ತಮಿಳಿನ ಬಳಿಕ ತೆಲುಗಿಗೆ ಪಯಣ, ಶ್ರೀಲೀಲಾ ಜಾಗಕ್ಕೆ ರುಕ್ಮಿಣಿ ವಸಂತ್, ವಿಜಯ್ ದೇವರಕೊಂಡಗೆ ನಾಯಕಿ?

23 Jan 2024

Author : Manjunatha

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ನಾಯಕಿ ರುಕ್ಮಿಣಿ ವಸಂತ್ ನಟನೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.

ಸಪ್ತ ಸಾಗರದಾಚೆ ಎಲ್ಲೋ

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಬಳಿಕ ಪರಭಾಷೆಗಳಿಂದಲೂ ರುಕ್ಮಿಣಿ ವಸಂತ್​ಗೆ ಅವಕಾಶಗಳು ಸಿಗುತ್ತಿವೆ.

ಪರಭಾಷೆಗಳಿಂದ ಅವಕಾಶ

ಈಗಾಗಲೇ ವಿಜಯ್ ಸೇತುಪತಿ ಜೊತೆಗೆ ತಮಿಳು ಸಿನಿಮಾ ಒಂದರಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ.

ವಿಜಯ್ ಸೇತುಪತಿ ಜೊತೆ

ರುಕ್ಮಿಣಿ ವಸಂತ್​ಗೆ ಈಗ ತೆಲುಗು ಚಿತ್ರರಂಗದಿಂದಲೂ ಬುಲಾವ್ ಬಂದಿದೆ ಎನ್ನಲಾಗುತ್ತಿದೆ. ಅದರಲ್ಲಿಯೂ ಸ್ಟಾರ್ ನಟ ವಿಜಯ್ ದೇವರಕೊಂಡ ಸಿನಿಮಾದಲ್ಲಿ.

ಟಾಲಿವುಡ್​ ಬುಲಾವ್

ವಿಜಯ್​ರ 12ನೇ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದರು, ಆದರೆ ಅವರನ್ನು ಇತರೆ ಕಾರಣಗಳಿಂದ ಶ್ರೀಲೀಲಾರನ್ನು ಕೈಬಿಡಲಾಗಿದೆ.

ಶ್ರೀಲೀಲಾರ ಕೈಬಿಡಲಾಗಿದೆ

ತೆರವಾಗಿರುವ ನಾಯಕಿ ಪಾತ್ರಕ್ಕೆ ರುಕ್ಮಿಣಿ ವಸಂತ್ ಅವರಿಗೆ ಬುಲಾವ್ ಬಂದಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಗೂಢಚಾರಿ ಪಾತ್ರ ಅವರದ್ದಂತೆ.

ನಾಯಕಿ ಪಾತ್ರಕ್ಕೆ ರುಕ್ಮಿಣಿ

ರುಕ್ಮಿಣಿ ವಸಂತ್ ಅಥವಾ ಬಾಲಿವುಡ್ ನಟಿ ತೃಪ್ತಿ ದಿಮ್ರಿ ಅವರಲ್ಲಿ ಒಬ್ಬರನ್ನು ಚಿತ್ರತಂಡ ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರಂತೆ.

ನಟಿ ತೃಪ್ತಿ ದಿಮ್ರಿ

ಒಂದೊಮ್ಮೆ ರುಕ್ಮಿಣಿ ವಸಂತ್ ಆಯ್ಕೆ ಆದರೆ ಅವರಿಗೆ ಇದು ಮೊದಲ ತೆಲುಗು ಸಿನಿಮಾ ಆಗಲಿದೆ.

ಮೊದಲ ತೆಲುಗು ಸಿನಿಮಾ

ಏನಿದು ಬಾಲಿವುಡ್ ನಟಿಯರ ಮೆಚ್ಚಿನ ‘ಬುಲೆಟ್ ಪ್ರೂಫ್ ಕಾಫಿ’? ಮಾಡುವುದು ಹೇಗೆ?