ಫಿಲ್ಟರ್ ಇಲ್ಲದೆ ಮಾತನಾಡಲಿದ್ದಾರೆ ರಶ್ಮಿಕಾ ಮಂದಣ್ಣ, ಬಯಲಾಗಲಿವೆ ಹಲವು ಗುಟ್ಟುಗಳು

15 Feb 2024

Author : Manjunatha

ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್​ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳನ್ನು ಬಾಚಿಕೊಳ್ಳುತ್ತಿದ್ದಾರೆ.

ರಶ್ಮಿಕಾ ಮಂದಣ್ಣ

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಇದ್ದ ರಶ್ಮಿಕಾಗೂ ಈಗಿನ ರಶ್ಮಿಕಾಗೂ ಅಜಗಜಾಂತರ ಅಂತರವಿದೆ. ವರ್ಷದಿಂದ ವರ್ಷಕ್ಕೆ ಮಾಗುತ್ತಿದ್ದಾರೆ ನಟಿ.

ಮಾಗುತ್ತಿದ್ದಾರೆ ನಟಿ

ರಶ್ಮಿಕಾರಷ್ಟು ಟ್ರೋಲಿಂಗ್ ಎದುರಿಸಿದ ಕರ್ನಾಟಕ ಮೂಲದ ಇನ್ನೊಬ್ಬ ನಟಿಯಿಲ್ಲ, ತಮ್ಮ ಮೇಲೆ ನಡೆದ ಟ್ರೋಲಿಂಗ್ ದಾಳಿಗೆ ಬಹುತೇಕ ಮೌನವನ್ನೇ ಉತ್ತರವಾಗಿಸಿದ್ದರು ರಶ್ಮಿಕಾ.

ಟ್ರೋಲಿಂಗ್ ದಾಳಿ

ಆದರೆ ಈಗ ರಶ್ಮಿಕಾ ಮಾತನಾಡಲಿದ್ದಾರೆ. ಫಿಲ್ಟರ್ ಇಲ್ಲದೆ ಹಲವು ವಿಷಯಗಳ ಬಗ್ಗೆ ತೆರೆದ ಮನಸ್ಸಿನಿಂದ ಮಾತನಾಡಲು ಸಜ್ಜಾಗಿದ್ದಾರೆ.

ಮಾತನಾಡಲಿದ್ದಾರೆ

ಬಾಲಿವುಡ್​ನ ಜನಪ್ರಿಯ ಟಾಕ್ ಶೋ ‘ನೋ ಫಿಲ್ಟರ್ ವಿತ್ ನೇಹಾ’ ಶೋನಲ್ಲಿ ರಶ್ಮಿಕಾ ಮಂದಣ್ಣ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ನೋ ಫಿಲ್ಟರ್ ವಿತ್ ನೇಹಾ

‘ನೋ ಫಿಲ್ಟರ್ ವಿತ್ ನೇಹಾ’ ಶೋನಲ್ಲಿ ನಿರೂಪಕಿ ನೇಹಾ ಧೂಪಿಯಾ ಖಾಸಗಿ, ವಿವಾದಾತ್ಮಕ ಪ್ರಶ್ನೆಗಳನ್ನು ಅತಿಥಿಗಳ ಬಳಿ ಕೇಳಿ ಉತ್ತರ ಪಡೆಯುತ್ತಾರೆ.

ನಿರೂಪಕಿ ನೇಹಾ 

ಇದೀಗ ರಶ್ಮಿಕಾ ಈ ಶೋಗೆ ಅತಿಥಿಯಾಗಿ ಹೋಗುತ್ತಿದ್ದು, ರಶ್ಮಿಕಾ ಸಹ ಖಾಸಗಿ ವಿಷಯಗಳ ಬಗ್ಗೆ, ವಿವಾದಗಳ ಬಗ್ಗೆ ಮಾತನಾಡುವುದು ಬಹುತೇಕ ಖಾತ್ರಿ.

ಮಾತನಾಡಲಿದ್ದಾರೆ

ವಿವಾದಗಳ ಬಗ್ಗೆ ಉತ್ತರ ನೀಡುತ್ತಾರೆಯೇ ಅಥವಾ ಹೊಸ ವಿವಾದಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಾರೆಯೇ ರಶ್ಮಿಕಾ ಎಂಬುದು ಎಪಿಸೋಡ್ ಪ್ರಸಾರವಾದ ಬಳಿಕ ತಿಳಿಯಲಿದೆ.

ಮಾತನಾಡಲಿದ್ದಾರೆಯೇ

ರಶ್ಮಿಕಾ ಮಂದಣ್ಣ ಪ್ರಸ್ತುತ ಕೆಲವು ಬಾಲಿವುಡ್ ಸಿನಿಮಾಗಳು ಹಾಗೂ ಕೆಲವು ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಬಾಲಿವುಡ್ ಸಿನಿಮಾ

ಸಮಂತಾ ಮಾತನಾಡಲಿದ್ದಾರೆ ಕೇಳಿಕೊಳ್ಳಲು ತಯಾರಿದ್ದೀರಾ?