ಫಿಲಂಫೇರ್​ನಲ್ಲಿ ಪತಿ-ಪತ್ನಿ ಧಮಾಲ್: ರಣ್​ಬೀರ್ ಅತ್ಯುತ್ತಮ ನಟ, ಆಲಿಯಾ ಅತ್ಯುತ್ತಮ ನಟಿ

30 Jan 2024

Author : Manjunatha

ಫಿಲಂಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆಯಷ್ಟೆ ನಡೆದಿದ್ದು, ಆಲಿಯಾ ಭಟ್ ಹಾಗೂ ರಣ್​ಭಿರ್ ಕಪೂರ್ ಮಿಂಚಿದ್ದಾರೆ.

ಫಿಲಂಫೇರ್​ ಪ್ರದಾನ

ಫಿಲಂಫೇರ್​ನಲ್ಲಿ ರಣ್​ಬೀರ್ ಕಪೂರ್ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದರೆ ಆಲಿಯಾ ಭಟ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದಾರೆ.

ಇಬ್ಬರಿಗೂ ಪ್ರಶಸ್ತಿ

ರಣ್​ಬೀರ್ ಕಪೂರ್​ಗೆ ‘ಅನಿಮಲ್’ ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕರೆ, ಆಲಿಯಾಗೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ.

ಅತ್ಯುತ್ತಮ ನಟ-ನಟಿ

ರಣ್​ಬೀರ್ ಕಪೂರ್ ಹಾಗೂ ಆಲಿಯಾ ಒಟ್ಟಿಗೆ ವೇದಿಕೆ ಮೇಲೆ ನಿಂತು ಪ್ರಶಸ್ತಿಗಳನ್ನು ಹಿಡಿದು ಫೋಸು ಕೊಟ್ಟಿದ್ದಾರೆ.

ಫೋಸು ಕೊಟ್ಟಿದ್ದಾರೆ

ರಣ್​ಬೀರ್ ಕಪೂರ್ ಅಂತೂ ವೇದಿಕೆ ಮೇಲೆ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ‘ಅನಿಮಲ್’ ಸಿನಿಮಾದ ಹಾಡಿಗೆ ಮಾಡಿದ ಡ್ಯಾನ್ಸ್ ವೈರಲ್ ಆಗಿದೆ.

ಡ್ಯಾನ್ಸ್ ಮಾಡಿದ್ದಾರೆ

ಆಲಿಯಾ ಭಟ್ ಕಳೆದ ವರ್ಷ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದು ಈಗ ಫಿಲಂ ಫೇರ್ ಸಹ ದೊರೆತಿದೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ನಟನೆಗೆ ಆಲಿಯಾ ಭಟ್​ಗೆ ರಾಷ್ಟ್ರಪ್ರಶಸ್ತಿ ದೊರೆತಿದೆ.

ಗಂಗೂಬಾಯಿ...

ಇದೀಗ ರಣ್​ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಒಟ್ಟಿಗೆ ‘ಲವ್ ಆಂಡ್ ವಾರ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಲಿದ್ದಾರೆ.

‘ಲವ್ ಆಂಡ್ ವಾರ್’

ಆಲಿಯಾ ಹಾಗೂ ರಣ್​ಬೀರ್ ವಿವಾಹವಾದ ಮೇಲೆ ಇಬ್ಬರ ಅದೃಷ್ಟವೂ ಬದಲಾಗಿದೆ. ರಣ್​ಬೀರ್ ಹಿಟ್ ಮೇಲೆ ಹಿಟ್ ಹೊಡೆಯುತ್ತಿದ್ದಾರೆ.

ಅದೃಷ್ಟ ಬದಲಾಗಿದೆ

ಮುಂಚೆ ಪ್ಲೇಬಾಯ್ ಆಗಿ ಗುರುತಿಸಿಕೊಂಡಿದ್ದ ರಣ್​ಬೀರ್ ಕಪೂರ್ ಈಗ ಆಕ್ಷನ್ ಕಿಂಗ್ ಆಗಿ ಹೆಸರು ಮಾಡುತ್ತಿದ್ದಾರೆ.

ಆಕ್ಷನ್ ಕಿಂಗ್ 

ಫಿಲಂಫೇರ್ ವೇದಿಕೆ ಮೇಲೆ ಜಾನ್ಹವಿ ಕಪೂರ್ ಜಲ್ವಾ: ಇಲ್ಲಿವೆ ಚಿತ್ರಗಳು