ಅಕ್ಷಯ್ ಕುಮಾರ್ ಜೊತೆ ನಟಿಸಲಿರುವ ‘ಸೂರ್ಯಕಾಂತಿ’ ನಟಿ

26 Mar 2025

By:  Manjunatha

ಕನ್ನಡದ ‘ಸೂರ್ಯಕಾಂತಿ’ ಸಿನಿಮಾದಲ್ಲಿ ನಟಿಸಿದ್ದ ರೆಜಿನಾ ಕಸಾಂಡ್ರ ಈಗ ಪ್ಯಾನ್ ಇಂಡಿಯಾ ನಟಿ.

 ‘ಸೂರ್ಯಕಾಂತಿ’ ಸಿನಿಮಾ

ತಮಿಳುನಾಡು ಮೂಲದ ನಟಿ ರೆಜಿನಾ ಕಸಾಂಡ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ನಟಿಸಿದ್ದಾರೆ.

     ನಟಿ ರೆಜಿನಾ ಕಸಾಂಡ್ರ

ರೆಜಿನಾ ಕಸಾಂಡ್ರ ಸೌಂದರ್ಯ ಮತ್ತು ನಟನಾ ಪ್ರತಿಭೆ ಎರಡೂ ಇರುವ ಕೆಲವೇ ನಟಿಯರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.

ಸೌಂದರ್ಯ ನಟನಾ ಪ್ರತಿಭೆ

ರೆಜಿನಾ ಕಸಾಂಡ್ರ ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿದ್ದಾರೆ. ಆದರೆ ಸ್ಟಾರ್ ನಟರೊಡನೆ ತೆರೆ ಹಂಚಿಕೊಂಡಿದ್ದು ತುಸು ಕಡಿಮೆ.

 ಎರಡು ದಶಕಗಳಿಂದಲೂ

ಆದರೆ ಇದೀಗ ರೆಜಿನಾ ಕಸಾಂಡ್ರಗೆ ಬಾಲಿವುಡ್​ನಿಂದ ಬಹುದೊಡ್ಡ ಆಫರ್ ಒಂದು ಬಂದಿದೆ.

       ಬಾಲಿವುಡ್ ಆಫರ್

ಬಾಲಿವುಡ್​ನ ಸ್ಟಾರ್ ನಟ ಅಕ್ಷಯ್ ಕುಮಾರ್ ಜೊತೆಗೆ ಸಿನಿಮಾದಲ್ಲಿ ನಟಿಸಲಿದ್ದಾರೆ ರೆಜಿನಾ ಕಸಾಂಡ್ರ.

  ಅಕ್ಷಯ್ ಕುಮಾರ್ ಜೊತೆ

ಅಕ್ಷಯ್ ಕುಮಾರ್​ರ ಸೂಪರ್ ಹಿಟ್ ‘ಕೇಸರಿ’ ಸಿನಿಮಾದ ಎರಡನೇ ಭಾಗ ನಿರ್ಮಾಣವಾಗುತ್ತಿದ್ದು, ಅದರಲ್ಲಿ ರೆಜಿನಾ ನಟಿಸುತ್ತಿದ್ದಾರೆ.

        ‘ಕೇಸರಿ’ ಸಿನಿಮಾದ

‘ಕೇಸರಿ2’ ಸಿನಿಮಾದ ಚಿತ್ರೀಕರಣ ಶೀಘ್ರವೇ ಆರಂಭವಾಗಲಿದ್ದು, ರೆಜಿನಾ ಜೊತೆ ಇನ್ನೊಬ್ಬ ನಟಿಯೂ ಇರಲಿದ್ದಾರೆ.

ಇನ್ನೊಬ್ಬ ನಟಿ ಇರಲಿದ್ದಾರೆ

ರೆಜಿನಾ ಕೈಯಲ್ಲಿ ಇದೀಗ ಬರೋಬ್ಬರಿ ಎಂಟು ಸಿನಿಮಾಗಳಿವೆ. ಅವುಗಳಲ್ಲಿ ಒಂದು ಹಿಂದಿ ಸಿನಿಮಾ ‘ಜಾಟ್’

     ಎಂಟು ಸಿನಿಮಾಗಳಿವೆ