‘ಅನಿಮಲ್’ ಸಿನಿಮಾಕ್ಕೆ ನಾಯಕಿ ಆಗಬೇಕಿದ್ದಿದ್ದು ರಶ್ಮಿಕಾ ಅಲ್ಲ, ಇನ್ಯಾರು?

‘ಅನಿಮಲ್’ ಸಿನಿಮಾಕ್ಕೆ ನಾಯಕಿ ಆಗಬೇಕಿದ್ದಿದ್ದು ರಶ್ಮಿಕಾ ಮೊದಲ ಆಯ್ಕೆಯಲ್ಲ, ಒಪ್ಪಂದದ ಬಳಿಕ ನಟಿ ಬದಲಾಗಿದ್ದು ಹೇಗೆ?

12 DEC 2023

TV9 Kannada Logo For Webstory First Slide

Author : Manjunatha

‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ, ರಶ್ಮಿಕಾರ ಅಭಿನಯದ ಬಗ್ಗೆ ಸಾಕಷ್ಟು ಪ್ರಶಂಸೆಗಳು ಸಹ ವ್ಯಕ್ತವಾಗಿವೆ.

ರಶ್ಮಿಕಾ ಮಂದಣ್ಣ

ಆದರೆ ರಶ್ಮಿಕಾಗೆ ಮುಂಚೆ ನಾಯಕಿ ಗೀತಾಂಜಲಿ ಪಾತ್ರಕ್ಕೆ ಆಯ್ಕೆ ಆಗಿದ್ದಿದ್ದು ಬೇರೆ ನಟಿ. ನಟಿ ಜೊತೆ ಒಪ್ಪಂದ ಸಹ ಆಗಿತ್ತು, ಆದರೆ ಕೊನೆ ಹಂತದಲ್ಲಿ ಬದಲಾವಣೆಯಾಯ್ತು.

ಗೀತಾಂಜಲಿ ಪಾತ್ರ

ಪರಿಣೀತಿ ಚೋಪ್ರಾ ಅನ್ನು ‘ಅನಿಮಲ್’ ಸಿನಿಮಾದ ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿದ್ದರು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ.

ಪರಿಣೀತಿ ಚೋಪ್ರಾ

ಪರಿಣೀತಿ ಚೋಪ್ರಾರ ಲುಕ್ ಟೆಸ್ಟ್ ಆಗಿತ್ತು, ಕೆಲವು ಬಾರಿ ರೀಡಿಂಗ್​ ಸಹ ಆಯ್ತು. ಆದರೆ ಸಂದೀಪ್ ರೆಡ್ಡಿ ವಂಗಾ, ಪರಿಣೀತಿಯನ್ನು ಕೊನೆಯ ಕ್ಷಣದಲ್ಲಿ ಕೈಬಿಟ್ಟರು.

ಲುಕ್ ಟೆಸ್ಟ್ ಆಗಿತ್ತು

ಗೀತಾಂಜಲಿ ಪಾತ್ರಕ್ಕೆ ಬೇಕಾದ ಅಮಾಯಕತೆ ಪರಿಣೀತಿ ಚೋಪ್ರಾ ಬಳಿ ಇರಲಿಲ್ಲ. ನಾನು ಸಾಕಷ್ಟು ಯೋಚಿಸಿ ಈ ನಿರ್ಧಾರ ಮಾಡಿದೆ ಎಂದಿದ್ದಾರೆ ಸಂದೀಪ್.

ಸಂದೀಪ್ ರೆಡ್ಡಿ ನಿರ್ಧಾರ

‘ನಾನು ಪರಿಣೀತಿ ಚೋಪ್ರಾಗೆ ಕ್ಷಮೆ ಸಹ ಕೇಳಿದೆ. ಅವರು ಬೇಸರ ಮಾಡಿಕೊಂಡರಾದರೂ ಕೊನೆಗೆ ಸರಿ ಎಂದರು. ಆದರೆ ನನಗೆ ಅವರಲ್ಲಿ ಗೀತಾಂಜಲಿ ಕಾಣಲಿಲ್ಲ, ಹಾಗಾಗಿ ನಿರ್ಣಯ ಮಾಡಲೇ ಬೇಕಾಯ್ತು ಎಂದಿದ್ದಾರೆ.

ಕ್ಷಮೆ ಕೇಳಿದ ಸಂದೀಪ್

ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ಒಂದೂವರೆ ವರ್ಷದ ಮುಂಚೆಯೇ ಪರಿಣೀತಿ ಜೊತೆಗೆ ಒಪ್ಪಂದವಾಗಿತ್ತಂತೆ ಆದರೆ ಚಿತ್ರೀಕರಣ ಇನ್ನೇನು ಪ್ರಾರಂಭಿಸಬೇಕು ಎಂದಾಗ ಬದಲಾವಣೆ ಮಾಡಲಾಯ್ತು.

ಬದಲಾವಣೆ ಮಾಡಲಾಯ್ತು

‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಗೀತಾಂಜಲಿ ಹೆಸರಿನ ಪಾತ್ರದಲ್ಲಿ ನಟಸಿದ್ದಾರೆ. ರಣ್​ಬೀರ್ ಕಪೂರ್ ಪತ್ನಿಯ ಪಾತ್ರವದು.

ನಾಯಕಿ ಗೀತಾಂಜಲಿ

ಲೈಕ್ ಒತ್ತಿ ವಿವಾದ ಮೈಮೇಲೆಳೆದುಕೊಂಡ ‘ಕೆಜಿಎಫ್’ ಸುಂದರಿ