ಹಿಂದೆ ಕೆಲವು ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಪ್ರೀತಿ-ಗೀತಿ ವಿಷಯ ತಳ್ಳಿಹಾಕಿದ್ದರು.

ಒಟ್ಟಿಗೆ ಓಡಾಡಿದ್ದರು

ಇದೀಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಆಮಿರ್ ಖಾನ್​ರ ಪುತ್ರಿ ಇರಾ ಖಾನ್​ರ ಆರತಕ್ಷತೆಯಲ್ಲಿ ಈ ಜೋಡಿ ಭಾಗಿಯಾಗಿತ್ತು.

ಆಮಿರ್ ಪುತ್ರಿ ವಿವಾಹ

ಆಮಿರ್ ಖಾನ್​ ಹಾಗೂ ನಾಗ ಚೈತನ್ಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇಬ್ಬರ ನಡುವೆ ಸ್ನೇಹವಿದೆ.

‘ಲಾಲ್ ಸಿಂಗ್ ಚಡ್ಡಾ’

ಶೋಭಿತಾ ದುಲಿಪಾಲ ಹಾಗೂ ಆಮಿರ್ ಖಾನ್ ಒಟ್ಟಿಗೆ ನಟಿಸಿಲ್ಲ ಆದರೆ ನಾಗ ಚೈತನ್ಯ ಜೊತೆ ಅವರಿಗೂ ಆಹ್ವಾನ ಹೋಗಿತ್ತು ಎನ್ನಲಾಗಿದೆ.

ಶೋಭಿತಾ ದುಲಿಪಾಲ

ನಾಗ ಚೈತನ್ಯ ಹಾಗೂ ಶೋಭಿತಾ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕೆಲ ತಿಂಗಳ ಹಿಂದೆ ಹರಿದಾಡಿತ್ತು.

ಸುದ್ದಿ ಹರಿದಾಡಿತ್ತು

ಆದರೆ ಈ ಗಾಳಿ ಸುದ್ದಿಯನ್ನು ನಾಗ ಚೈತನ್ಯ ತಳ್ಳಿ ಹಾಕಿದ್ದರು. ಶೋಭಿತಾ ಸಹ ಈ ಬಗ್ಗೆ ಮಾತನಾಡಿರಲಿಲ್ಲ.

ತಳ್ಳಿ ಹಾಕಿದ್ದರು ಚೈತನ್ಯ

ನಾಗ ಚೈತನ್ಯ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಸಾಯಿ ಪಲ್ಲವಿ ಜೊತೆಗೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾಗಳಲ್ಲಿ ಬ್ಯುಸಿ

2024ರ ಕ್ರಶ್ ಎಂದು ಕರೆಸಿಕೊಳ್ಳುತ್ತಿರುವ ಆಯೆಷಾ ಖಾನ್ ಯಾರು? ಹಿನ್ನೆಲೆ ಏನು?