Pic credit - Instagram

Author: Rajesh Duggumane

ರುಕ್ಮಿಣಿ ವಸಂತ್​ಗೆ ಮುಜುಗರ ತಂದವರಿಗೆ ನಡುಕ ಶುರು 

10 June 2026

ದೂರು ದಾಖಲು

ನಟಿ ರುಕ್ಮಿಣಿ ವಸಂತ್ ಅವರ ಅಶ್ಲೀಲ ಎಐ ಮಾರ್ಫ್ ಫೋಟೋ ಹಂಚಿದ ಕಿಡಿಗೇಡಿಗಳ ವಿರುದ್ಧ ಸಿಸಿಬಿ ಸೈಬರ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪೊಲೀಸರ ಅಲರ್ಟ್

ಸಾಮಾಜಿಕ ಜಾಲತಾಣಗಳಲ್ಲಿ ನಟಿಯ ತೇಜೋವಧೆ ಮಾಡಲು ಅಶ್ಲೀಲ ಚಿತ್ರ ಪೋಸ್ಟ್ ಮಾಡಿದ ವಿಕೃತಕಾಮಿಗಳ ಪತ್ತೆಗೆ ಸೈಬರ್ ತಂಡಗಳು ಜಾಲ ಬೀಸಿವೆ.

ಸಿಸಿಬಿ ಪತ್ರ

ವಿವಾದಿತ ಫೋಟೋ ಅಪ್‌ಲೋಡ್ ಮಾಡಲಾದ ಜಾಲತಾಣಗಳ ಎಲ್ಲಾ ಸರ್ವಿಸ್ ಪ್ರೊವೈಡರ್ ಕಂಪನಿಗಳಿಗೆ ಸಿಸಿಬಿ ಸೈಬರ್ ಪೊಲೀಸರು ತುರ್ತು ಪತ್ರ ಬರೆದಿದ್ದಾರೆ.

ಮಾಹಿತಿ ಮನವಿ

ಹತ್ತಾರು ನಕಲಿ ಐಡಿಗಳ ಮೂಲಕ ಈ ಅಶ್ಲೀಲ ಎಐ ಪೋಸ್ಟ್ ಹಂಚಿಕೊಂಡಿರುವ ಕಿಡಿಗೇಡಿಗಳ ಸಂಪೂರ್ಣ ವಿವರ ನೀಡುವಂತೆ ಪೊಲೀಸರು ಕೋರಿದ್ದಾರೆ.

ಐಡಿ ವಿವರ

ಕೆಲವೇ ದಿನಗಳಲ್ಲಿ ಆರೋಪಿಗಳ ಜಾಲತಾಣಗಳ ಐಡಿ ಮತ್ತು ಐಪಿ ಅಡ್ರೆಸ್ ವಿವರಗಳು ಸಿಸಿಬಿ ಸೈಬರ್ ಪೊಲೀಸ್ ಅಧಿಕಾರಿಗಳ ಕೈಸೇರಲಿವೆ.

ಹಳೇ ಕೇಸ್

ಈ ಹಿಂದೆ ನಟಿ ರಮ್ಯಾ ಹಾಗೂ ವಿಜಯಲಕ್ಷ್ಮಿ ಬಗ್ಗೆ ಅಶ್ಲೀಲ ಕಾಮೆಂಟ್ ಹಾಕಿದ್ದ ಎಲ್ಲಾ ವಿಕೃತ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದರು.

ಬಿಗಿ ಬಲೆ

ಹಳೇ ಪ್ರಕರಣಗಳ ಮಾದರಿಯಲ್ಲೇ ಈಗ ನಟಿ ರುಕ್ಮಿಣಿ ಕೇಸ್‌ನಲ್ಲೂ ತಂತ್ರಜ್ಞಾನ ದುರುಪಯೋಗಪಡಿಸಿಕೊಂಡ ಸೈಬರ್ ಅಪರಾಧಿಗಳ ಬಂಧನಕ್ಕೆ ಸಿಸಿಬಿ ಸಜ್ಜಾಗಿದೆ.