ಪ್ರಿಯಾಂಕಾ ಚೋಪ್ರಾ ಧರಿಸಿರುವ ಈ ನೆಕ್​ಲೆಸ್ ಬೆಲೆ 358 ಕೋಟಿ ರೂಪಾಯಿ, ಯಾಕಿಷ್ಟು ದುಬಾರಿ?

22 May 2024

Author : Manjunatha

ಪ್ರಿಯಾಂಕಾ ಚೋಪ್ರಾ ತಮ್ಮ ಹೈ ಎಂಡ್ ಫ್ಯಾಷನ್ ಸೆನ್ಸ್​ನಿಂದ ಸಖತ್ ಜನಪ್ರಿಯರು. ಪ್ರಿಯಾಂಕಾರ ಫ್ಯಾಷನ್ ಆಯ್ಕೆಗಳು ಐಶಾರಾಮಿಯಾಗಿಯೇ ಇರುತ್ತವೆ.

ಪ್ರಿಯಾಂಕಾ ಚೋಪ್ರಾ

ಈಗ ಹಾಲಿವುಡ್​ನಲ್ಲಿ ಸೆಟಲ್ ಆಗಿರುವ ಪ್ರಿಯಾಂಕಾ, ಹಲವು ವಿಶ್ವವಿಖ್ಯಾತ ಫ್ಯಾಷನ್ ಇವೆಂಟ್​ಗಳಲ್ಲಿ ಭಾಗವಹಿಸುತ್ತಾರೆ.

ಹಾಲಿವುಡ್​ನಲ್ಲಿ ಸೆಟಲ್

ಪ್ರಿಯಾಂಕಾ ಇತ್ತೀಚೆಗಷ್ಟೆ ರೋಮ್​ನಲ್ಲಿ ನಡೆದ ಬಲ್ಗಾರಿ ಅಟೆರೆನಾ ಇವೆಂಟ್​ನಲ್ಲಿ ಭಾಗಿಯಾಗಿದ್ದರು.

     ಬಲ್ಗಾರಿ ಅಟೆರೆನಾ 

ಆ ಇವೆಂಟ್​ನಲ್ಲಿ ಪ್ರಿಯಾಂಕಾ ಧರಿಸಿದ್ದ ನೆಕ್​ಲೆಸ್​ ಸಖತ್ ಗಮನ ಸೆಳೆಯಿತು. ವಿಶೇಷವಾಗಿ ಅದರ ಬೆಲೆ.

ಪಿಸಿ ಧರಿಸಿದ್ದ ನೆಕ್​ಲೆಸ್​ 

ಪ್ರಿಯಾಂಕಾ ಈ ಚಿತ್ರದಲ್ಲಿ ಧರಿಸಿರುವ ನೆಕ್​ಲೆಸ್​ ವಜ್ರದ್ದು, ಇದರ ಬೆಲೆ ಬರೋಬ್ಬರಿ 358 ಕೋಟಿ ರೂಪಾಯಿಗಳು!

358 ಕೋಟಿ ರೂಪಾಯಿ

ಪ್ರಿಯಾಂಕಾ ಧರಿಸಿರುವುದು ಸೆರ್ಪೆಂಟಿ ಅಟೆರೆನಾ ವಜ್ರದ ನೆಕ್​ಲೆಸ್, ಇದು 200 ಕ್ಯಾರೆಟ್​ನ ವಜ್ರದ ನೆಕ್​ಲೆಸ್ ಆಗಿದೆ.

  200 ಕ್ಯಾರೆಟ್​ನ ವಜ್ರ

ಒಂದೇ ವಜ್ರವನ್ನು ಕೆತ್ತಿ ಈ ನೆಕ್​ಲೆಸ್ ಮಾಡಲಾಗಿದೆ. ಈ ನೆಕ್​ಲೆಸ್ ಮಾಡಲು 117 ದಿನಗಳನ್ನು ತಯಾರಕರು ತೆಗೆದುಕೊಂಡಿದ್ದಾರೆ.

      ಒಂದೇ ವಜ್ರ ಕೆತ್ತಿ

ಪ್ರಿಯಾಂಕಾ ಚೋಪ್ರಾ ಧರಿಸಿರುವುದು ಬಲ್ಗೇರಿ ಬ್ರ್ಯಾಂಡ್​ನ ಸರ್ಪೆಂಟಿ ಕಲೆಕ್ಷನ್​ನ ಅಪ್ಪಟ ವಜ್ರದ ನೆಕ್​ಲೆಸ್. 

     ಬಲ್ಗೇರಿ  ಸರ್ಪೆಂಟಿ

ಬಲ್ಗೆರಿ ವಿಶ್ವದ ಅತ್ಯುತ್ತಮ ಆಭರಣ ತಯಾರಕ ಬ್ರ್ಯಾಂಡ್​ಗಳಲ್ಲಿ ಒಂದಾಗಿದೆ. ಈ ಹಿಂದೆ ಇದೇ ಸಂಸ್ಥೆಯ ಕೆಲವು ಆಭರಣಗಳನ್ನು ಪ್ರಿಯಾಂಕಾ ಧರಿಸಿದ್ದರು.

    ಆಭರಣ ತಯಾರಕ

ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ಧರಿಸಿರುವ ಈ ಪುಟ್ಟ ಬ್ಯಾಗಿನ ಬೆಲೆ ಕೆಲವು ಲಕ್ಷ ರೂಪಾಯಿಗಳು.