ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ಸ್ಟಾರ್ ದಂಪತಿಯ ಪುತ್ರಿ: ಯಾರೀಕೆ?

24 Jan 2024

Author : Manjunatha

ಬಾಲಿವುಡ್​ನ ಸ್ಟಾರ್ ದಂಪತಿಗಳಾದ ಅಜಯ್ ದೇವಗನ್ ಹಾಗೂ ಕಾಜೊಲ್ ಪುತ್ರಿ ನೈಸಾ ಚಿತ್ರರಂಗಕ್ಕೆ ಬರುತ್ತಿದ್ದಾರೆ.

ಅಜಯ್-ಕಾಜೊಲ್ ಪುತ್ರಿ

ನೈಸಾ ದೇವಗನ್, ಬಾಲಿವುಡ್​ನ ಹಾಟ್​ ನೆಪೊಕಿಡ್​ಗಳಲ್ಲಿ ಒಬ್ಬರು. ಶೀಘ್ರವೇ ಇವರ ಸಿನಿಮಾ ಪದಾರ್ಪಣೆ ನಡೆಯಲಿದೆ.

 ಹಾಟ್​ ನೆಪೊಕಿಡ್​

ಈಗಾಗಲೇ ಇನ್​ಸ್ಟಾಗ್ರಾಂನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹಾಟ್ ಬ್ಯೂಟಿಯಾಗಿ ಗುರುತಿಸಿಕೊಂಡಿದ್ದಾರೆ ನೈಸಾ.

ಇನ್​ಸ್ಟಾ ಹಾಟ್ ಬ್ಯೂಟಿ

ಕೆಲವು ಮೂಲದ ಪ್ರಕಾರ, ‘ಆರ್ಚೀಸ್’ ಸಿನಿಮಾದಲ್ಲಿಯೇ ನೈಸಾ ನಟಿಯಾಗಿ ಎಂಟ್ರಿ ಕೊಡಬೇಕಿತ್ತು. ಆದರೆ ಆಗಲಿಲ್ಲ.

ಕೈತಪ್ಪಿದ  ಅವಕಾಶ

ಇದೀಗ ನೈಸಾ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ನೀಡಲಿದ್ದಾರೆ.

ಬಾಲಿವುಡ್​ಗೆ ಎಂಟ್ರಿ

ನೈಸಾರ ಪೋಷಕರಾದ ಅಜಯ್ ಹಾಗೂ ಕಾಜೋಲ್ ಬಾಲಿವುಡ್​ನ ಯಶಸ್ವಿ ನಟ-ನಟಿಯರು. ಅದೇ ಯಶಸ್ಸು ನೈಸಾಗೆ ಸಿಗುತ್ತದೆಯೇ ಕಾದು ನೋಡಬೇಕಿದೆ.

ಯಶಸ್ಸು ಸಿಗುತ್ತದೆಯೇ

ಹಲವು ಬಾಲಿವುಡ್ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವ ನೈಸಾ, ಈಗಾಗಲೆ ಕೆಲವು ಆಡಿಷನ್, ನಟನಾ ತರಬೇತಿಗಳನ್ನು ಮುಗಿಸಿದ್ದಾರೆ.

ಬಾಲಿವುಡ್ ಪಾರ್ಟಿ

ನೈಸಾ ಚಿತ್ರರಂಗಕ್ಕೆ ಬರುತ್ತಿರುವ ಬಗ್ಗೆ ಅಜಯ್ ಅಥವಾ ಕಾಜೋಲ್ ಈವರೆಗೆ ಮಾತನಾಡಿಲ್ಲ, ಆದರೆ ಅವರೇ ಮುಂದೆ ನಿಂತು ಮಗಳಿಗೆ ನಟನೆ ತರಬೇತಿ ಕೊಡಿಸಿದ್ದಾರಂತೆ.

ನಟನೆ ತರಬೇತಿ

ನೈಸಾರ ಹೊಸ ಸಿನಿಮಾದ ಘೋಷಣೆ ಇನ್ನು ಕೆಲವೇ ತಿಂಗಳಲ್ಲಿ ಆಗಲಿದೆ. ಇದೇ ವರ್ಷ ಸಿನಿಮಾ ಬಿಡುಗಡೆಯೂ ಆಗಲಿದೆ.

ಹೊಸ ಸಿನಿಮಾ ಘೋಷಣೆ

‘ಲೈಟ್ ಆಗೇ ಇರುತ್ತೆ’ ಈ ಬಾಲನಟಿಯ ನೆನಪಿದೆಯಾ? ಈಗ ಹೇಗಾಗಿದ್ದಾರೆ ನೋಡಿ