Pic credit - Instagram

Author: Rajesh Duggumane

ಕ್ಲಾಸಿ ಲುಕ್​​ನಲ್ಲಿ ಮಿಂಚಿದ ನಟಿ ನಿಶಾ ರವಿಕೃಷ್ಣನ್

26 May 2026

ಹೊಸ ಲುಕ್

ಕಿರುತೆರೆ ಸುಂದರಿ ನಿಶಾ ರವಿಕೃಷ್ಣನ್ ತಮ್ಮ ಇತ್ತೀಚಿನ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.

ಗಟ್ಟಿಮೇಳ ಖ್ಯಾತಿ

'ಗಟ್ಟಿಮೇಳ' ಧಾರಾವಾಹಿಯ ರೌಡಿ ಬೇಬಿ ಅಮೂಲ್ಯಾ ಪಾತ್ರದ ಮೂಲಕ ಇವರು ಕರ್ನಾಟಕದ ಮನೆಮನಾಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದ್ದಾರೆ.

ಅಣ್ಣಯ್ಯ ಸೀರಿಯಲ್

ಸದ್ಯ ಜೀ ಕನ್ನಡ ವಾಹಿನಿಯ ಜನಪ್ರಿಯ 'ಅಣ್ಣಯ್ಯ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಾ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ.

ತೆಲುಗು ಎಂಟ್ರಿ

ಕನ್ನಡದ ಜೊತೆಗೆ ತೆಲುಗು ಕಿರುತೆರೆ ಲೋಕಕ್ಕೂ ಕಾಲಿಟ್ಟು ಅಲ್ಲಿಯೂ ತಮ್ಮ ಅದ್ಭುತ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ.

ಸರಳ ಉಡುಗೆ

ವೈರಲ್ ಆಗಿರುವ ಹೊಸ ಫೋಟೋಗಳಲ್ಲಿ ನಿಶಾ ಅವರು ಸಿಂಪಲ್ ಆದ ತಿಳಿ ಬಿಳಿ ಬಣ್ಣದ ಸಾಂಪ್ರದಾಯಿಕ ಟಾಪ್ ಧರಿಸಿ ಕಂಗೊಳಿಸಿದ್ದಾರೆ.

ನೈಸರ್ಗಿಕ ಸೌಂದರ್ಯ:

ಯಾವುದೇ ಭಾರಿ ಮೇಕಪ್ ಇಲ್ಲದೆ, ಹಣೆಯ ಮೇಲೊಂದು ಸಣ್ಣ ಬೊಟ್ಟು ಇಟ್ಟುಕೊಂಡು ತಮ್ಮ ನ್ಯಾಚುರಲ್ ಲುಕ್‌ನಿಂದ ಮಿಂಚಿದ್ದಾರೆ.

ಆಕರ್ಷಕ ಉಂಗುರ

ಅವರ ಕೈಬೆರಳಿನಲ್ಲಿರುವ ಆಕರ್ಷಕ ನೀಲಿ ಬಣ್ಣದ ಹೂವಿನ ವಿನ್ಯಾಸದ ದೊಡ್ಡ ಉಂಗುರ ಎಲ್ಲರ ಗಮನ ಸೆಳೆಯುವಂತಿದೆ.