ಬಾಲಿವುಡ್ ನಟಿ ಸನ್ನಿ ಲಿಯೋನಿ ಹೊಸ ರೆಸ್ಟೋರೆಂಟ್ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ. ಎಲ್ಲಿ ಗೊತ್ತೆ?

14 Feb 2024

Author : Manjunatha

ಮಾಜಿ ನೀಲಿ ಚಿತ್ರ ತಾರೆ, ಬಾಲಿವುಡ್​ನ ನಟಿ ಸನ್ನಿ ಲಿಯೋನಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಹೊಸ ರೆಸ್ಟೋರೆಂಟ್ ಒಂದನ್ನು ತೆರೆದಿದ್ದಾರೆ.

ಸನ್ನಿ ಲಿಯೋನಿ 

ಪತಿ ಡ್ಯಾನಿಯಲ್ ವೆಬರ್ ಜೊತೆ ಸೇರಿಕೊಂಡು ಸನ್ನಿ ಲಿಯೋನಿ ಈ ಹೊಸ ಉದ್ಯಮ ಪ್ರಾರಂಭ ಮಾಡಿದ್ದಾರೆ.

ಹೊಸ ಉದ್ಯಮ ಪ್ರಾರಂಭ

ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದ ಸೆಕ್ಟರ್ 123ರಲ್ಲಿ ಸನ್ನಿ ಲಿಯೋನಿ ಹೊಸ ರೆಸ್ಟೊರೆಂಟ್ ಆರಂಭಿಸಿದ್ದಾರೆ. ರೆಸ್ಟೊರೆಂಟ್​ನ ಹೆಸರು ‘ಚಿಕಾ ಲೊಕಾ’ ಎಂದು.

ಹೆಸರು ‘ಚಿಕಾ ಲೊಕಾ’

‘ಚಿಕಾ ಲೊಕಾ’ ಎಂದರೆ ತುಂಟ ಹುಡುಗಿ ಎಂದರ್ಥವಂತೆ. ಸನ್ನಿ ಲಿಯೋನಿ ಸಹ ತಮ್ಮನ್ನು ತಾವು ತುಂಟ ಹುಡುಗಿ ಎಂದೇ ಕರೆದುಕೊಂಡಿದ್ದು ಅದೇ ಹೆಸರನ್ನು ರೆಸ್ಟೊರೆಂಟ್​ಗೆ ಇಟ್ಟಿದ್ದಾರೆ.

ಹೆಸರಿನ ಅರ್ಥವೇನು

ಈ ರೆಸ್ಟೊರೆಂಟ್​ನಲ್ಲಿ ಹಲವು ದೇಶದ ಜನಪ್ರಿಯ ಆಹಾರ ಖಾದ್ಯಗಳನ್ನು ಸರ್ವ್ ಮಾಡಲಾಗುತ್ತದೆ. ಜೊತೆಗೆ ವಿವಿಧ ಬಗೆಯ ಕಾಕ್​ಟೆಲ್, ಮದ್ಯಗಳು ಸಹ ಲಭ್ಯವಿದೆ.

ಏನೇನು ಲಭ್ಯವಿದೆ?

ಈ ಜಾಗವನ್ನು ಪಾರ್ಟಿ ಮನಸ್ಥಿತಿಯವರಿಗಾಗಿ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ ಎಂದಿದ್ದಾರೆ ಸನ್ನಿ ಲಿಯೋನಿ ಮತ್ತು ಅವರ ತಂಡ.

 ಪಾರ್ಟಿ ಮಾಡುವವರಿಗೆ

ಕೆಲವು ದಿನಗಳ ಹಿಂದೆಯಷ್ಟೆ ಸನ್ನಿ ಲಿಯೋನಿ ಹಾಗೂ ಅವರ ಪತಿ ಡ್ಯಾನಿಯಲ್ ವೆಬರ್ ಅವರುಗಳು ಈ ರೆಸ್ಟೋರೆಂಟ್ ಅನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿದ್ದಾರೆ.

ಉದ್ಘಾಟನೆಯಾಗಿದೆ

ಸನ್ನಿ ಲಿಯೋನಿಗೆ ಸ್ವತಃ ಊಟವೆಂದರೆ ಬಹಳ ಪ್ರೀತಿಯಂತೆ, ವಿವಿಧ ದೇಶದ ಆಹಾರ ಖಾದ್ಯಗಳು ಅವುಗಳ ವಿಶೇಷತೆಗಳ ಬಗ್ಗೆ ಸನ್ನಿಗೆ ಅರಿವಿದೆಯಂತೆ.

ಊಟ ಅಚ್ಚುಮೆಚ್ಚು

ತಮ್ಮ ಅನುಭವ, ಪ್ಯಾಷನ್ ಎಲ್ಲವನ್ನೂ ಬೆರೆಸಿ ಈ ರೆಸ್ಟೊರೆಂಟ್ ಅನ್ನು ಪ್ರಾರಂಭ ಮಾಡಿರುವುದಾಗಿ ಸನ್ನಿ ಹೇಳಿದ್ದಾರೆ. 

ಸನ್ನಿಗೆ ಶುಭ ಕೋರಿ

‘ಪುಷ್ಪ 2’ ಸಿನಿಮಾದ ಐಟಂ ಹಾಡಿಗೆ ಕುಣಿಯಲಿದ್ದಾರೆ ಈ ಬಾಲಿವುಡ್ ಬೆಡಗಿ