ಕಾಲು ಮುರಿದುಕೊಂಡು ಬೆಡ್ರೆಸ್ಟ್, ನಿರ್ದೇಶಕರಿಗೆ ಕ್ಷಮೆ ಕೇಳಿದ ರಶ್ಮಿಕಾ
12 Jan 2025
Manjunatha
ರಶ್ಮಿಕಾ ಮಂದಣ್ಣ ಈಗ ಭಾರತದ ಬಲು ಬೇಡಿಕೆಯ ನಟಿಯರಲ್ಲಿ ಒಬ್ಬರು. ಬಾಲಿವುಡ್ ಹಾಗೂ ದಕ್ಷಿಣ ಭಾರತ ಸಿನಿಮಾಗಳಲ್ಲಿ ಅವರು ಸಕತ್ ಬ್ಯುಸಿ
ಬಲು ಬೇಡಿಕೆಯ ನಟಿ
ಒಂದರ ಹಿಂದೊಂದು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಲೇ ಇದ್ದಾರೆ. ಹೊಸ ಹೊಸ ಸಿನಿಮಾಗಳಿಗೆ ಸಹಿ ಹಾಕುತ್ತಲೇ ಇದ್ದಾರೆ.
ಹೊಸ ಸಿನಿಮಾಗಳಿಗೆ ಸಹಿ
ಆದರೆ ಈಗ ರಶ್ಮಿಕಾ ಗಾಯಗೊಂಡು ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಇದರಿಂದ ತೊಂದರೆಗೆ ಒಳಗಾದವರಿಗೆ ಕ್ಷಮೆ ಕೇಳಿದ್ದಾರೆ.
ವಿಶ್ರಾಂತಿ ಪಡೆಯುತ್ತಿದ್ದಾರೆ
ಜಿಮ್ ಮಾಡುತ್ತಿದ್ದ ಸಮಯದಲ್ಲಿ ರಶ್ಮಿಕಾ ಮಂದಣ್ಣ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ವಿಶ್ರಾಂತಿಯಲ್ಲಿದ್ದಾರೆ.
ರಶ್ಮಿಕಾ ಕಾಲಿಗೆ ಪೆಟ್ಟು
ಇದರಿಂದಾಗಿ ಸಲ್ಮಾನ್ ಖಾನ್ ನಟನೆಯ ‘ಸಿಖಂಧರ್’ ಸೇರಿದಂತೆ ಇನ್ನೂ ಕೆಲ ಸಿನಿಮಾ ಚಿತ್ರೀಕರಣ ನಿಂತಿದ್ದು ಸಿನಿಮಾದ ನಿರ್ದೇಶಕರಿಗೆ ರಶ್ಮಿಕಾ ಕ್ಷಮೆ ಕೇಳಿದ್ದಾರೆ.
ಚಿತ್ರೀಕರಣ ನಿಂತಿದೆ
ನನ್ನ ಕಾಲುಗಳು ಜಿಗಿಯಲು ಫಿಟ್ ಆಗಿದಿಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ನಾನು ಶೀಘ್ರದಲ್ಲೇ ಸೆಟ್ ಗೆ ವಾಪಾಸ್ ಆಗ್ತೀನಿ ಎಂದಿದ್ದಾರೆ ರಶ್ಮಿಕಾ.
ಸೆಟ್ ಗೆ ವಾಪಾಸ್ ಆಗ್ತೀನಿ
ತಮ್ಮ ಗಾಯಗೊಂಡ ಕಾಲನ್ನು ತೋರಿಸುತ್ತಾ ಚಿತ್ರ ತೆಗೆಸಿಕೊಂಡಿರುವ ರಶ್ಮಿಕಾ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ
ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಧರಿಸಿರುವ ಈ ಉಡುಗೆಯ ಬೆಲೆ ಎಷ್ಟು ಲಕ್ಷ?
ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಧರಿಸಿರುವ ಈ ಉಡುಗೆಯ ಬೆಲೆ ಎಷ್ಟು ಲಕ್ಷ?
ಇದನ್ನೂ ನೋಡಿ