ನಟಿ ಸಮಂತಾ ಈಗ ಮಾತುಗಾರ್ತಿ ಆಗಿದ್ದಾರೆ. ಸಮಂತಾ ನಿಮ್ಮೊಂದಿಗೆ ಮಾತನಾಡ್ತಾರಂತೆ ಕೇಳಿಸಿಕೊಳ್ತೀರಾ?

14 Feb 2024

Author : Manjunatha

ನಟಿ ಸಮಂತಾ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಸತತವಾಗಿ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ಸಮಂತಾ ಸಣ್ಣ ಬ್ರೇಕ್​ ತೆಗೆದುಕೊಂಡಿದ್ದಾರೆ.

ಚಿತ್ರರಂಗದಿಂದ ಬ್ರೇಕ್

ಕಳೆದ ಕೆಲ ವರ್ಷಗಳಲ್ಲಿ ಸಮಂತಾ ಸತತ ಆರೋಗ್ಯ ಸಮಸ್ಯೆಗಳನ್ನು ಸಹ ಎದುರಿಸಿದರು. ಸಮಂತಾ ಇನ್ನು ಗುಣಮುಖರಾಗುವುದೇ ಇಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು.

ಆರೋಗ್ಯ ಸಮಸ್ಯೆ

ಅನಾರೋಗ್ಯದ ಮಧ್ಯೆಯೂ ಶೂಟಿಂಗ್ ಮಾಡಿದ್ದ ಸಮಂತಾ, ಕೊನೆಗೆ ಆರೋಗ್ಯ ಸಮಸ್ಯೆಯನ್ನು ದಿಟ್ಟತನದಿಂದ ಎದುರಿಸಿದರು.

ದಿಟ್ಟತೆಯಿಂ ಎದುರಿಸಿದರು

ಇದೀಗ ಸಿನಿಮಾಗಳಿಂದ ಬ್ರೇಕ್ ಪಡೆದು ಆರೋಗ್ಯ ಸುಧಾರಣೆ ಹಾಗೂ ಪ್ರವಾಸದಲ್ಲಿ ತೊಡಗಿಕೊಂಡಿದ್ದಾರೆ. 

ಆರೋಗ್ಯ ಸುಧಾರಣೆ

ಪ್ರವಾಸ, ವೈಯಕ್ತಿಕ ಆರೋಗ್ಯದ ಜೊತೆಗೆ ಜನರಿಗಾಗಿ ಒಂದೊಳ್ಳೆ ಕಾರ್ಯಕ್ರಮವನ್ನು ಸಹ ಸಮಂತಾ ತಂದಿದ್ದಾರೆ. ಸಮಂತಾ ಪಾಡ್​ಕಾಸ್ಟ್ ಪ್ರಾರಂಭಿಸಿದ್ದಾರೆ.

ಸಮಂತಾ ಪಾಡ್​ಕಾಸ್ಟ್

ಆರೋಗ್ಯದ ಬಗ್ಗೆ ಸಮಂತಾ ಪಾಡ್​ಕಾಸ್ಟ್ ಒಂದನ್ನು ಮಾಡಿದ್ದಾರೆ. ಪಾಡ್​ಕಾಸ್ಟ್​ನ ಹೆಸರು ‘ಟೇಕ್ 20’ ಈ ಪಾಡ್​ಕಾಸ್ಟ್​ನಲ್ಲಿ ಆರೋಗ್ಯದ ಬಗ್ಗೆ ಸಮಂತಾ ಮಾತನಾಡಲಿದ್ದಾರೆ.

‘ಟೇಕ್ 20’ ಪಾಡ್​ಕಾಸ್ಟ್

ತಮ್ಮ ಅನಾರೋಗ್ಯ ಅದರಿಂದ ಹೊರಬಂದ ಬಗೆ, ಯಾವೆಲ್ಲ ಥೆರಪಿಗಳು ಸಹಾಯಕವಾಗಿದ್ದವು ಹೀಗೆ ತಮ್ಮ ಅನುಭವವನ್ನೇ ಆಧಾರವಾಗಿಟ್ಟುಕೊಂಡು ಜನರಿಗೆ ಸಮಂತಾ ಮಾಹಿತಿ ನೀಡಲಿದ್ದಾರೆ.

ಅನುಭವವೇ ಆಧಾರ

ಸಮಂತಾ ತಮ್ಮ ಪಾಡ್​ಕಾಸ್ಟ್​ನಲ್ಲಿ ವಿವಿಧ ಅನುಭವಿಗಳನ್ನು, ಆರೋಗ್ಯ ಪರಿಣಿತರನ್ನು ಕರೆತರಲಿದ್ದು, ಅವರಿಂದ ಮಾಹಿತಿಯನ್ನು ಹೊರತೆಗೆಯಲಿದ್ದಾರೆ.

ಮಾಹಿತಿಯ ಮಹಾಪೂರ

ಸಮಂತಾರ ಹೊಸ ಪಾಡ್​ಕಾಸ್ಟ್ ‘ಟೇಕ್ 20’ಯ ಪ್ರೋಮೋ ಇದೀಗ ಬಿಡುಗಡೆ ಆಗಿದ್ದು, ಮೊದಲ ಪಾಡ್​ಕಾಸ್ಟ್​ ಫೆಬ್ರವರಿ 19ರಂದು ಬಿಡುಗಡೆ ಆಗಲಿದೆ.

‘ಟೇಕ್ 20’ಯ ಪ್ರೋಮೋ

ಹೊಸ ರೆಸ್ಟೊರೆಂಟ್ ಪ್ರಾರಂಭಿಸಿದ್ದಾರೆ ಸನ್ನಿ ಲಿಯೋನಿ: ಎಲ್ಲಿ ಗೊತ್ತೆ?