ಬಿಗ್​ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ವಿಚಾರಣೆಗೆ ಬಿಗ್​ಬಾಸ್ ಮನೆಗೆ ಬಂದರೇ ಪೊಲೀಸರು?

14 NOV 2023

ನಟಿ ತನಿಷಾ ಕುಪ್ಪಂಡ ಬಿಗ್​ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಯಾಗಿ ಬಿಗ್​ಬಾಸ್ ಮನೆಯಲ್ಲಿದ್ದಾರೆ.

ತನಿಷಾ ಕುಪ್ಪಂಡ

ಬಿಗ್​ಬಾಸ್ ಮನೆಯಲ್ಲಿ ತನಿಷಾ ಕುಪ್ಪಂಡ ಆಡಿರುವ ಮಾತೊಂದು ವಿವಾದಕ್ಕೆ ಕಾರಣವಾಗಿದೆ.

ಮಾತಿನಿಂದ ವಿವಾದ

ಭೋವಿ ಸಮುದಾಯದ ಭಾವನೆಗಳಿಗೆ ಧಕ್ಕೆ ಆಗುವ ಮಾತೊಂದನ್ನು ತನಿಷಾ ಕುಪ್ಪಂಡ ಆಡಿದ್ದಾರೆ ಎನ್ನಲಾಗಿದೆ.

ಭೋವಿ ಸಮುದಾಯ

ತನಿಷಾ ಕುಪ್ಪಂಡ ವಿರುದ್ಧ ಭೋವಿ ಸಮುದಾಯದ ಮುಖಂಡರು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲು

ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಷಾ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

ಎಫ್​ಐಆರ್ ನಮೂದು

ತನಿಷಾ ಕುಪ್ಪಂಡ ವಿಚಾರಣೆಗಾಗಿ ಪೊಲೀಸರು ಬಿಗ್​ಬಾಸ್ ಮನೆ ಪ್ರವೇಶಿಸಿದ್ದಾರೆ ಎನ್ನಲಾಗುತ್ತಿದೆ.

ಬಿಗ್​ಬಾಸ್​ನಲ್ಲಿ ಪೊಲೀಸ್

ಬಿಗ್​ಬಾಸ್ ಮನೆಯ ಒಳಗೆ ತನಿಷಾ ಕುಪ್ಪಂಡ ಅವರಿಂದ ಪೊಲೀಸರು ಹೇಳಿಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ತನಿಷಾ ಹೇಳಿಕೆ

ಪೊಲೀಸರು ತನಿಷಾರ ಹೇಳಿಕೆ ಪಡೆದಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಬಿಗ್​ಬಾಸ್ ಆಯೋಜಕರು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಸ್ಪಷ್ಟನೆ ಇಲ್ಲ

ಹೃತಿಕ್ ರೋಷನ್ ಗರ್ಲ್​ಫ್ರೆಂಡ್ ಸಬಾ ಅಜಾದ್ ಯಾರು? ಹಿನ್ನೆಲೆ ಏನು?