ಸ್ಟಾರ್ ನಟನ ಮಗನೊಂದಿಗೆ ಮುಂಬೈನಲ್ಲಿ ಕಾಣಿಸಿಕೊಂಡ ಶ್ರೀಲೀಲಾ, ಏನು ಸಮಾಚಾರ?
09 Jan 2025
Manjunatha
ಕನ್ನಡದ ನಟಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ದೊಡ್ಡ ಸ್ಟಾರ್ಗಳೊಟ್ಟಿಗೆ ನಟಿಸುತ್ತಿದ್ದಾರೆ.
ಕನ್ನಡದ ನಟಿ ಶ್ರೀಲೀಲಾ
ತೆಲುಗು ಚಿತ್ರರಂಗದ ನಂಬರ್ 1 ನಟಿಯಾಗಿರುವ ಶ್ರೀಲೀಲಾ ಶೀಘ್ರವೇ ಬಾಲಿವುಡ್ಗೆ ಪದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಇದೆ.
ತೆಲುಗಿನ ನಂಬರ್ 1 ನಟಿ
ಶ್ರೀಲೀಲಾ ಬಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯ ನಡುವೆ, ಶ್ರೀಲೀಲಾರ ಚಿತ್ರ, ಕೆಲ ವಿಡಿಯೋಗಳು ಬೇರೆಯದ್ದೇ ಅನುಮಾನ ಮೂಡಿಸಿವೆ.
ಅನುಮಾನ ಮೂಡಿಸಿವೆ
ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಖಾನ್ ಜೊತೆಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ ಶ್ರೀಲೀಲಾ.
ಸೈಫ್ ಅಲಿ ಖಾನ್ ಪುತ್ರ
ಇಬ್ರಾಹಿಂ ಖಾನ್ ಹಾಗೂ ಶ್ರೀಲೀಲಾ ಒಟ್ಟಿಗೆ ಇರುವ ಚಿತ್ರಗಳು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಚಿತ್ರ, ವಿಡಿಯೋ ವೈರಲ್
ಅಸಲೀ ವಿಷಯವೆಂದರೆ ಇಬ್ರಾಹಿಂ ಖಾನ್ ನಟಿಸಲಿರುವ ಮೊದಲ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಂತೆ.
ಅಸಲಿ ವಿಷಯ ಬೇರೆ
ಇಬ್ಬರೂ ಸಹ ನಿರ್ಮಾಣ ಸಂಸ್ಥೆಯ ಕಚೇರಿಯಿಂದ ಹೊರಗೆ ಹೋಗುವಾಗ ಪಾಪರಾಟ್ಜಿಗಳು ಚಿತ್ರಗಳನ್ನು ತೆಗೆದು ವೈರಲ್ ಮಾಡಿವೆ.
ನಿರ್ಮಾಣ ಸಂಸ್ಥೆಯ ಕಚೇರಿ
ಪಾಕಿಸ್ತಾನಿ ನಟಿಗೆ ಧನ್ಯವಾದ ಹೇಳಿದ ಮೃಣಾಲ್ ಠಾಕೂರ್, ಕಾರಣ?
ಇದನ್ನೂ ನೋಡಿ