ಇನ್ಸ್ಟಾಗ್ರಾಂ ರೀಲ್ಸ್ ಮಾಡುತ್ತಿದ್ದಾಕೆಯ ನಾಯಕಿ ಮಾಡಿದ ರಾಮ್ ಗೋಪಾಲ್ ವರ್ಮಾ, ಕೊಡಗಿನಲ್ಲಿ ಶೂಟಿಂಗ್
20 Mar 2024
Author : Manjunatha
ರಾಮ್ ಗೋಪಾಲ್ ವರ್ಮಾ, ಒಂದು ಕಾಲದ ಭಾರತದ ಟಾಪ್ ಸಿನಿಮಾ ನಿರ್ದೇಶಕ, ಇತ್ತೀಚೆಗೆ ತಮ್ಮ ಹೊಳಪು ಕಳೆದುಕೊಂಡಿರುವ ವರ್ಮಾ, ಬಿ-ಗ್ರೇಡ್ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.
ರಾಮ್ ಗೋಪಾಲ್
ಭಾರತೀಯ ಚಿತ್ರರಂಗಕ್ಕೆ ಹಲವು ಅತ್ಯುತ್ತಮ ನಿರ್ದೇಶಕ, ನಟರು, ತಂತ್ರಜ್ಞರನ್ನು ನೀಡಿರುವ ರಾಮ್ ಗೋಪಾಲ್ ವರ್ಮಾಗೆ, ಪ್ರತಿಭೆಗಳನ್ನು ಗುರುತಿಸುವ ವಿಶೇಷ ಪ್ರತಿಭೆ ಇದೆ.
ಪ್ರತಿಭಾವಂತ ನಿರ್ದೇಶಕ
ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದ ಮಲಯಾಳಿ ಚೆಲುವೆ ಶ್ರೀಲಕ್ಷ್ಮಿಯ ರೀಲ್ಸ್ಗಳನ್ನು, ಲುಕ್ಸ್ಗಳನ್ನು ಮೆಚ್ಚಿ, ಆಕೆಗೆ ಸಿನಿಮಾ ಆಫರ್ ನೀಡಿದ್ದರು ವರ್ಮಾ.
ಮಲಯಾಳಿ ಚೆಲುವೆ
ಅದರಂತೆ ಶ್ರೀಲಕ್ಷ್ಮಿಯನ್ನು ನಾಯಕಿಯನ್ನಾಗಿ ಹಾಕಿಕೊಂಡು ‘ಸೀರೆ’ (ಸ್ಯಾರಿ) ಹೆಸರಿನ ಸಿನಿಮಾ ಶುರು ಮಾಡಿ ಚಿತ್ರೀಕರಣ ಮಾಡುತ್ತಿದ್ದಾರೆ.
ಶ್ರೀಲಕ್ಷ್ಮಿ ನಾಯಕಿ
ಇತ್ತೀಚೆಗಷ್ಟೆ ಈ ಸಿನಿಮಾದ ಹಾಡೊಂದರ ಚಿತ್ರೀಕರಣವನ್ನು ಕೊಡಗಿನಲ್ಲಿ ಮುಗಿಸಿದ್ದಾರೆ ರಾಮ್ ಗೋಪಾಲ್ ವರ್ಮಾ. ನಟಿಯ ಚಿತ್ರವನ್ನು ಸಹ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕೊಡಗಿನಲ್ಲಿ ಚಿತ್ರೀಕರಣ
ಶ್ರೀಲಕ್ಷ್ಮಿ ಸತೀಶ್, ಸೀರೆಯುಟ್ಟು ತಮ್ಮ ಫೋಟೊ ಹಾಗೂ ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಅಂಥಹುದೇ ಒಂದು ವಿಡಿಯೋ ನೋಡಿದ್ದ ವರ್ಮಾ ಈ ಹುಡುಗಿಯನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದರು.
ರೀಲ್ಸ್ ಮೆಚ್ಚಿದ್ದ ವರ್ಮಾ
ಅಂತೆಯೇ ಕೆಲವರು ಶ್ರೀಲಕ್ಷ್ಮಿಯ ಐಡಿ ನೀಡಿದ್ದರು. ಆ ಹುಡುಗಿ ಸಿಕ್ಕ ಕೂಡಲೇ ‘ಸ್ಯಾರಿ’ (ಸೀರೆ) ಹೆಸರಿನ ಸಿನಿಮಾ ಘೋಷಣೆ ಮಾಡಿದ್ದರು ವರ್ಮಾ.
ಸ್ಯಾರಿ ಸಿನಿಮಾ ಘೋಷಣೆ
ಎರಡು ವರ್ಷದ ಹಿಂದೆ ಅಪ್ಸರಾ ರಾಣಿ ಹೆಸರಿನ ಚೆಲುವೆಯನ್ನು ಇದೇ ರೀತಿ ಚಿತ್ರರಂಗಕ್ಕೆ ಪರಿಚಯ ಮಾಡಿದ್ದರು. ವರ್ಮಾ ಜೊತೆ ಕೆಲಸ ಮಾಡಿದ ಬಳಿಕ ಹಲವು ಅವಕಾಶಗಳನ್ನು ಅಪ್ಸರಾ ಬಾಚಿಕೊಂಡರು.
ಚೆಲುವೆ ಅಪ್ಸರಾ ರಾಣಿ
ಇದೀಗ ಶ್ರೀಲಕ್ಷ್ಮಿ ಜೊತೆಗೆ ‘ಸ್ಯಾರಿ’ ಸಿನಿಮಾದ ಶೂಟಿಂಗ್ನಲ್ಲಿ ವರ್ಮಾ ಬ್ಯುಸಿಯಾಗಿದ್ದು, ಆದಷ್ಟು ಶೀಘ್ರವೇ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಶೀಘ್ರವೇ ಚಿತ್ರ ಬಿಡುಗಡೆ
ತಮನ್ನಾ ಭಾಟಿಯಾ ಧರಿಸಿರುವ ಈ ಕಪ್ಪು ಉಡುಪಿನ ಬೆಲೆ ಎಷ್ಟು ಲಕ್ಷ ರೂಪಾಯಿಗಳು ಗೊತ್ತೆ?