ಎರಡು ವರ್ಷಗಳ ಬಳಿಕ ಮತ್ತೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಮರಳಿದ ನಟಿ ಪೂಜಾ ಹೆಗ್ಡೆ

17 May 2024

Author : Manjunatha

ಕೆಲ ವರ್ಷಗಳ ಹಿಂದಷ್ಟೆ ತೆಲುಗು, ತಮಿಳಿನ ಟಾಪ್ ನಟಿಯಾಗಿದ್ದರು ಪೂಜಾ ಹೆಗ್ಡೆ. ಹೆಚ್ಚು ಸಂಭಾವನೆ ಪಡೆವ ನಟಿಯಾಗಿ ಹೆಸರು ಮಾಡಿದ್ದರು.

ಟಾಪ್ ನಟಿಯಾಗಿದ್ದರು

ತೆಲುಗು ಚಿತ್ರರಂಗದಲ್ಲಿ ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನಟಿ ಪೂಜಾ ಹೆಗ್ಡೆ ನೀಡಿದ್ದರು. ಸ್ಟಾರ್ ನಟರೊಟ್ಟಿಗೆ ನಟಿಸಿದ್ದರು.

     ನಟಿ ಪೂಜಾ ಹೆಗ್ಡೆ

ಆದರೆ ಹಠಾತ್ತನೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪೂಜಾ ಹೆಗ್ಡೆಗೆ ಅವಕಾಶಗಳು ಇಲ್ಲವಾಯ್ತು. ಒಮ್ಮೆಲೆ ಬೇಡಿಕೆ ಕುಸಿಯಿತು.

ಹಠಾತ್ ಬೇಡಿಕೆ ಕುಸಿಯಿತು

ಆದರೆ ಈಗ ಪೂಜಾ ಹೆಗ್ಡೆ ದಕ್ಷಿಣ ಭಾರತ ಚಿತ್ರರಂಗಕ್ಕೆ ಮರಳಿದ್ದಾರೆ. ಅದೂ ಬರೋಬ್ಬರಿ ಎರಡು ವರ್ಷಗಳ ಬಳಿಕ.

ಎರಡು ವರ್ಷಗಳ ಬಳಿಕ

ಪೂಜಾ ಹೆಗ್ಡೆ ಇದೀಗ ಹೊಸದೊಂದು ತಮಿಳು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟ ಸೂರ್ಯ ನಾಯಕ.

ಹೊಸ ತಮಿಳು ಸಿನಿಮಾ

ಸೂರ್ಯ ನಟಿಸಿ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಲಿದ್ದಾರೆ.

   ಕಾರ್ತಿಕ್ ಸುಬ್ಬರಾಜು 

ಪೂಜಾ ಹೆಗ್ಡೆ ಹೊಸ ಸಿನಿಮಾದಲ್ಲಿ ಗಟ್ಟಿ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೊಬ್ಬ ಹೋರಾಟಗಾರ್ತಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ.

ಪೂಜಾ ಹೊಸ ಸಿನಿಮಾ

ಸದ್ಯ ‘ಕನಗುವ’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಸೂರ್ಯ, ಆ ಸಿನಿಮಾ ಮುಗಿದ ಕೂಡಲೇ ಹೊಸ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

    ‘ಕನಗುವ’ ಸಿನಿಮಾ

ಪೂಜಾ ಹೆಗ್ಡೆ ಪ್ರಸ್ತುತ ಬಾಲಿವುಡ್​ನ ‘ದೇವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಶಾಹಿದ್ ಕಪೂರ್ ನಾಯಕ.

        ‘ದೇವ’ ಸಿನಿಮಾ

ತೆಲುಗು ಚಿತ್ರರಂಗದ ಸ್ಟಾರ್ ನಟನ ಸಿನಿಮಾ ಅವಕಾಶವನ್ನು ನಿರಾಕರಿಸಿ ಸುದ್ದಿಯಾಗಿದ್ದಾರೆ ‘ಸೀತಾ ಮಹಾಲಕ್ಷ್ಮಿ’