Pic credit - Instagram

Author: Rajesh Duggumane

ಜೈಲಲ್ಲಿ ಆತ್ಮ ಚರಿತ್ರೆ ಬರವಣಿಗೆ ಆರಂಭಿಸಿದ ಪವಿತ್ರಾ ಗೌಡ 

11 June 2026

ಕಂಬಿ ಎಣಿಕೆ

ಜೈಲಿನಲ್ಲಿ ನಟ ದರ್ಶನ್ ಸಂಪೂರ್ಣ ಮೌನವಾಗಿದ್ದರೆ, ಎ1 ಆರೋಪಿ ಪವಿತ್ರಾ ಗೌಡ ಕಥೆಯೇ ಬೇರೆಯಾಗಿದೆ.

ಆತ್ಮಚರಿತ್ರೆ ಲೇಖನ

ಪರಪ್ಪನ ಅಗ್ರಹಾರ ಜೈಲಿನ ಕತ್ತಲ ಕೋಣೆಯಲ್ಲೇ ಪವಿತ್ರಾ ಗೌಡ ಈಗ ತಮ್ಮ ಆತ್ಮಚರಿತ್ರೆ ಬರೆಯುತ್ತಿದ್ದಾರೆ.

ಬಿಳಿ ಹಾಳೆ

ಜೈಲು ಸಿಬ್ಬಂದಿಯಿಂದ ಪ್ರತಿದಿನ ಬಿಳಿ ಹಾಳೆಗಳನ್ನು ಪಡೆದು ಪೆನ್ಸಿಲ್ ಮೂಲಕವೇ ಇತಿಹಾಸ ದಾಖಲಿಸುತ್ತಿದ್ದಾರೆ.

ನನ್ನ ಕಥೆ

ತಾನೇನು, ತನ್ನ ಹಿನ್ನೆಲೆ ಏನು ಮತ್ತು ತಾನು ಏನು ಮಾಡಿದ್ದೇನೆ ಎಂಬುದನ್ನು ವಿವರವಾಗಿ ಬರೆಯುತ್ತಿದ್ದಾರೆ.

ಯೋಗಕ್ಕೂ ಬರಲಿಲ್ಲ

ವಿಶ್ವ ಯೋಗ ದಿನಾಚರಣೆಯ ವಿಶೇಷ ಅಭ್ಯಾಸಕ್ಕೂ ಬಾರದೇ ಪವಿತ್ರಾ ಬರವಣಿಗೆಯಲ್ಲೇ ಮುಳುಗಿರುವುದು ಕಂಡುಬಂದಿದೆ.

ಸಮಯ ಕಳೆಯಲು

 ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಆತ್ಮಚರಿತ್ರೆ ಬರೆಯುತ್ತಾ ಪವಿತ್ರಾ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ.

ರಹಸ್ಯ ಕಥನ

ಪವಿತ್ರಾ ಗೌಡ ಬರೆಯುತ್ತಿರುವ ಈ ರಹಸ್ಯ ಪುಸ್ತಕದಲ್ಲಿ ಯಾವೆಲ್ಲಾ ವಿಷಯಗಳಿರಬಹುದು ಎಂಬ ಕುತೂಹಲ ಮೂಡಿದೆ.