ತುಪ್ಪದ ಹುಡುಗಿ ಎಂದೇ ಕರೆಸಿಕೊಳ್ಳುವ ರಾಗಿಣಿ ದ್ವಿವೇದಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

24 May 2024

Author : Manjunatha

ನಟಿ ರಾಗಿಣಿ ದ್ವಿವೇದಿ ಇಂದು ತಮ್ಮ 35ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 

ನಟಿ ರಾಗಿಣಿ ದ್ವಿವೇದಿ

ರಾಗಿಣಿ ದ್ವಿವೇದಿ, ಮಂಗಳಮುಖಿಯರೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಂಗಳಮುಖಿಯರೊಟ್ಟಿಗೆ ಕೇಕ್ ಕತ್ತರಿಸಿದ್ದಾರೆ.

ಮಂಗಳಮುಖಿಯರೊಟ್ಟಿಗೆ

ಸ್ಮಶಾನದಲ್ಲಿ ಕೆಲಸ ಮಾಡುವವರು,ಬಿಬಿಎಂಪಿಯ ಸಿಬ್ಬಂದಿಗಳನ್ನು ಆಹ್ವಾನಿಸಿ ಅವರೊಟ್ಟಿಗೆ ಸಂಭ್ರಮ ಆಚರಿಸಿದ್ದಾರೆ. 

ಹುಟ್ಟುಹಬ್ಬ ಸಂಭ್ರಮ

ಸ್ವಚ್ಛತಾ ಸಿಬ್ಬಂದಿ, ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಇತರೆ ಕೆಲವರಿಗೆ ವಸ್ತ್ರ, ಆಹಾರ ಸಾಮಗ್ರಿ ಮುಂತಾದ ಅಗತ್ಯ ವಸ್ತುಗಳನ್ನ ವಿತರಿಸಿದ್ದಾರೆ ರಾಗಿಣಿ.

ಆಹಾರ ಸಾಮಗ್ರಿ ವಿತರಣೆ

ಕಳೆದ ಬಾರಿಯೂ ಸಹ ರಾಗಿಣಿ ದ್ವಿವೇದಿ ಸ್ವಚ್ಛತಾ ಸಿಬ್ಬಂದಿಗಳೊಟ್ಟಿಗೆ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದರು.

ರಾಗಿಣಿ ಸಮಾಜ ಸೇವೆ

2009 ರಲ್ಲಿ ‘ವೀರ ಮದಕರಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಗಿಣಿ, ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ.

    2009 ರಲ್ಲಿ  ಎಂಟ್ರಿ

ಕನ್ನಡ ಮಾತ್ರವೇ ಅಲ್ಲದೆ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳ ಸಿನಿಮಾಗಳಲ್ಲಿಯೂ ರಾಗಿಣಿ ನಟಿಸಿದ್ದಾರೆ.

ಬಹುಭಾಷಾ ನಟಿ ರಾಗಿಣಿ

ರಾಗಿಣಿ ದ್ವಿವೇದಿ ಹೆಸರು ಡ್ರಗ್ಸ್ ಪ್ರಕರಣದಲ್ಲಿಯೂ ಕೇಳಿ ಬಂದಿತ್ತು, ರಾಗಿಣಿಯ ಬಂಧನವೂ ಆಗಿತ್ತು. ಈಗ ಅದೆಲ್ಲದರಿಂದ ಹೊರಬಂದಂತಿದೆ ನಟಿ.

ಡ್ರಗ್ಸ್ ಪ್ರಕರಣದಲ್ಲಿ ಹೆಸರು

ರಾಗಿಣಿ ದ್ವಿವೇದಿ ಪ್ರಸ್ತುತ ‘ವೃಷಭ’ ಮತ್ತು ‘ಸಾರಿ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

‘ವೃಷಭ’ ಮತ್ತು ‘ಸಾರಿ’

ನಟಿ ಶ್ರುತಿ ಹಾಸನ್ ಮೊದಲ ಬಾರಿಗೆ ಬ್ರೇಕ್ ಅಪ್ ಬಗ್ಗೆ ಮಾತನಾಡಿದ್ದಾರೆ, ಈಗ ಶ್ರುತಿ ಸಿಂಗಲ್ಲಾ?