ನಿತ್ಯಾ ಮೆನನ್ ವರ್ತನೆ ಬಗ್ಗೆ ತೀವ್ರ ಟೀಕೆ, ಅಂಥಹದ್ದೇನು ಮಾಡಿದರು ನಟಿ?
10 Jan 2025
Manjunatha
ನಿತ್ಯಾ ಮೆನನ್ ಕರ್ನಾಟಕ ಮೂಲದ ನಟಿ, ಹಲವು ಸಂದರ್ಶನಗಳಲ್ಲಿ ತಾವು ಕನ್ನಡತಿ ಎಂದು ನಿತ್ಯಾ ಮೆನನ್ ಹೇಳಿಕೊಂಡಿದ್ದಾರೆ.
ಕನ್ನಡತಿ ನಿತ್ಯಾ ಮೆನನ್
ನಿತ್ಯಾ ಮೆನನ್ ಚಿತ್ರರಂಗಕ್ಕೆ ಕಾಲಿಟ್ಟು ಎರಡು ದಶಕಗಳೇ ಆಗಿವೆ. ಆದರೆ ಎಂದಿಗೂ ವಿವಾದಗಳನ್ನು ಹತ್ತಿರವೂ ಬಿಟ್ಟುಕೊಂಡಿಲ್ಲ.
ಎರಡು ದಶಕಗಳೇ ಆಗಿವೆ
ತಾವಾಯ್ತು ತಮ್ಮ ನಟನೆ ಆಯ್ತು ಎಂದಿರುವ ವೃತ್ತಿಪರ ನಟಿ ನಿತ್ಯಾ, ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.
ವೃತ್ತಿಪರ ನಟಿ ನಿತ್ಯಾ
ಆದರೆ ಇತ್ತಿಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಿತ್ಯಾ ಮೆನನ್ ತೋರಿದ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ಎದುರಿಸುತ್ತಿದ್ದಾರೆ.
ನಿತ್ಯಾ ವಿರುದ್ಧ ಆಕ್ರೋಶ
ತಮ್ಮದೇ ಸಿನಿಮಾದ ಆಡಿಯೋ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿತ್ಯಾ, ಸಿನಿಮಾದ ನಟ, ನಿರ್ದೇಶಕ, ನಿರ್ಮಾಪಕರನ್ನು ಅಪ್ಪಿಕೊಂಡು ಮಾತನಾಡಿಸಿದರು.
ಅಲ್ಲಿ ನಡೆದಿದ್ದು ಏನು?
ಆದರೆ ಅದೇ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಆಯೋಜಕ ನಟಿಗೆ ಹ್ಯಾಂಡ್ ಶೇಕ್ ಮಾಡಲು ಮುಂದಾದಾಗ ಅದನ್ನು ನಿತ್ಯಾ ನಿರಾಕರಿಸಿದರು.
ಭೇದ ಭಾವ ಮಾಡಿದರು
ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿತ್ಯಾರ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಆಕ್ರೋಶ ವ್ಯಕ್ತವಾಗಿದೆ
ಸ್ಟಾರ್ ನಟನ ಮಗನೊಂದಿಗೆ ಮುಂಬೈನಲ್ಲಿ ಕಾಣಿಸಿಕೊಂಡ ಶ್ರೀಲೀಲಾ, ಏನು ಸಮಾಚಾರ?
ಇದನ್ನೂ ನೋಡಿ