ಯಾರು ಅಡ್ಡ ಬಂದರೂ ಆ ಪಾತ್ರ ಬಿಡುತ್ತಿರಲಿಲ್ಲ: ರಶ್ಮಿಕಾ ಮಂದಣ್ಣ ದಿಟ್ಟ ಹೇಳಿಕೆ
26 Jan 2025
Manjunatha
ರಶ್ಮಿಕಾ ಮಂದಣ್ಣ ತಾವಾಯ್ತು, ತಮ್ಮ ಸಿನಿಮಾ ಆಯ್ತು ಎಂದಿದ್ದಾರೆ. ಒಂದರ ಹಿಂದೊಂದು ಬಿಗ್ ಬಜೆಟ್ ಸ್ಟಾರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ನಟನೆಯ ಹಿಂದಿ ಸಿನಿಮಾ ‘ಛಾವಾ’ ಬಿಡುಗಡೆಗೆ ರೆಡಿಯಾಗಿದ್ದು, ಸಿನಿಮಾ ಬಿಡುಗಡೆಗೆ ಮುನ್ನ ಸಣ್ಣದಾಗಿ ವಿವಾದ ಎದ್ದಿದೆ.
‘ಛಾವಾ’ ಸಿನಿಮಾ ಬಿಡುಗಡೆ
ಶಿವಾಜಿ ಪುತ್ರ ಸಾಂಭಾಜಿ ಮಹಾರಾಜ್ ಕುರಿತಾದ ಕತೆಯನ್ನು ಸಿನಿಮಾ ಹೊಂದಿದ್ದು, ಸಿನಿಮಾದಲ್ಲಿ ಸಾಂಭಾಜಿಯ ಪತ್ನಿಯ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ.
ಸಾಂಭಾಜಿ ಮಹಾರಾಜ್
ಕನ್ನಡತಿ ರಶ್ಮಿಕಾರನ್ನು ಮರಾಠಿ ಮಹಾರಾಣಿಯ ಪಾತ್ರಕ್ಕೆ ಆಯ್ಕೆ ಮಾಡಿದ್ದಕ್ಕೆ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದರು.
ಮರಾಠಿ ಮಹಾರಾಣಿ ಪಾತ್ರ
ಕರ್ನಾಟಕದಲ್ಲಿ ಸಹ ಕನ್ನಡತಿಯೊಬ್ಬರು ಶಿವಾಜಿಯ ಪುತ್ರನ ಕುರಿತಾದ ಸಿನಿಮಾದಲ್ಲಿ ನಟಿಸಿದ್ದಕ್ಕೆ ಮೂಗು ಮುರಿದಿದ್ದರು.
ಕೆಲವೆಡೆ ಆಕ್ಷೇಪ
ಆದರೆ ಅದಕ್ಕೆಲ್ಲ ಸೊಪ್ಪು ಹಾಕದ ರಶ್ಮಿಕಾ, ಇಡೀ ಜಗತ್ತೇ ಎದುರು ನಿಂತಿದ್ದರೂ ನಾನು ಆ ಸಿನಿಮಾದ ಪಾತ್ರವನ್ನು ಬಿಟ್ಟುಕೊಡುತ್ತಿರಲಿಲ್ಲ ಎಂದಿದ್ದಾರೆ.
ಸೊಪ್ಪು ಹಾಕದ ರಶ್ಮಿಕಾ
ರಶ್ಮಿಕಾ ನಟಿಸಿರುವ ‘ಛಾವಾ’ ಸಿನಿಮಾದಲ್ಲಿ ವಿಕ್ಕಿ ಕೌಶಲ್ ನಾಯಕ. ಸಿನಿಮಾ ಫೆಬ್ರವರಿ 14ಕ್ಕೆ ತೆರೆಗೆ ಬರಲಿದೆ.
ವಿಕ್ಕಿ ಕೌಶಲ್ ನಾಯಕ
ಅನುಪಮಾ ಗೌಡಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ, ಯಾವ ಸಿನಿಮಾಕ್ಕೆ?
ಇದನ್ನೂ ನೋಡಿ