ಭಾರತದ ಜನಪ್ರಿಯ ನಟಿ ರಕುಲ್ ಪ್ರೀತ್ ಸಿಂಗ್ ಮದುವೆಯ ಸಂಭ್ರಮದಲ್ಲಿದ್ದಾರೆ. ಗೆಳೆತಿಯರೊಟ್ಟಿಗೆ ಬ್ಯಾಚುಲರ್ ಪಾರ್ಟಿ ಮಾಡುತ್ತಿದ್ದಾರೆ.

04 Feb 2024

Author : Manjunatha

ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ರಕುಲ್ ಪ್ರೀತ್ ಸಿಂಗ್, ಈಗ ಪ್ಯಾನ್ ಇಂಡಿಯಾ ನಟಿ.

ಕನ್ನಡ ಮೂಲಕ ಎಂಟ್ರಿ

ತೆಲುಗು, ತಮಿಳಿನಲ್ಲಿ ಟಾಪ್ ನಟಿಯರಲ್ಲಿ ಒಬ್ಬರೆನಿಸಿಕೊಂಡಿದ್ದ ರಕುಲ್, ಹಿಂದಿಯಲ್ಲಿಯೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ತೆಲುಗು ಟಾಪ್ ನಟಿ

ಇದೀಗ ನಟಿ ರಕುಲ್ ಪ್ರೀತ್ ಸಿಂಗ್ ಮದುವೆಯಾಗುತ್ತಿದ್ದಾರೆ. ತಮ್ಮ ಬಹು ಸಮಯದ ಗೆಳೆಯ ಜಾಕಿ ಬಗ್ನಾನಿಯೊಟ್ಟಿಗೆ ರಕುಲ್ ವಿವಾಹ ನಡೆಯಲಿದೆ.

ಮದುವೆಯಾಗುತ್ತಿದ್ದಾರೆ

ಮದುವೆಗೆ ಇನ್ನು ಕೆಲವು ದಿನಗಳು ಇರುವಂತೆಯೇ ರಕುಲ್ ಪ್ರೀತ್ ಸಿಂಗ್ ತಮ್ಮ ಗೆಳೆಯರು, ಗೆಳತಿಯರೊಟ್ಟಿಗೆ ಬ್ಯಾಚುಲರ್ ಪಾರ್ಟಿ ಮಾಡುತ್ತಿದ್ದಾರೆ.

ಬ್ಯಾಚುಲರ್ ಪಾರ್ಟಿ

ನಟಿಯರಾದ ಲಕ್ಷ್ಮಿ ಮಂಚು, ಪ್ರಜ್ಞಾ ಜೈಸ್ವಾಲ್ ಸೇರಿದಂತೆ ಇನ್ನೂ ಕೆಲವು ಗೆಳತಿಯರೊಟ್ಟಿಗೆ ರಕುಲ್ ಪ್ರೀತ್ ಸಿಂಗ್ ಬ್ಯಾಚುಲರ್ ಪಾರ್ಟಿ ಮಾಡುತ್ತಿದ್ದಾರೆ.

ಜೊತೆಯಲ್ಲಿ ಯಾರಿದ್ದಾರೆ

ಕೆಲವು ಆಪ್ತ ಗೆಳೆಯರ ಗುಂಪು ಕಟ್ಟಿಕೊಂಡು ಥಾಯ್​ಲೆಂಡ್​ಗೆ ಹೋಗಿರುವ ರಕುಲ್ ಅಲ್ಲಿಯೇ ಅದ್ಧೂರಿಯಾಗಿ ಪಾರ್ಟಿ ಮಾಡುತ್ತಿದ್ದಾರೆ.

ಅದ್ಧೂರಿಯಾಗಿ ಪಾರ್ಟಿ

ರುಕುಲ್ ಪ್ರೀತ್ ಸಿಂಗ್ ಕಳೆದ ಕೆಲವು ವರ್ಷಗಳಿಂದಲೂ ಉದ್ಯಮಿ, ನಿರ್ಮಾಪಕ, ನಟ ಜಾಕಿ ಬಗ್ನಾನಿಯೊಟ್ಟಿಗೆ ಪ್ರೀತಿಯಲ್ಲಿದ್ದಾರೆ.

ನಟ ಜಾಕಿ ಬಗ್ನಾನಿ

ಕೋವಿಡ್ ಸಮಯದಲ್ಲಿ ಈ ಇಬ್ಬರೂ ತಮ್ಮ ಪ್ರೀತಿಯನ್ನು ಬಹಿರಂಗ ಪಡಿಸಿದ್ದರು. ಇಬ್ಬರೂ ಒಟ್ಟಿಗಿರುವ ಚಿತ್ರ ಹಂಚಿಕೊಂಡಿದ್ದರು.

ಒಟ್ಟಿಗಿದ್ದ ರಕುಲ್-ಜಾಕಿ

ಇದೀಗ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಬಗ್ನಾನಿ ಅಧಿಕೃತವಾಗಿ ವಿವಾಹವಾಗುತ್ತಿದ್ದಾರೆ. ಬಾಲಿವುಡ್​ನ ಹಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ.

ಸೆಲೆಬ್ರಿಟಿಗಳಿಗೆ ಆಹ್ವಾನ

ಇವರೇ ನೋಡಿ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ನಾಯಕಿ ರಚನಾ ರೈ