ರಶ್ಮಿಕಾ ಮಂದಣ್ಣಗೆ ಯಾವ ರೀತಿಯ ಸಿನಿಮಾಗಳಲ್ಲಿ ನಟಿಸಲು ಇಷ್ಟ? ಅವರೇ ಹೇಳಿದ್ದಾರೆ...

03 Mar 2024

Author : Manjunatha

ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ. ಕನ್ನಡ, ತೆಲುಗು, ತಮಿಳಿನ ಬಳಿಕ ಈಗ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ.

ಪ್ಯಾನ್ ಇಂಡಿಯಾ ನಟಿ

ರಶ್ಮಿಕಾ ತಮ್ಮ ವೃತ್ತಿ ಜೀವನದಲ್ಲಿ ಬಹುತೇಕ ಸಿಕ್ಕಿರುವುದು ಬಬ್ಲಿ ಯುವತಿಯ ಪಾತ್ರ. ಹಾಡು, ಡ್ಯಾನ್ಸ್, ಒಂದೆರಡು ರೊಮ್ಯಾಂಟಿಕ್ ಸೀನ್​ಗಳಿಗಷ್ಟೆ ಸೀಮಿತವಾದ ಪಾತ್ರಗಳೇ ಹೆಚ್ಚು.

ಬಬ್ಲಿ ಯುವತಿಯ ಪಾತ್ರ

ಇತ್ತೀಚೆಗೆ ತುಸು ಭಿನ್ನವಾದ ಪಾತ್ರಗಳು ರಶ್ಮಿಕಾಗೆ ಸಿಗುತ್ತಿವೆ. ‘ಪುಷ್ಪ’, ‘ಮಿಷನ್ ಮಜ್ನು’, ‘ಗುಡ್ ಬೈ’, ‘ಅನಿಮಲ್’ ಸಿನಿಮಾಗಳಲ್ಲಿ ಭಿನ್ನವಾದ ಪಾತ್ರಗಳಿದ್ದವು.

ಭಿನ್ನವಾದ ಪಾತ್ರಗಳು

ಈಗ ರಶ್ಮಿಕಾ ನಟಿಸುತ್ತಿರುವ ‘ಗರ್ಲ್​ಫ್ರೆಂಡ್’ ಸಿನಿಮಾದಲ್ಲಿ ಅವರದ್ದೇ ಪ್ರಧಾನ ಪಾತ್ರ. ‘ರೇನ್​ಬೋ’ ಸಿನಿಮಾದ ಪಾತ್ರವೂ ಭಿನ್ನವಾಗಿದೆ.

‘ಗರ್ಲ್​ಫ್ರೆಂಡ್’ ಸಿನಿಮಾ

ನಾನು ಇಂಥಹಾ ಪಾತ್ರದಲ್ಲಿ ನಟಿಸಬೇಕು, ಇಂಥಹಾ ಜಾನರ್​ನ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆಯೂ ಇದೆಯಂತೆ. ಆ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ಎಂಥಹಾ ಪಾತ್ರ ಇಷ್ಟ

ರಶ್ಮಿಕಾ ಮಂದಣ್ಣ ಸಂಪೂರ್ಣ ರೊಮ್ಯಾಂಟಿಕ್ ಜಾನರ್​ನ ಸಿನಿಮಾಗಳಲ್ಲಿ ನಟಿಸಲು ಬಹಳ ಇಷ್ಟವಂತೆ. ಅಂಥಹಾ ಪಾತ್ರಗಳು ಸಿಗಲೆಂದು ಕೋರಿಕೊಳ್ಳುತ್ತಿದ್ದಾರಂತೆ.

ರೊಮ್ಯಾಂಟಿಕ್ ಜಾನರ್

ತೆಲುಗಿನಲ್ಲಿ ಬಿಡುಗಡೆ ಆಗಿದ್ದ ‘ಸೀತಾ-ರಾಮಂ’ ರೀತಿಯ ಸಿನಿಮಾಗಳಲ್ಲಿ ನಟಿಸಲು ರಶ್ಮಿಕಾ ಮಂದಣ್ಣಗೆ ಬಹಳ ಇಷ್ಟವಂತೆ.

‘ಸೀತಾ-ರಾಮಂ’ ಸಿನಿಮಾ

ಸದ್ಯಕ್ಕೆ ರಶ್ಮಿಕಾ ಮಂದಣ್ಣ ಬಳಿ ಆರು ಸಿನಿಮಾಗಳಿವೆ. ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

ಆರು ಸಿನಿಮಾ ಕೈಯಲ್ಲಿವೆ

ರಶ್ಮಿಕಾ ಪ್ರಸ್ತುತ ಜಪಾನ್​ನಲ್ಲಿದ್ದು ಸಿನಿಮಾ ಕಾರ್ಯಕ್ರಮ ಹಾಗೂ ಚಿತ್ರೀಕರಣಕ್ಕಾಗಿ ಅವರು ಜಪಾನ್​ಗೆ ತೆರಳಿದ್ದಾರೆ.

ಜಪಾನ್​ ರಶ್ಮಿಕಾ ಮಂದಣ್ಣ

ಈ ನಟಿ ಯಾರೆಂದು ಗುರುತಿಸಬಲ್ಲಿರಾ? ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಬಹಳ ಚೆನ್ನಾಗಿ ಪರಿಚಯ ಇರುವ ನಟಿಯೇ