Nithya Menen8

ರಾಷ್ಟ್ರಪ್ರಶಸ್ತಿ ಗೆದ್ದಿರುವ ನಿತ್ಯ ಮೆನನ್ ನಟಿಸಿರುವ ಕನ್ನಡ ಸಿನಿಮಾಗಳಿವು

1614AUG 2024

 Manjunatha

TV9 Kannada Logo For Webstory First Slide
Nithya Menen7

ಕನ್ನಡದ ನಟ ರಿಷಬ್ ಶೆಟ್ಟಿಗೆ ‘ಕಾಂತಾರ’ ಸಿನಿಮಾಕ್ಕೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿದೆ. ನಟಿ ನಿತ್ಯಾ ಮೆನನ್​ಗೆ ತಮಿಳು ಸಿನಿಮಾಕ್ಕೆ ಪ್ರಶಸ್ತಿ ದೊರೆತಿದೆ.

    ನಿತ್ಯಾ ಮೆನನ್​ಗೆ ಪ್ರಶಸ್ತಿ

Nithya Menen5

ನಿತ್ಯಾ ಮೆನನ್ ಅವರಿಗೆ ಧನುಶ್ ಜೊತೆಗೆ ನಟಿಸಿದ್ದ ‘ತಿರುಚಿತ್ರಂಬಲಂ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ದೊರಕಿದೆ. ಅಂದಹಾಗೆ ನಿತ್ಯಾ, ಕನ್ನಡದ ನಟಿಯೇ.

‘ತಿರುಚಿತ್ರಂಬಲಂ’ ಸಿನಿಮಾ

Nithya Menen6

ಕರ್ನಾಟಕದವರೇ ಆದ ನಿತ್ಯಾ ಮೆನನ್ ಮಿಂಚಿರುವುದು, ಮಿಂಚುತ್ತಿರುವುದು ಪರಭಾಷೆ ಸಿನಿಮಾಗಳಲ್ಲಿ, ಕನ್ನಡದ ಕೆಲವು ಸಿನಿಮಾಗಳಲ್ಲಿಯೂ ನಿತ್ಯಾ ಮೆನನ್ ನಟಿಸಿದ್ದಾರೆ.

   ಕನ್ನಡತಿ ನಿತ್ಯಾ ಮೆನನ್

ನಿತ್ಯಾ ಮೆನನ್ ಮೊದಲ ಸಿನಿಮಾ 2006ರಲ್ಲಿ ಮೊದಲು ‘7 ಓ ಕ್ಲಾಕ್’ ಸಿನಿಮಾದಲ್ಲಿ ನಟಿಸಿದ್ದರು. ಅದು ಅವರ ಮೊದಲ ಕನ್ನಡ ಸಿನಿಮಾ.

ಕನ್ನಡದ ಮೊಲದ ಸಿನಿಮಾ

2009 ರಲ್ಲಿ ‘ಜೋಶ್’ ಹೆಸರಿನ ಸಿನಿಮಾದಲ್ಲಿ ನಿತ್ಯಾ ನಾಯಕಿಯಾಗಿ ನಟಿಸಿದರು. ಈ ಸಿನಿಮಾದ ‘ತಂತಾನೆ ತನ್ನಂತಾನೆ’ ಹಾಡು ನೆನಪಿರಬೇಕಲ್ಲವೆ.

  ಸೂಪರ್ ಹಿಟ್ ‘ಜೋಶ್’

2013 ರಲ್ಲಿ ಬಂದ ‘ಮೈನಾ’ ಸಿನಿಮಾದಲ್ಲಿ ಅಂಗವಿಕಲೆ ಪಾತ್ರದಲ್ಲಿ ನಿತ್ಯಾ ನಟಿಸಿದ್ದರು. ಈ ಸಿನಿಮಾದ ನಾಯಕ ಚೇತನ್ ಅಹಿಂಸ. ನಾಗಶೇಖರ್ ನಿರ್ದೇಶಿಸಿದ್ದರು.

2013 ರಲ್ಲಿ ಬಂದ ‘ಮೈನಾ’

2016 ರಲ್ಲಿ ನಿತ್ಯಾ ಮೆನನ್ ‘ಕೋಟಿಗೊಬ್ಬ 2’ ಸಿನಿಮಾದಲ್ಲಿ ಕಿಚ್ಚು ಸುದೀಪ್​ಗೆ ನಾಯಕಿಯಾಗಿ ನಟಿಸಿದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು.

 ‘ಕೋಟಿಗೊಬ್ಬ 2’ ಸಿನಿಮಾ

ಇದೆಲ್ಲದರ ಜೊತೆಗೆ 2011 ರಲ್ಲಿ ‘ಐದೊಂದ್ಲ ಐದು’ ಹೆಸರಿನ ಅಂಥಾಲಜಿ ಸಿನಿಮಾದಲ್ಲಿಯೂ ನಿತ್ಯಾ ಮೆನನ್ ನಟಿಸಿದ್ದರು. 

  2011  ‘ಐದೊಂದ್ಲ ಐದು’

ಅಂದಹಾಗೆ ಸ್ವತಃ ನಿತ್ಯಾ ಮೆನನ್ ಹೇಳಿಕೊಂಡಿರುವಂತೆ ಅವರಿಗೆ ಓದಲು, ಬರೆಯಲು ಬರುವ ಏಕೈಕ ಭಾಷೆ ಎಂದರೆ ಅದು ಕನ್ನಡ ಮಾತ್ರವೇ ಅಂತೆ.

 ಕನ್ನಡ ಮಾತ್ರ ಬರೋದು

ಪ್ರಭಾಸ್ ಜೊತೆ ನಟಿಸಲಿದ್ದಾರೆಯೇ ಮೃಣಾಲ್ ಠಾಕೂರ್, ನಟಿ ಹೇಳಿದ್ದೇನು?