ಬಿಗ್ ಬಾಸ್​ಗೆ ಬರೋ ವಿಚಾರದ ಬಗ್ಗೆ ಮಾತನಾಡಿದ ರಂಜನಿ ರಾಘವನ್

06 Oct 2023

Pic credit - instagram

‘ಬಿಗ್ ಬಾಸ್ ಕನ್ನಡ ಸೀಸನ್ 10’ ಆರಂಭಕ್ಕೆ ಕೆಲವೇ ದಿನ ಬಾಕಿ ಇದೆ. ರಂಜನಿ ದೊಡ್ಮನೆಗೆ ಬರಲಿದ್ದಾರೆ ಎನ್ನಲಾಗಿತ್ತು.

ಬಿಗ್ ಬಾಸ್

ರಂಜನಿ ರಾಘವನ್ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಅವರಿಗೆ ಬೇಡಿಕೆ ಇದೆ.

ಖ್ಯಾತ ನಟಿ

ಬಿಗ್ ಬಾಸ್​ಗೆ ಬರುವುದಿಲ್ಲ ಎಂದು ರಂಜನಿ ಅವರು ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.

ದೊಡ್ಮನೆಗೆ ಬರಲ್ಲ

‘ನಾನು ಬಿಗ್ ಬಾಸ್​ಗೆ ಹೋಗಲ್ಲ. ನನ್ನ ಕರಿಯರ್ ಪ್ಲಾನ್ ಬೇರೆ ಇದೆ. ಸೂಕ್ತ ಸಮಯದಲ್ಲಿ ತಿಳಿಸುವೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಇರಲಿ’

ಏನಂದ್ರು?

ಬಿಗ್ ಬಾಸ್ ಬಗ್ಗೆ ಕೆಲವರಿಗೆ ಅಸಮಾಧಾನ ಇದೆ. ‘ಇದು ಒಳ್ಳೆಯ ನಿರ್ಧಾರ’ ಎಂದು ಕೆಲವರು ಹೇಳಿದ್ದಾರೆ.

ಅಭಿಮಾನಿಗಳ ಮಾತು

ರಂಜನಿ ರಾಘವನ್ ಅವರು ಸಿನಿಮಾರಂಗದಲ್ಲಿ ಬ್ಯುಸಿ ಆಗೋಕೆ ನಿರ್ಧರಿಸಿದ್ದಾರೆ. ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಹೊಸ ಸಿನಿಮಾ?

‘ಕನ್ನಡತಿ’ ಧಾರಾವಾಹಿಯಲ್ಲಿ ರಂಜನಿ ಅವರು ಭುವನೇಶ್ವರಿ ಹೆಸರಿನ ಪಾತ್ರ ಮಾಡಿದ್ದರು. ಈ ಮೂಲಕ ಅವರು ಜನಪ್ರಿಯತೆ ಹೆಚ್ಚಿಸಿಕೊಂಡರು.

ಕನ್ನಡತಿ

ಏಕಾಏಕಿ ಏಕಿಷ್ಟು ಚ್ಯೂಸಿ ಆದರು ನಟಿ ಶ್ರದ್ಧಾ ಕಪೂರ್?