ಈವರೆಗೆ ತಾವು ನಟಿಸಿರುವ ಸಿನಿಮಾಗಳಲ್ಲಿ ತಮಗೆ ಇಷ್ಟವಾದ, ಇಷ್ಟವಾಗದ ಸಿನಿಮಾ ಹೆಸರಿಸಿದ ನಟ ನಾಗಚೈತನ್ಯ

09 NOV 2023

ನಾಗಚೈತನ್ಯಗೆ ಮೊದಲಿಗೆ ಬಹಳ ಇಷ್ಟವಾದ ಸಿನಿಮಾ 'ಯೇ ಮಾಯ ಚೇಸಾವೆ' ಅಂದಹಾಗೆ ಈ ಸಿನಿಮಾದ ನಾಯಕಿ ಸಮಂತಾ, ಅದು ಅವರಿಗೆ ಮೊದಲ ಸಿನಿಮಾ, ನಾಗ ಚೈತನ್ಯಗೆ ಎರಡನೇ ಸಿನಿಮಾ.

'ಯೇ ಮಾಯ ಚೇಸಾವೆ'

ನಾಗಚೈತನ್ಯರ ಎರಡನೇ ಆಯ್ಕೆ 'ಮನಂ' ಇದು ಅವರ ಕುಟುಂಬ ಸದಸ್ಯರು ನಟಿಸಿದ ಸಿನಿಮಾ. ಇದರಲ್ಲಿಯೂ ಸಮಂತಾ ನಾಯಕಿ. ಇದೊಂದು ಸುಂದರ ಸಿನಿಮಾ.

'ಮನಂ'

ಆ ನಂತರದ ಆಯ್ಕೆ 'ಪ್ರೇಮಂ'. ಇದು ಮಲಯಾಳಂ ಸಿನಿಮಾದ ರೀಮೇಕ್. ಇದರಲ್ಲಿ ಸಮಂತಾ ಇರಲಿಲ್ಲ.

'ಪ್ರೇಮಂ'

ನಾಲ್ಕನೇ ಆಯ್ಕೆ 'ಮಜಿಲಿ'. ಇದು ನಾಗಚೈತನ್ಯರ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದ ನಾಯಕಿ ಸಮಂತಾ.

'ಮಜಿಲಿ'

ಐದನೇ ಆಯ್ಕೆ 'ಲವ್ ಸ್ಟೋರಿ'. ಶೇಖರ್ ಕಮ್ಮುಲ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿ. ಈ ಸಿನಿಮಾದ ಸಂದರ್ಭದಲ್ಲಿ ಸಮಂತಾ ಜೊತೆ ವಿಚ್ಛೇದನ ಪಡೆದುಕೊಂಡರು ಚೈ.

'ಲವ್ ಸ್ಟೋರಿ'

ಇನ್ನು ನಾಗಚೈತನ್ಯಗೆ ಇಷ್ಟವಾಗದ ಹಲವು ಸಿನಿಮಾಗಳು ಇವೆಯಂತೆ. ಅದರಲ್ಲಿ ಅತ್ಯಂತ ಇಷ್ಟವಾಗದ ಸಿನಿಮಾ ಎಂದರೆ 'ಬೆಜವಾಡ'.

'ಬೆಜವಾಡ'

ಬಾಲಿವುಡ್​ನಲ್ಲಿಯೂ ನಟ ಆಮಿರ್ ಖಾನ್ ಜೊತೆಗೆ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ ನಾಗ ಚೈತನ್ಯ

ಬಾಲಿವುಡ್​ ಸಿನಿಮಾ

ನಾಗ ಚೈತನ್ಯ ಪ್ರಸ್ತುತ ತಮ್ಮ 23ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಮೀನುಗಾರ ಸಮುದಾಯದ ಕತೆಯನ್ನು ಹೊಂದಿರುವ ಸಿನಿಮಾ.

23ನೇ ಸಿನಿಮಾ

ಮಲಯಾಳಂ ನಟ ದುಲ್ಕರ್ ಸಲ್ಮಾನ್ ಬಳಿ ಇರುವ ಕಾರು ಕಲೆಕ್ಷನ್ ನೋಡಿದ್ದೀರಾ?