ದಳಪತಿ ವಿಜಯ್ ಸಿನಿಮಾಕ್ಕೆ ಎಂಟ್ರಿಕೊಟ್ಟ ನಟಿ ಪ್ರಿಯಾಮಣಿ

04 OCT 2024

 Manjunatha

ಕನ್ನಡತಿ ನಟಿ ಪ್ರಿಯಾಮಣಿ ಚಿತ್ರರಂಗಕ್ಕೆ ಬಂದು ಎರಡು ದಶಕಕ್ಕೂ ಹೆಚ್ಚು ಸಮಯವಾಗಿದೆ. ಈಗಲೂ ಬೇಡಿಕೆಯಲ್ಲಿದ್ದಾರೆ.

ಕನ್ನಡತಿ ನಟಿ ಪ್ರಿಯಾಮಣಿ

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಎಲ್ಲ ಭಾಷೆಗಳಲ್ಲಿಯೂ ನಟಿಸಿರುವ ಪ್ರಿಯಾಮಣಿ, ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

    ನಟನೆಗೆ ರಾಷ್ಟ್ರಪ್ರಶಸ್ತಿ

ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾಮಣಿ, ಎಲ್ಲ ಭಾಷೆಗಳಲ್ಲಿಯೂ ಸೂಪರ್ ಹಿಟ್ ಸಿನಿಮಾ ನೀಡಿರುವ ನಟಿ.

   ಸೂಪರ್ ಹಿಟ್ ಸಿನಿಮಾ

ಇದೀಗ ದಳಪತಿ ವಿಜಯ್ ತಮ್ಮ ಕೊನೆಯ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

 ದಳಪತಿ ವಿಜಯ್ ಸಿನಿಮಾ

ವಿಜಯ್​ರ ಕೊನೆ ಸಿನಿಮಾದಲ್ಲಿ ಪೂಜಾ ಹೆಗ್ಡೆ, ಮಲಯಾಳಂನ ಮಮಿತಾ ಬೈಜು ಇದ್ದಾರೆ. ಅದರ ಜೊತೆಗೆ ಈಗ ಪ್ರಿಯಾಮಣಿಯೂ ಸೇರಿಕೊಂಡಿದ್ದಾರೆ.

 ಮೂವರು ನಾಯಕಿಯರು

ವಿಜಯ್​ರ 69ನೇ ಸಿನಿಮಾ ಇದಾಗಿದ್ದು, ಸಿನಿಮಾದಲ್ಲಿ ಪ್ರಿಯಾಮಣಿ ಸರ್ಕಾರಿ ಉನ್ನತಾಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ.

 ವಿಜಯ್​ರ 69ನೇ ಸಿನಿಮಾ

ಪ್ರಿಯಾಮಣಿ ಇದೀಗ ಮಲಯಾಳಂ, ಕನ್ನಡದ ಕೈಮರ ಹಾಗೂ ತಮಿಳಿನ ಒಂದು ಹೆಸರಿಡದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

   ಕೈಲಿರುವ ಸಿನಿಮಾಗಳು

3 ಕೋಟಿ ಸಿನಿಮಾದಿಂದ 500 ಕೋಟಿ ಸಿನಿಮಾ ಬಾಚಿಕೊಂಡ ನಟಿ