ಭರತನಾಟ್ಯ ನೃತ್ಯ ಪ್ರದರ್ಶನ ನೀಡುತ್ತಿರುವ ಈ ನಟಿ ಯಾರೆಂದು ಗುರುತಿಸಬಲ್ಲಿರಾ? ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಬಹಳ ಪರಿಚಯ.

02 Mar 2024

Author : Manjunatha

ಗೋದಾ ದೇವಿ ವೇಷದಲ್ಲಿ ನಾಟ್ಯ ಪ್ರದರ್ಶನ ನೀಡುತ್ತಿರುವ ಈ ನಟಿ, ಕರ್ನಾಟಕದವರೇ, ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಗೋದಾ ದೇವಿ

ಸುಂದರ ನೃತ್ಯ ರೂಪಕ ಪ್ರದರ್ಶಿಸಿರುವ ಈ ನಟಿ ಶ್ರೀಲೀಲಾ. ಇತ್ತೀಚೆಗೆ ಹೈದರಾಬಾದ್​ನಲ್ಲಿ ನಡೆದ ಸಮತಾ ಕುಂಬ್ ಕಾರ್ಯಕ್ರಮದಲ್ಲಿ ನಾಟ್ಯ ಪ್ರದರ್ಶನ ನೀಡಿದರು.

ಯಾರು ಈ ನಟಿ?

ಶ್ರೀಲೀಲಾ ಬಹಳ ಒಳ್ಳೆಯ ನಾಟ್ಯ ಪಟು. ಎಳವೆಯಲ್ಲಿಯೇ ಭರತನಾಟ್ಯವನ್ನು ಕಲಿತಿದ್ದಾರೆ. ನಟಿಯಾಗುವ ಮುನ್ನ ಹಲವು ನಾಟ್ಯ ಪ್ರದರ್ಶನಗಳನ್ನು ನೀಡಿದ್ದಾರೆ.

ಭರತನಾಟ್ಯ ಕಲಿತಿದ್ದಾರೆ

ಶ್ರೀಲೀಲಾ ಬಹಳ ಒಳ್ಳೆಯ ಡ್ಯಾನ್ಸರ್ ಆಗಿ ತೆಲುಗು ಚಿತ್ರರಂಗದಲ್ಲಿ ಪರಿಚಿತರು, ಅವರ ಡ್ಯಾನ್ಸ್​ಗೆ ದೊಡ್ಡ ಅಭಿಮಾನಿ ವರ್ಗವಿದೆ. ಒಳ್ಳೆಯ ನೃತ್ಯಪಟು ಆಗಿರುವ ಕಾರಣದಿಂದ ಬೇರೆ ನೃತ್ಯಪ್ರಾಕಾರಗಳು ಶ್ರೀಲೀಲಾಗೆ ನೀರು ಕುಡಿದಂತೆ.

ಒಳ್ಳೆ ಡ್ಯಾನ್ಸರ್ ಶ್ರೀಲೀಲಾ

ಹೈದರಾಬಾದ್​ನ ಸಮತಾ ಕುಂಬ್ ಕಾರ್ಯಕ್ರಮದಲ್ಲಿ ಶ್ರೀಲೀಲಾ ನೀಡಿದ ನಾಟ್ಯ ಪ್ರದರ್ಶನದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಭರಪೂರ ಮೆಚ್ಚುಗೆ ಗಳಿಸುತ್ತಿವೆ.

ವಿಡಿಯೋಗಳು ವೈರಲ್

ಶ್ರೀಲೀಲಾ ಒಳ್ಳೆಯ ಭರತನಾಟ್ಯ ಪಟುವಾಗಿರುವ ಜೊತೆಗೆ ಅವರು ಕೂಚುಪುಡಿ ನೃತ್ಯ ಪ್ರಾಕಾರವನ್ನು ಸಹ ಕಲಿತಿದ್ದಾರೆ. ಒಳ್ಳೆಯ ಕುಚುಪುಡಿ ನೃತ್ಯ ಮಾಡಬಲ್ಲರು.

ಕೂಚುಪುಡಿ ನೃತ್ಯ ಬಲ್ಲರು

ಶ್ರೀಲೀಲಾ ಹಲವು ಪ್ರತಿಭೆಗಳನ್ನು ಹೊಂದಿರುವ ನಟಿ. ನೃತ್ಯದ ಜೊತೆಗೆ ಸಂಗೀತವನ್ನು ಕಲಿತಿರುವ ಶ್ರೀಲೀಲಾ. ವೀಣೆಯನ್ನು ಬಹು ಸುಂದರವಾಗಿ ನುಡಿಸಬಲ್ಲರು.

ವೀಣೆ ನುಡಿಸಬಲ್ಲರು

ಶ್ರೀಲೀಲಾ ಬಹಳ ಒಳ್ಳೆಯ ಕ್ರೀಡಾಪಟು ಸಹ. ಹಾಕಿ ಮತ್ತು ಈಜು ಸ್ಪರ್ಧೆಗಳಲ್ಲಿ ರಾಜ್ಯವನ್ನು ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಬಹುಮಾನಗಳನ್ನು ಸಹ ಗೆದ್ದಿದ್ದಾರೆ.

ಒಳ್ಳೆಯ ಕ್ರೀಡಾಪಟು ಸಹ

ಇದೆಲ್ಲದರ ಜೊತೆಗೆ ಶ್ರೀಲೀಲಾ ಬಹಳ ಒಳ್ಳೆಯ ವಿದ್ಯಾರ್ಥಿನಿ ಸಹ. ಸಿನಿಮಾಗಳಲ್ಲಿ ನಟಿಸುತ್ತಲೇ ಎಂಬಿಬಿಎಸ್ ಸಹ ಕಲಿಯುತ್ತಿದ್ದಾರೆ. ತಮ್ಮ ಕೊನೆಯ ವರ್ಷದ ಕಲಿಕೆಯಲ್ಲಿದ್ದಾರೆ ಶ್ರೀಲೀಲಾ.

ಎಂಬಿಬಿಎಸ್ ವಿದ್ಯಾರ್ಥಿನಿ

ಅಂಬಾನಿ ಮಗನ ಮದುವೆಗೆ ಬಂದ ಅಂತರಾಷ್ಟ್ರೀಯ ಪಾಪ್ ತಾರೆ ರಿಯಾನಾರ ಕೈಲಿದ್ದ ಬ್ಯಾಗಿನ ಬೆಲೆ ಎಷ್ಟು?