ಪೊಲೀಸ್ ವೇಷದಲ್ಲಿ ಬಂದ ರೂಪೇಶ್ ಶೆಟ್ಟಿ, ಸಿನಿಮಾ ಯಾವುದು?

26 NOV 2023

ಬಿಗ್​ಬಾಸ್ ಗೆದ್ದು ಸಖತ್ ಜನಪ್ರಿಯವಾದ ರೂಪೇಶ್ ಶೆಟ್ಟಿ, ಅದಾದ ಬಳಿಕ, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಬಿಗ್​ಬಾಸ್ ವಿಜೇತ

ಬಿಗ್​ಬಾಸ್ ಗೆದ್ದ ಬಳಿಕ ‘ಸರ್ಕಸ್’ ಹೆಸರಿನ ತುಳು ಸಿನಿಮಾ ಮಾಡಿ ಭರ್ಜರಿ ಗೆಲುವು ಸಹ ಸಾಧಿಸಿದರು.

‘ಸರ್ಕಸ್’ ಸಿನಿಮಾ

ಅದಾದ ಬಳಿಕ ವಿಶ್ವಕಪ್ ಕ್ರಿಕೆಟ್​ನ ಕನ್ನಡ ನಿರೂಪಕರಾಗಿಯೂ ಸ್ಟಾರ್ ಚಾನೆಲ್​ಗೆ ಕೆಲಸ ನಿರ್ವಹಿಸಿದರು.

ವಿಶ್ವಕಪ್ ಕ್ರಿಕೆಟ್

ಇದೀಗ ರೂಪೇಶ್ ಶೆಟ್ಟಿ ಹೊಸ ಅವತಾರವೆತ್ತಿದ್ದಾರೆ. ಪೊಲೀಸ್ ಅಧಿಕಾರಿ ವೇಷದಲ್ಲಿ ರೂಪೇಶ್ ಕಾಣಿಸಿಕೊಂಡಿದ್ದಾರೆ.

ಪೊಲೀಸ್ ಅಧಿಕಾರಿ

ರೂಪೇಶ್ ಶೆಟ್ಟಿ ಪ್ರಸ್ತುತ ‘ಅಧಿಪತ್ರ’ ಹೆಸರಿನ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಪೊಲೀಸ್ ಪಾತ್ರ.

‘ಅಧಿಪತ್ರ’ ಸಿನಿಮಾ

‘ಅಧಿಪತ್ರ’ ಸಿನಿಮಾದಲ್ಲಿ ರೂಪೇಶ್ ಶೆಟ್ಟಿಯ ಹೆಸರು ಅತ್ರೇಯ. ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರೂಪೇಶ್ ಕಾಣಿಸಿಕೊಂಡಿದ್ದಾರೆ.

ರೂಪೇಶ್ ಶೆಟ್ಟಿ

ರೂಪೇಶ್ ಶೆಟ್ಟಿ ಈವರೆಗೆ ಆರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಂಟು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

ತುಳು ಸಿನಿಮಾ

ಬಿಗ್​ಬಾಸ್ ಗೆದ್ದಿರುವ ರೂಪೇಶ್ ಶೆಟ್ಟಿಗೆ ಸಿನಿಮಾ ರಂಗದಲ್ಲಿಯೇ ಮಿಂಚಬೇಕು ಎಂಬ ಅದಮ್ಯ ಆಸೆಯಿದೆ. ಅದೇ ಗುರಿಯತ್ತ ಹೆಜ್ಜೆ ಇಡುತ್ತಿದ್ದಾರೆ ರೂಪೇಶ್.

ಸಿನಿಮಾ ರಂಗ

ಬಾಡಿಕಾನ್ ಡ್ರೆಸ್​ನಲ್ಲಿ ಮಿಂಚಿತ ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ