ಅವರಿಗೆ ಸಿಗುತ್ತಿರುವ ಅವಕಾಶ ನಮಗಿಲ್ಲ: ಪೂಜಾ ಹೆಗ್ಡೆ ಬೇಸರ

27 Mar 2025

 Manjunatha

ಪೂಜಾ ಹೆಗ್ಡೆ ಪ್ಯಾನ್ ಇಂಡಿಯಾ ನಟಿ. ದಕ್ಷಿಣ ಭಾರತ ಹಾಗೂ ಬಾಲಿವುಡ್​ ಎರಡರಲ್ಲೂ ನಟಿಸುತ್ತಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

ದಕ್ಷಿಣ ಭಾರತದಲ್ಲಿ ಸಿಕ್ಕ ಯಶಸ್ಸು ಮತ್ತು ಅವಕಾಶಗಳು ಅವರಿಗೆ ಬಾಲಿವುಡ್ ಸಿನಿಮಾಗಳಲ್ಲಿ ಸಿಕ್ಕಿಲ್ಲ.

   ಬಾಲಿವುಡ್​ನಲ್ಲಿ ಕಡಿಮೆ

ಬಾಲಿವುಡ್​ನಿಂದ ತುಸು ಅಂತರ ಕಾಯ್ದುಕೊಂಡೇ ಇದ್ದ ಪೂಜಾ ಹೆಗ್ಡೆ, ಬಾಲಿವುಡ್​ನಲ್ಲಿ ಎಂಥಹಾ ಅನ್ಯಾಯ ನಡೆಯುತ್ತಿದೆ ಎಂಬುದು ಹೇಳಿದ್ದಾರೆ.

  ದೂರ ಉಳಿದಿದ್ದಾರೆ ನಟಿ

ಇಲ್ಲಿ ಸ್ಟಾರ್ ಕಿಡ್ಸ್​ ಅಥವಾ ಸಿನಿಮಾ ಕುಟುಂಬದವರಿಗೆ ಸಿಗುವ ಅವಕಾಶ ನಮ್ಮಂಥಹಾ ಹೊರಗಿನವರಿಗೆ ಸಿಗಲ್ಲ ಎಂದಿದ್ದಾರೆ.

   ನಮಗೆ ಅವಕಾಶ ಸಿಗಲ್ಲ

ಅವರಿಗೆ ಮೊದಲ, ಎರಡನೇ, ಮೂರನೇ ಸಿನಿಮಾಕ್ಕೆ ದೊಡ್ಡ ದೊಡ್ಡ ನಿರ್ದೇಶಕರೊಟ್ಟಿಗೆ ನಟಿಸುವ ಅವಕಾಶ ಸಿಗುತ್ತೆ ಎಂದಿದ್ದಾರೆ.

     ದೊಡ್ಡ ನಿರ್ದೇಶಕರು

ಆದರೆ ನಮ್ಮಂಥಹವರಿಗೆ ಅಂಥಹಾ ನಿರ್ದೇಶಕರ ಜೊತೆ ಕೆಲಸ ಮಾಡುವುದು ಕನಸಷ್ಟೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

          ನಮಗೆ ಕನಸಷ್ಟೆ

ಈಗಲೂ ಸಹ ಎಷ್ಟೋ ಜನ ಸ್ಟಾರ್ ನಿರ್ದೇಶಕರುಗಳು ಪೂಜಾ ಹೆಗ್ಡೆ ಸಂದೇಶಗಳಿಗೆ ಪ್ರತಿಕ್ರಿಯೆ ಸಹ ಮಾಡುವುದಿಲ್ಲವಂತೆ.

    ಪೂಜಾ ಹೆಗ್ಡೆ ಸಂದೇಶ

ಆದರೆ ಸ್ಟಾರ್ ಕಿಡ್ಸ್​ಗಳಿಗೆ ದೊಡ್ಡ ನಿರ್ದೇಶಕರು, ನಿರ್ಮಾಪಕರನ್ನು ಭೇಟಿ ಆಗುವುದು ಅವರೊಟ್ಟಿಗೆ ಕೆಲಸ ಮಾಡುವುದು ಸುಲಭ.

    ನಮ್ಮನ್ನು ಭೇಟಿ ಆಗಲ್ಲ

ನಮ್ಮಂಥಹಾ ಹೊರಗಿನಿಂದ ಬಂದವರಿಗೆ ಆ ನಿರ್ದೇಶಕ, ನಿರ್ಮಾಪಕರು ಬಾಗಿಲುಸಹ ತೆಗೆಯುವುದಿಲ್ಲ ಎಂದಿದ್ದಾರೆ ನಟಿ.

   ಬಾಗಿಲು ಸಹ ತೆಗೆಯಲ್ಲ

ಖಾಸಗಿ ವಿಡಿಯೋ ಲೀಕ್, ಯಾರು ಈ ಶ್ರುತಿ ನಾರಾಯಣ್