ಗ್ಲಾಮರಸ್ ಬಟ್ಟೆ ತೊಟ್ಟು ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ ಹೆಜ್ಜೆ ಹಾಕಿದ ರಶ್ಮಿಕಾ ಮಂದಣ್ಣ

04 NOV 2023

ಬಾಲಿವುಡ್​ನಲ್ಲಿ ನೆಲೆಗೊಳ್ಳುವ ಪ್ರಯತ್ನದಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಮುಖೇಶ್ ಅಂಬಾನಿ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. 

ರಶ್ಮಿಕಾ ಮಂದಣ್ಣ

ಅದಕ್ಕೂ ಮುನ್ನ ಅಂಬಾನಿ ಮನೆಯಲ್ಲಿ ರಶ್ಮಿಕಾಗೆ ಅವಮಾನ ಮಾಡಲಾಗಿದೆ ಎಂದು ರಶ್ಮಿಕಾರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ರಶ್ಮಿಕಾಗೆ ಅವಮಾನ?

ಇದೀಗ ರಶ್ಮಿಕಾ ಮಂದಣ್ಣ ಜಿಯೋ ವರ್ಲ್ಡ್​ ಪ್ಲಾಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಮಾತ್ರವಲ್ಲದೆ, ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ.

ಜಿಯೋ ವರ್ಲ್ಡ್​ ಪ್ಲಾಜಾ

ರಶ್ಮಿಕಾ ಮಂದಣ್ಣ, ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ ಜಿಯೋ ವರ್ಲ್ಡ್​ ಪ್ಲಾಜಾನಲ್ಲಿ ಬಣ್ಣ-ಬಣ್ಣದ ಬಟ್ಟೆ ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. 

ಫ್ಯಾಷನ್ ಶೋ

ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅವರುಗಳು ಭಾರತದ ಜನಪ್ರಿಯ ಫ್ಯಾಷನ್ ಡಿಸೈನರ್​ಗಳಾದ ಫಲ್ಗುಣಿ ಹಾಗೂ ಶೇನ್ ಪೀಕಾಕ್ ಅವರುಗಳು ವಿನ್ಯಾಸ ಮಾಡಿರುವ ಬಟ್ಟೆಗಳನ್ನು ಧರಿಸಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.

ಶೇನ್ ಪೀಕಾಕ್

ಹೊಳೆಯುವ ವಸ್ತುಗಳಿಂದ ಮಾಡಿದ ಗ್ಲಾಮರಸ್ ಉಡುಗೆಯನ್ನು ರಶ್ಮಿಕಾ ಮಂದಣ್ಣ ಉಟ್ಟಿದ್ದರು. ತಮ್ಮ ಗ್ಲಾಮರಸ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಸಹ ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ. 

ಗ್ಲಾಮರಸ್ ಉಡುಗೆ

ಇನ್ನು ನಟ ಅರ್ಜುನ್ ಕಪೂರ್ ಸಹ ರಶ್ಮಿಕಾರ ಉಡುಪಿಗೆ ಹೋಲುವಂಥಹಾ ಸೂಟ್ ಅನ್ನು ಧರಿಸಿದ್ದಾರೆ. ಸೂಟ್​ನ ಮೇಲೆ ವಿಧವಿಧವಾದ ಡಿಸೈನ್​ಗಳು ಸಹ ಇವೆ.

ಅರ್ಜುನ್ ಕಪೂರ್

ರಶ್ಮಿಕಾ ಮಂದಣ್ಣ ಬಾಲಿವುಡ್​ನಲ್ಲೇ ನೆಲೆಗೊಳ್ಳುವ ಪ್ರಯತ್ನದಲ್ಲಿದ್ದು, ಒಂದರ ಹಿಂದೊಂದರಂತೆ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಬಾಲಿವುಡ್​ ಸಿನಿಮಾ

ಬರೀ ಜಾಕೆಟ್ ಮಾತ್ರ ಧರಿಸಿ ಫೋಟೊಕ್ಕೆ ಫೋಸು ಕೊಟ್ಟ ಸನ್ನಿ ಲಿಯೋನಿ