ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಜಪಾನ್​​ಗೆ ಭೇಟಿ ನೀಡಿದ್ದರು, ಅಲ್ಲಿ ಕಳೆದ ಸುಂದರ ಕ್ಷಣಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

14 Mar 2024

Author : Manjunatha

ನಟಿ ರಶ್ಮಿಕಾ ಮಂದಣ್ಣ ಇವೆಂಟ್ ಒಂದಕ್ಕಾಗಿ ಜಪಾನ್​ನ ಟೋಕಿಯೋಕ್ಕೆ ಭೇಟಿ ನೀಡಿದ್ದರು, ಇವೆಂಟ್ ಗೆ ಹಾಜರಿ ಹಾಕುವ ಜೊತೆಗೆ ಸಖತ್ ಎಂಜಾಯ್ ಸಹ ಮಾಡಿದ್ದಾರೆ.

ರಶ್ಮಿಕಾ ಇನ್ ಜಪಾನ್

ಜಪಾನ್​ನ ಟೋಕಿಯೋನಲ್ಲಿ ಕಳೆದ ಕೆಲವು ಮಧುರ ಕ್ಷಣಗಳ ಚಿತ್ರಗಳನ್ನು ರಶ್ಮಿಕಾ ಮಂದಣ್ಣ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮಧುರ ಕ್ಷಣಗಳ ಚಿತ್ರ

ಜಪಾನ್​ನಲ್ಲಿ ರಶ್ಮಿಕಾ ಮಂದಣ್ಣ ಸಖತ್ ಎಂಜಾಯ್ ಮಾಡಿದ್ದಾರೆ. ಚಾಕಲೇಟ್ ತಿನ್ನುತ್ತಾ, ಪ್ರವಾಸಿಯಾಗಿ ಜಪಾನ್​ನ ಹಲವು ನಗರಗಳನ್ನು ಸುತ್ತು ಹಾಕಿದ್ದಾರೆ.

ಜಪಾನ್​ ರಶ್ಮಿಕಾ ಮಂದಣ್ಣ

ಟೋಕಿಯೋದ ನೈಟ್ ಲೈಫ್ ಅನ್ನು ಎಂಜಾಯ್ ಮಾಡಿರುವ ರಶ್ಮಿಕಾ ಮಂದಣ್ಣ, ಗೆಳೆಯರೊಟ್ಟಿಗೆ ಪಬ್​ಗೆ ತೆರಳಿ ಪಾರ್ಟಿ ಸಹ ಮಾಡಿದ್ದಾರೆ. ಶಾಪಿಂಗ್ ಸಹ ಮಾಡಿದ್ದಾರೆ.

 ನೈಟ್ ಲೈಫ್ ಎಂಜಾಯ್

ಟೋಕಿಯೋನಲ್ಲಿ ಕೆಲವು ಸಂದರ್ಶನಗಳಲ್ಲಿ ಸಹ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದಾರೆ. ಹಲವು ಫೋಟೊಶೂಟ್​ಗಳನ್ನು ಸಹ ಮಾಡಿಸಿಕೊಂಡಿದ್ದಾರೆ.

ಸಂದರ್ಶನಗಳಲ್ಲಿ ಭಾಗಿ

ಅನಿಮೆ ಕಂಟೆಂಟ್​ನ ಅಭಿಮಾನಿ ಆಗಿರುವ ರಶ್ಮಿಕಾ ಮಂದಣ್ಣ ಅನಿಮೆ ಕುರಿತ ದೊಡ್ಡ ಇವೆಂಟ್​ನಲ್ಲಿ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದು, ಅನಿಮೆ ಜಗತ್ತಿನ ಹಲವು ಸೆಲೆಬ್ರಿಟಿಗಳ ಭೇಟಿಯಾಗಿದ್ದಾರೆ.

     ಅನಿಮೆ ಇವೆಂಟ್

ರಶ್ಮಿಕಾ ಮಂದಣ್ಣ ಪ್ರಸ್ತುತ ‘ಪುಷ್ಪ 2’ ಸಿನಿಮಾದಲ್ಲಿ ನಟಿಸುತ್ತಿದ್ದು, ಜಪಾನ್​ನಲ್ಲಿ ‘ಪುಷ್ಪ’ ಸಿನಿಮಾಕ್ಕೆ ಒಳ್ಳೆಯ ಕ್ರೇಜ್ ಇದೆ. ‘ಪುಷ್ಪ 2’ ಸಿನಿಮಾವನ್ನು ಭಾರತದ ಜೊತೆಗೆ ಜಪಾನ್​ನಲ್ಲಿಯೂ ಏಕಕಾಲಕ್ಕೆ ಬಿಡುಗಡೆ ಮಾಡುವುದಾಗಿ ರಶ್ಮಿಕಾ ಹೇಳಿದ್ದಾರೆ.

‘ಪುಷ್ಪ’ ಸಿನಿಮಾ ಕ್ರೇಜ್

ರಶ್ಮಿಕಾ ಮಂದಣ್ಣ ‘ಪುಷ್ಪ 2’ ಮಾತ್ರವೇ ಅಲ್ಲದೆ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಧನುಶ್ ಜೊತೆಗೆ ‘ಕುಬೇರ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಶೇಖರ್ ಕಮ್ಮುಲ ನಿರ್ದೇಶಕ.

ಧನುಶ್ ಜೊತೆ ರಶ್ಮಿಕಾ

ತೆಲುಗಿನಲ್ಲಿ ‘ಗರ್ಲ್​ಫ್ರೆಂಡ್’, ‘ರೇನ್​ಬೋ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ವಿಕ್ಕಿ ಕೌಶಲ್ ಜೊತೆಗೆ ‘ಛಾವಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಹಿಂದಿ ಸಿನಿಮಾ ಛಾವಾ

ನೋರಾ ಫತೇಹಿ ಧರಿಸಿರುವ ಈ ಪಾರದರ್ಶಕ ಉಡುಗೆಯ ಬೆಲೆ ಎಷ್ಟು ಲಕ್ಷ ಗೊತ್ತೆ?